ಹೊಸದುರ್ಗ
ನಾಕೀಕೆರೆ ಕೋಡಿ ಆಲದ ಕೆಂಚಾಂಬಿಕಾ ದೇವಿ ಕಾರ್ತೀಕ ಮಹೋತ್ಸವ | ಹೋಳಿಗೆ ಅನ್ನ ಸಂತರ್ಪಣೆ
CHITRADURGA NEWS | 23 DECEMBER 2024
ಹೊಸದುರ್ಗ: ತಾಲೂಕು ನಾಕೀಕೆರೆ ಗ್ರಾಮದ ಶ್ರೀ ಕೋಡಿ ಆಲದ ಕೆಂಚಾಂಬಿಕಾ ದೇವಿಯ ಕಾರ್ತಿಕ ಮಹೋತ್ಸವ ಡಿ.24 ಮಂಗಳವಾರ ನಡೆಯಲಿದೆ.
ಕ್ಲಿಕ್ ಮಾಡಿ ಓದಿ: ಕಿಚ್ಚನ ಜೊತೆ ಕಾರಲ್ಲಿ ಕುಳಿತ ಡಾಲಿಗೆ ಅಚ್ಚರಿ
ಡಿ.23 ಸೋಮವಾರ ರಾತ್ರಿ 10.30 ರಿಂದ ಶ್ರೀ ದೇವಿಯ ಪಾರಾಯಣ ನಡೆಯುತ್ತದೆ. ಡಿ.24 ಮಂಗಳವಾರ ಬೆಳಗ್ಗೆ 5.30ಕ್ಕೆ ಶ್ರೀ ಕೋಡಿ ಆಲದ ಕೆಂಚಾಂಬಿಕಾ ದೇವಿಗೆ ಅಭಿಷೇಕ ನಡೆಯುವುದು. ಬೆಳಗ್ಗೆ 9.30ಕ್ಕೆ ಕಾರ್ತಿಕ ಮಹೋತ್ಸವ ನಡೆಯಲಿದ್ದು, 10.30 ರಿಂದ ಹೋಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ.
ಕ್ಲಿಕ್ ಮಾಡಿ ಓದಿ: ಚಿತ್ರದುರ್ಗ ಇಲ್ಲ ಅಂದ್ರೆ ಹುಚ್ಚ ಸಿನಿಮಾ ಇಲ್ಲ | ಕಿಚ್ಚ
ಈ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಶಾಸಕರಾದ ಬಿ.ಜಿ.ಗೋವಿಂದಪ್ಪ, ಎಂ.ಚಂದ್ರಪ್ಪ, ಕೆ.ಎಸ್.ನವೀನ್, ಸಂಸದರಾದ ಗೋವಿಂದ ಎಂ.ಕಾರಜೋಳ, ಮಾಜಿ ಸಚಿವರಾದ ಎಚ್.ಆಂಜನೇಯ, ಗೂಳಿಹಟ್ಟಿ ಡಿ.ಶೇಖರ್, ಮುಖಂಡರಾದ ಎಸ್.ಲಿಂಗಮೂರ್ತಿ, ಡಿ.ಗುರುಸ್ವಾಮಿ, ಪಿ.ಹನುಮಂತಪ್ಪ ಬಿ.ಎಸ್.ದ್ಯಾಮಪ್ಪ, ಶಿಮುಲ್ ನಿರ್ದೇಶಕ ಬಿ.ಆರ್.ರವಿಕುಮಾರ್ ಮತ್ತಿತರರು ಭಾಗವಹಿಸುವರು.