ಹೊಸದುರ್ಗ
ನಾಕೀಕೆರೆ ಗ್ರಾಮದಲ್ಲಿ ವಿಜೃಂಭಣೆಯ ಕೆಂಚಾಂಬಿಕಾ ದೇವಿಯ ಕಾರ್ತಿಕ ಮಹೋತ್ಸವ | ಮೂರು ಕ್ವಿಂಟಾಲ್ ಬೇಳೆಯ ಹೋಳಿಗೆ ತಯಾರಿ
CHITRADURGA NEWS | 24 DECEMBER 2024
ಹೊಸದುರ್ಗ: ತಾಲೂಕಿನ ನಾಕೀಕೆರೆ ಗ್ರಾಮದ ಶ್ರೀ ಕೋಡಿ ಆಲದ ಕೆಂಚಾಂಬಿಕಾ ದೇವಿಯ ಕಾರ್ತಿಕ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.
ಕ್ಲಿಕ್ ಮಾಡಿ ಓದಿ: ಹಾಸ್ಟೇಲ್ ವಾರ್ಡನ್ ಅಮಾನತು | ಜಿ.ಪಂ. ಸಿಇಓ ಸೋಮಶೇಖರ್ ಆದೇಶ
ಸೋಮವಾರ ರಾತ್ರಿ ಶ್ರೀ ದೇವಿ ಪಾರಾಯಣ, ಬೆಳಗ್ಗೆ ಶ್ರೀ ಕೆಂಚಾಂಬಿಕಾ ದೇವಿಗೆ ಅಭಿಷೇಕ ನೆರವೇರಿಸಲಾಯಿತು. ಮಂಗಳವಾರ ಬೆಳಗ್ಗೆ ಮಹಾ ಮಂಗಳಾರತಿ ನಂತರ ಬೆಳಗ್ಗೆ 11 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಿರಂತರವಾಗಿ ಹೋಳಿಗೆ, ಅನ್ನ ದಾಸೋಹ ಕಾರ್ಯಕ್ರಮ ನೆರವೇರಿತು.
ನಾಕೀಕೆರೆ, ಹೊಳಲ್ಕೆರೆ ತಾಲೂಕಿನ ಬೂದಿಪುರ, ಹಾಲೇನಹಳ್ಳಿ, ಗೂಳಿಹೊಸಹಳ್ಳಿ, ಡಿ.ಕೆ.ಹಳ್ಳಿ ಸೇರಿದಂತೆ ಸುತ್ತಮುತ್ತಲ ಹತ್ತಾರು ಹಳ್ಳಿಗಳ ಸಹಸ್ರಾರು ಭಜ್ತಾದಿಗಳು ಕಾರ್ತಿಕ ಮಹೋತ್ಸವದಲ್ಲಿ ಭಾಗವಹಿಸಿದ್ದರು.
ಕ್ಲಿಕ್ ಮಾಡಿ ಓದಿ: ಕನಕ ವೃತ್ತದಿಂದ ಚಳ್ಳಕೆರೆ ಗೇಟ್ ವರೆಗೆ ರಸ್ತೆ ಅಗಲೀಕರಣ | ಡಿಸಿ ವೆಂಕಟೇಶ್
ಕಾರ್ಯಕ್ರಮದಲ್ಲಿ ಶಾಸಕ ಬಿ.ಜಿ.ಗೋವಿಂದಪ್ಪ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಖನಿಜ ನಿಗಮದ ಮಾಜಿ ಅಧ್ಯಕ್ಷ ಎಸ್.ಲಿಂಗಮೂರ್ತಿ, ಮುಖಂಡರಾದ ಡಿ.ಗುರುಸ್ವಾಮಿ, ದೊಡ್ಡಘಟ್ಟ ದ್ಯಾಮಣ್ಣ, ಲಕ್ಕಿಹಳ್ಳಿ ಮುದ್ದಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಭಾಗವಹಿಸಿದ್ದರು.
ರಾತ್ರಿಯಿಡೀ ಹೋಳಿಗೆ ತಯಾರಿ:
ನಾಕೀಕೆರೆ, ಹಾಲೇನಹಳ್ಳಿ ಹಾಗೂ ಬೂದಿಪುರ ಗ್ರಾಮದ ನೂರಾರು ಮಹಿಳೆಯರು ಸೋಮವಾರ ಇಡೀ ರಾತ್ರಿ ಮೂರು ಕ್ವಿಂಟಾಲ್ ಬೇಳೆಯ ಹೋಳಿಗೆ ತಯಾರಿಸಿದರು.
ಸಾವಿರಾರು ಹೋಳಿಗೆ ಹಾಗೂ ಅನ್ನ ಸಂತರ್ಪಣೆ ಇಡೀ ದಿನ ನಡೆಯಿತು.