ಹೊಳಲ್ಕೆರೆ
Kanaka jayanti: ತಾಳಿಕಟ್ಟೆ ಗ್ರಾಮದಲ್ಲಿ ಕನಕ ಜಯಂತಿ, ಕನ್ನಡ ರಾಜ್ಯೋತ್ಸವ ಆಚರಣೆ | ಶಾಸಕ ಚಂದ್ರಪ್ಪ, ಈಶ್ವರಾನಂದಪುರಿ ಸ್ವಾಮೀಜಿ ಭಾಗೀ
CHITRADURGA NEWS | 01 DECEMBER 2024
ಹೊಳಲ್ಕೆರೆ: ತಾಳಿಕಟ್ಟೆ ಗ್ರಾಮದಲ್ಲಿ ಆಯೋಜಿಸಿದ್ದ 537 ನೇ ಕನಕ ಜಯಂತಿ(Kanaka jayanti) ಹಾಗೂ ಕನ್ನಡ ರಾಜ್ಯೋತ್ಸವ ಆಚರಣೆ ಕಾರ್ಯಕ್ರಮವನ್ನು ಶಾಸಕ ಎಂ. ಚಂದ್ರಪ್ಪ ಹಾಗೂ ಕಾಗಿನೆಲೆ ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ ಉದ್ಘಾಟಿಸಿದರು.
ಕ್ಲಿಕ್ ಮಾಡಿ ಓದಿ: ಆಕಾಶವಾಣಿ ಕೇಂದ್ರದಲ್ಲಿ ಕನ್ನಡ ರಾಜ್ಯೋತ್ಸವ | ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ
ಇದೇ ವೇಳೆ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, ಹಾಲು ಕೆಟ್ಟರು ಕೆಡಬಹುದು. ಹಾಲು ಮತಸ್ಥರು ಎಂದಿಗೂ ಕೆಡುವುದಿಲ್ಲ. ಹಾಲು ಮತ ಧರ್ಮಕ್ಕೆ ಅಂತಹ ಶ್ರೇಷ್ಟತೆಯಿದೆ. ಕನಕ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಬೇಕು.
ಡಿ.ಜೆ. ಹಾಕಿಕೊಂಡು ಕುಣಿಯುವುದು, ಮದ್ಯಪಾನ ಸೇವಿಸುವುದು ನಿಜವಾಗಿಯೂ ಕನಕದಾಸರಿಗೆ ಎಸಗುವ ಅಪಚಾರ ಎಂದು ತಾಳಿಕಟ್ಟೆ ಗ್ರಾಮದ ಯುವ ಜನಾಂಗವನ್ನು ಎಚ್ಚರಿಸಿದರು.
600 ವರ್ಷಗಳ ಹಿಂದೆಯೇ ಸಮಾನತೆಯ ಸಂದೇಶ ಸಾರಿದ ಸಂತ ಶ್ರೇಷ್ಟ ಭಕ್ತ ಕನಕದಾಸರು ಕೀರ್ತನೆಯ ಮೂಲಕ ಜಾತಿ ಪದ್ದತಿಯನ್ನು ವಿರೋಧಿಸಿದರು, ಅಂತಹ ಮಹನೀಯರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕೆಂದು ಕರೆ ನೀಡಿದರು.
ಕ್ಲಿಕ್ ಮಾಡಿ ಓದಿ: ಭೀಮಸಮುದ್ರದಲ್ಲಿ ಜಿ.ಮಲ್ಲಿಕಾರ್ಜುನಪ್ಪ, ಶ್ರೀಮತಿ ಹಾಲಮ್ಮ ಪುಣ್ಯತಿಥಿ
ಶಾಸಕ ಎಂ.ಚಂದ್ರಪ್ಪ ಮಾತನಾಡಿ, ಸಂತ ಶ್ರೇಷ್ಟ ಭಕ್ತ ಕನಕದಾಸನ ಭಕ್ತಿಗೆ ಮೆಚ್ಚಿ ಶ್ರೀಕೃಷ್ಣ ಪರಮಾತ್ಮ ದರ್ಶನ ನೀಡಿದ ಇತಿಹಾಸವಿದೆ. ಜಾತಿ ಪದ್ದತಿಯನ್ನು ಆರುನೂರು ವರ್ಷಗಳ ಹಿಂದೆಯೇ ವಿರೋಧಿಸಿದ ಕನಕದಾಸರ ಆಚಾರ ವಿಚಾರಗಳನ್ನು ಇಂದಿನ ಪೀಳಿಗೆ ತಿಳಿದುಕೊಳ್ಳಬೇಕು. ಕನಕ ಜಯಂತಿಯನ್ನು ಶ್ರದ್ದಾಭಕ್ತಿಯಿಂದ ಆಚರಿಸುವುದೇ ಅವರಿಗೆ ನೀಡುವ ಗೌರವ ಎಂದು ತಿಳಿಸಿದರು.
ಹಿರಿಯೂರಿನ ವಾಣಿವಿಲಾಸಸಾಗರದಿಂದ ನೀರು ತಂದು ಹೊಳಲ್ಕೆರೆ ತಾಲ್ಲೂಕಿನ ಪ್ರತಿ ಹಳ್ಳಿಗಳಲ್ಲಿ ಮನೆ ಮನೆಗೆ ಶುದ್ದ ಕುಡಿಯುವ ನೀರು ಪೂರೈಸಲು 367 ಕೋಟಿ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ ಎಂದು ಹೇಳಿದರು.
ರೇವಣ್ಣಯ್ಯ ಒಡೆಯರ್, ಗುರಯ್ಯ ಒಡೆಯರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಟಿ.ಬಸವರಾಜ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬಿ.ಗಂಗಾಧರ್, ಡಿ.ಸಿ.ಮೋಹನ್, ಕರಿಯಣ್ಣ, ನುಲೇನೂರು ಶೇಖರ್, ಲೋಕೇಶ್, ಚಂದ್ರಪ್ಪ, ಗೋವಿಂದಪ್ಪ, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ತಾಳಿಕಟ್ಟೆ ಗ್ರಾಮಸ್ಥರು ಉಪಸ್ಥಿತರಿದ್ದರು.
ಕ್ಲಿಕ್ ಮಾಡಿ ಓದಿ: ಗ್ರಾಮ ಪಂಚಾಯತಿ ನೌಕರರ ಸಮಾವೇಶ | ಜಿಲ್ಲಾ ಪಂಚಾಯಿತಿ ಮುತ್ತಿಗೆಗೆ ನಿರ್ಧಾರ
ಈ ಸಂದರ್ಭದಲ್ಲಿ ತಾಳಿಕಟ್ಟೆ ಗ್ರಾಮದಿಂದ ದೊಗ್ಗನಾಳ್ ಗ್ರಾಮದವರೆಗೂ 10 ಕೋಟಿ ರೂ.ವೆಚ್ಚದಲ್ಲಿ ಡಾಂಬರ್ ರಸ್ತೆ ಕಾಮಗಾರಿಗೆ ಹಾಗೂ ತಾಳಿಕಟ್ಟೆ ಗ್ರಾಮದಲ್ಲಿ 2.60 ಲಕ್ಷ ರೂ.ವೆಚ್ಚದ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಮನೆ ಮನೆಗೆ ಕುಡಿಯುವ ನೀರು ಪೂರೈಕೆ ಕಾಮಗಾರಿ ಉದ್ಘಾಟಿಸಿದರು.