ಹೊಳಲ್ಕೆರೆ
Kolalu: ಕೊಳಾಳು ಕೆಂಚಾವಧೂತರ ಕಾರ್ತಿಕ ಮಹೋತ್ಸವ | ಇಂದು ರಾತ್ರಿ 8 ರಿಂದ ಅಖಂಡ ಭಜನೆ
CHITRADURGA NEWS | 01 DECEMBER 2024
ಚಿತ್ರದುರ್ಗ: ಪವಾಡ ಪುರುಷ, ಅವಧೂತ ಪರಂಪರೆಯ ಕಾಯಕ ಯೋಗಿ ಶ್ರೀ ಕೊಳಾಳು ಕೆಂಚಾವಧೂತರ ಕಾರ್ತಿಕ ಮಹೋತ್ಸವ ಕಾರ್ಯಕ್ರಮ ಇಂದು ರಾತ್ರಿ 8 ಗಂಟೆಗೆ ನಡೆಯಲಿದೆ.
ಹೊಳಲ್ಕೆರೆ ತಾಲೂಕು ಕೊಳಾಳು(Kolalu) ಶ್ರೀ ಕೆಂಚಾವಧೂತರ ಮಠದಲ್ಲಿ ಡಿಸೆಂಬರ್ 1 ಭಾನುವಾರ ರಾತ್ರಿ 8 (ಇಂದು ರಾತ್ರಿ) ಗಂಟೆಗೆ ಕಾರ್ತಿಕ ಮಹೋತ್ಸವ ಪ್ರಾರಂಭವಾಗಲಿದೆ.
ಇದನ್ನೂ ಓದಿ: ಸಿಟಿ ಇನ್ಸ್ಟಿಟ್ಯೂಟ್(City club) ಚುನಾವಣೆ | ನಿರ್ದೇಶಕರ ಫಲಿತಾಂಶ ಪ್ರಕಟ
ಸಂಪ್ರದಾಯದಂತೆ ನಂದಾದೀಪ ನಂದಿ ಧ್ವಜ ಸಮ್ಮೇಳದೊಂದಿಗೆ ಒಳಮಠದಿಂದ ಹೊರಮಠಕ್ಕೆ ವಿಜೃಂಭಣೆಯಿಂದ ತೆರಳುವುದು. ಅಖಂಡ ಜ್ಯೋತಿ ಬೆಳಗಿಸಿದ ನಂತರ ದಾಸೋಹ, ಅಖಂಡ ಭಜನೆ ನಡೆಯಲಿದೆ.
ಸಮಸ್ತ ಭಕ್ತಾದಿಗಳು ಕಾರ್ತಿಕ ಮಹೋತ್ಸವ ಹಾಗೂ ದೀಪೋತ್ಸವದಲ್ಲಿ ಭಾಗವಹಿಸಲು ಶ್ರೀ ಕೆಂಚಾವಧೂತ ಗದ್ದುಗೆ ವಿಶ್ವಸ್ಥ ಸೇವಾ ಟ್ರಸ್ಟ್ ಮನವಿ ಮಾಡಿದೆ.