Connect with us

ಜ್ಞಾನಗಂಗೋತ್ರಿ ಪಿಜಿ ಸೆಂಟರ್ | ವಿದ್ಯಾರ್ಥಿಗಳ ಕ್ರೀಡಾಕೂಟ

Gnangangotri PG Center

ಮುಖ್ಯ ಸುದ್ದಿ

ಜ್ಞಾನಗಂಗೋತ್ರಿ ಪಿಜಿ ಸೆಂಟರ್ | ವಿದ್ಯಾರ್ಥಿಗಳ ಕ್ರೀಡಾಕೂಟ

CHITRADURGA NEWS | 18 JANUARY 2025

ಚಿತ್ರದುರ್ಗ: ತಾಲ್ಲೂಕಿನ ಜಿ.ಆರ್.ಹಳ್ಳಿಯ ದಾವಣಗೆರೆ ವಿಶ್ವವಿದ್ಯಾನಿಲಯ ಜ್ಞಾನಗಂಗೋತ್ರಿ ಸ್ನಾತಕೋತ್ತರ ಕೇಂದ್ರದಲ್ಲಿ ಸ್ವಾಮಿ ವಿವೇಕಾನಂದರ 162ನೇ ಜಯಂತಿ ಪ್ರಯುಕ್ತ ಕ್ರೀಡಾಕೂಟ ಆಯೋಜಿಸಲಾಗಿತ್ತು.

Also Read: ಶಿವಮೊಗ್ಗ ಚಿತ್ರದುರ್ಗ ನಡುವೆ ರೈಲು ಮಾರ್ಗ | ಬಿ.ವೈ.ರಾಘವೇಂದ್ರ ಪ್ರಸ್ತಾವನೆ

ದಾವಣಗೆರೆ ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಕೇಂದ್ರ ಜ್ಞಾನಗಂಗೋತ್ರಿಯ ಎನ್‍ಎಸ್‍ಎಸ್ ವಿಭಾಗ, ಚಿತ್ರದುರ್ಗ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ ಕ್ರೀಡೆಗಳನ್ನು ಏರ್ಪಡಿಸಲಾಗಿತ್ತು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಸುಚೇತ ಎಂ ನೆಲವಗಿ ಕ್ರೀಡಾಕೂಟ ಉದ್ಘಾಟಿಸಿ, ಕ್ರೀಡೆಯಿಂದ ವಿದ್ಯಾರ್ಥಿಗಳ ಜೀವನ ಯಾವ ರೀತಿಯಲ್ಲಿ ರೂಪಿಸಿಕೊಳ್ಳಬಹುದೆಂದು ಸ್ವಾಮಿ ವಿವೇಕಾನಂದರ ವಾಣಿಯ ಉದಾಹರಣೆಯೊಂದಿಗೆ ತಿಳಿಸಿದರು.

ವೈದ್ಯಕೀಯ ಮಹಾ ವಿದ್ಯಾನಿಲಯದ ಡಾ.ಸಚ್ಚಿದಾನಂದ ಮಾತನಾಡಿ, ಕ್ರೀಡೆಯನ್ನು ಕ್ರೀಡಾ ಮನೋಭಾವದಲ್ಲಿ ನೋಡಬೇಕು. ಸೋಲು-ಗೆಲವು ಮುಖ್ಯವಲ್ಲ ಎಂದು ತಿಳಿಸಿದರು.

Also Read: 114 ಕೋಟಿ ಅನುದಾನದಲ್ಲಿ 180 ಬೆಡ್ ಸಾಮರ್ಥ್ಯದ ನೂತನ ಆಸ್ಪತ್ರೆ ನಿರ್ಮಾಣ 

ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಸತ್ಯನಾರಾಯಣ ಮಾತನಾಡಿ, ನಮ್ಮ ಎಲ್ಲಾ ಒತ್ತಡಗಳು ಕ್ರೀಡೆಯಿಂದ ನಿವಾರಣೆಯಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಸುಚೇತ ಎಂ ನೆಲವಿಗೆ ಅವರು ನಮ್ಮ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಸುಮಾರು ರೂ. 50,000 ಗಳಷ್ಟು ಮೌಲ್ಯದಕ್ರೀಡಾ ಸಾಮಗ್ರಿಗಳನ್ನು ನೀಡಿರುವುದನ್ನ ಸ್ಮರಿಸಿ ಧನ್ಯವಾದ ತಿಳಿಸಿದರು.

ನಮ್ಮ ಎನ್‍ಎಸ್‍ಎಸ್‍ಘಟಕ-1 ಮತ್ತು 2ರ ಕಾರ್ಯಕ್ರಮಾಧಿಕಾರಿಗಳಾದ ಡಾ.ಸುಂದರಂ. ಎಂ ಮತ್ತು ನಿವೇದಿತ ಬಿ.ಟಿ ಅವರ ಕಾರ್ಯಗಳಿಗೆ ಶ್ಲಾಘನೆ ನೀಡಿದರು.

Also Read: ಮಾರುಕಟ್ಟೆ ಧಾರಣೆ | ಇಂದಿನ ಹತ್ತಿ ರೇಟ್ ಎಷ್ಟಿದೆ?

ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ಕೇಂದ್ರದ ಪ್ರಾಧ್ಯಾಪಕರಾದ ಡಾ.ರಾಜೇಂದ್ರ ಪ್ರಸಾದ್, ಡಾ.ಕೀರ್ತಿಕುಮಾರ್, ಡಾ.ಅರುಣ್‍ಕುಮಾರ್, ಡಾ.ಕುಮಾರ್, ಡಾ.ಗಿರೀಶ್, ಡಾ.ರೂಪೇಶ್ ಕುಮಾರ್, ಚಿತ್ರದುರ್ಗ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಪ್ರಾಧ್ಯಾಪಕರಾದ ಡಾ.ಪ್ರಕಾಶ್, ಡಾ. ಸಂಪತ್, ಡಾ.ಶಾಯರಿ, ಡಾ ಮುಬೀನ ಇದ್ದರು.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version