ಮುಖ್ಯ ಸುದ್ದಿ
ಸರ್ಕಾರವೇ ನಕ್ಸಲರಿಗೆ ಶರಣಾಗಿದ್ದು ದುರಾದೃಷ್ಟಕರ | ABVP ಜಿಲ್ಲಾ ಸಂಚಾಲಕ ಕನಕರಾಜ್
CHITRADURGA NEWS | 09 JANUARY 2024
ಚಿತ್ರದುರ್ಗ: ನಕ್ಸಲ್ ವಿಚಾರಧಾರೆ, ಚಳುವಳಿಗಳಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎನ್ನುವ ಅರಿವಾಗಿ ಶರಣಾಗುತ್ತಿರುವುದು ಸ್ವಾಗತಾರ್ಹ ಎಂದು ಎಬಿವಿಪಿ(ABVP) ಜಿಲ್ಲಾ ಸಂಚಾಲಕ ಕನಕರಾಜ್ ಕೋಡಿಹಳ್ಳಿ ಹೇಳಿದ್ದಾರೆ.
ಮಾನವೀಯತೆ ಹಾಗೂ ದೇಶದ ಅಭಿವೃದ್ಧಿಗೆ ಕಂಠಕವಾಗಿದ್ದ ನಕ್ಸಲ್‍ವಾದ ಕೇಂದ್ರ ಸರ್ಕಾರದ ಕಠಿಣ ಕ್ರಮಗಳಿಂದಾಗಿ ಮರೆಯಾಗುತ್ತಿರುವುದು ಸಂತಸದ ವಿಚಾರ ಎಂದಿದ್ದಾರೆ.
ಇದನ್ನೂ ಓದಿ: ವಾಣಿವಿಲಾಸ ಸಾಗರ ಜಲಾಶಯ ಇಂದಿನ ಮಟ್ಟ 129.90 ಅಡಿ
ಕರ್ನಾಟಕ ಸರ್ಕಾರಕ್ಕೆ ಶರಣಾಗಿರುವ 6 ನಕ್ಸಲರ ಮೇಲೆ 30-40 ಕ್ಕಿಂತ ಹೆಚ್ಚು ಪ್ರಕರಣಗಳಿವೆ. ತಮ್ಮ ಜೀವನದೂದ್ದಕ್ಕೂ ಕಾನೂನು ಬಾಹಿರ ಚಟುವಟಿಕೆ, ಹಲವು ದುಷ್ಕøತ್ಯಗಳಲ್ಲಿ ಭಾಗವಹಿಸಿ, ಜೀವನದ ಸಂಧ್ಯಾಕಾಲದಲ್ಲಿ ಶರಣಾಗುತ್ತಿರುವುದು ಖೇದಕರ.
ವಿಪರ್ಯಾಸವೆಂದರೆ ಕಾನೂನಿನ ಮೂಲಕ ಶರಣಾಗತಿ ಮಾಡಿಸಬೇಕಾಗಿದ್ದ ಸರ್ಕಾರ ತಾನೇ ನಕ್ಸಲರಿಗೆ ಶರಣಾಗುತ್ತಿರುವುದು ದುರಾದೃಷ್ಟಕರ.
ಇದನ್ನೂ ಓದಿ: ಚಿತ್ರದುರ್ಗ ಮಾರುಕಟ್ಟೆಯಲ್ಲಿ ಗುರುವಾರದ ಹತ್ತಿ ರೇಟ್ ಎಷ್ಟಿದೆ?
ತಮ್ಮ ತಪ್ಪುಗಳನ್ನು ತಿದ್ದಿಕೊಂಡು ಮತ್ತು ಮುಖ್ಯವಾಹಿನಿಗೆ ಬಂದು ಇತರಂತೆ ಬಾಳಲು ಅವಕಾಶವನ್ನು ಕೊಟ್ಟಿರುವ ಸರ್ಕಾರದ ಯೋಜನೆಯನ್ನು ದುರುಪಯೋಗ ಆಗುವುದಲ್ಲದೆ, ಮಾನವ ವಿರೋಧಿ ಮಾರ್ಗದಲ್ಲಿ ನಡೆಯುವವರಿಗೆ ಮತ್ತಷ್ಟು ಪೆÇ್ರೀತ್ಸಾಹ ನೀಡಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅಮಾಯಕ ಜನರ, ಪೆÇೀಲಿಸರ ಪ್ರಾಣವನ್ನು ತೆಗೆದಿರುವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಗೃಹ ಕಛೇರಿ ಕೃಷ್ಣದಲ್ಲಿ ಶರಣಾಗತಿಯನ್ನು ಮಾಡಿಸುತ್ತಿರುವುದು ಮತ್ತು ವೈಭವಕರಿಸುತ್ತಿರುವುದು ರಾಜ್ಯದ ಜನತೆಗೆ ಮತ್ತು ಮಾನವೀಯ ಸಮಾಜಕ್ಕೆ ಮಾಡುತ್ತಿರುವ ಅವಮಾನ ಎಂದು ಕನಕರಾಜ್ ತಿಳಿಸಿದ್ದಾರೆ.
ಇದನ್ನೂ ಓದಿ: ಯುವನಿಧಿ | ಜ.20ರವರೆಗೆ ವಿಶೇಷ ನೋಂದಣಿ ಅಭಿಯಾನ
ಶರಣಾಗುತ್ತಿರುವ ನಕ್ಸಲರಿಗೆ ಪ್ಯಾಕೇಜ್ ಘೋಷಣೆ ಅವರಿಂದ ಜೀವ ಕಳೆದುಕೊಂಡ ಅಮಾಯಕರಿಗೆ ಮಾಡಿದ ಅಪಮಾನವಾಗುತ್ತದೆ. ಕಾನೂನು ರೀತಿಯಲ್ಲಿ ಶರಣಾಗತಿ ಮಾಡಿಸಿಕೊಂಡು, ಅವರ ಮೇಲಿರುವ ಎಲ್ಲ ಪ್ರಕರಣಗಳು ಇತ್ಯರ್ಥವಾದ ನಂತರ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಎಬಿವಿಪಿ ಆಗ್ರಹಿಸುತ್ತದೆ ಎಂದು ತಿಳಿಸಿದ್ದಾರೆ.
ರಾಮಾಂಜನೇಯ k
9 January 2025 at 19:45
ಈಗಿನ ರಾಜಕಾರಣಿಗಳು ಎಷ್ಟು ಕಾನೂನು ಬಾಹಿರ ಚಟುವಟಿಕೆಗಳು ಮಾಡಿ ಈಗಲೂ MP MLA ಗಳಾಗಿ ಅಧಿಕಾರದಲ್ಲಿ ಇದ್ದಾರೆ ಆದರೆ ಅವರಿಗೆ ಎಲ್ಲಾ ರೀತಿಯ ಗೌರವ ನೀಡಿ ನೀವೇ ತಲೆ ಬಾಗುತಿರ ಆದರೆ ನಕ್ಷಲಾರ ತಮ್ಮ ಒಟ್ಟೆ ಪಾಡಿಗಾಗಿ ಕಾಡಿನಲ್ಲಿ ಜೀವನ ಮಾಡಿಕೊಡಿದ್ದವರನ್ನು ಸಮಾಜಕ್ಕೆ ಪರಿಚಯಿಸದರೆ ನಿಮ್ಮ್ದು ಈ ತರ ಟೀಕೆ ನಕ್ಸಲರು ಅನಕ್ಷರಸ್ತರು ಅವರಿಗೆ ಕಾನೂನು ಸಮಾಜ ರಾಜಕೀಯ ಎಂಬುದು ಅರಿವಿಲ್ಲ ಅದನ್ನು ಗಮನದಲ್ಲಿ ಇರಿಸಿ ಅವರನ್ನು ನಮ್ಮವರಲ್ಲಿ ಒಬ್ಬರು ಆಗುವಂತೆ ಸ್ವಗತಿಸಿ ಪತ್ರಕೆರ್ತರೆ ಕನಕ ರಾಜ್