ಮುಖ್ಯ ಸುದ್ದಿ
ದೇಸಿ ಪ್ರಮಾಣ ಪತ್ರ ವಿತರಣೆ | ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಭಾಗಿ
CHITRADURGA NEWS | 10 JUNE 2024
ಚಿತ್ರದುರ್ಗ: ಕೃಷಿ ಪರಿಕರ ಮಾರಾಟಗಾರರಿಗೆ ಕೃಷಿ ವಿಸ್ತರಣಾ ಸೇವೆಯ ಡಿಪ್ಲೊಮೊ (ದೇಸಿ) ಪ್ರಮಾಣ ಪತ್ರಗಳ ವಿತರಣಾ ಸಮಾರಂಭವನ್ನು ಜೂನ್ 10 ರಂದು ನಗರದ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಆಯೋಜಿಸಲಾಗಿದೆ.
ಕೃಷಿ ವಿಸ್ತರಣಾ ನಿರ್ವಹಣಾ ರಾಷ್ಟ್ರೀಯ ಸಂಸ್ಥೆ, ರಾಜ್ಯ ಸಮೇತಿ (ದಕ್ಷಿಣ) ಕೃಷಿ ವಿಶ್ವ ವಿದ್ಯಾಲಯ, ಕೃಷಿ ಇಲಾಖೆ (ಆತ್ಮ ಯೋಜನೆ) ಮತ್ತು ಬಬ್ಬೂರು ಫಾರಂನ ಜಿಲ್ಲಾ ಕೃಷಿ ತರಬೇತಿ ಸಂಸ್ಥೆ ಸಹಯೋಗದಲ್ಲಿ ಬೆಳಿಗ್ಗೆ 11 ಗಂಟೆಗೆ ಕಾರ್ಯಕ್ರಮ ನಡೆಯುಲಿದೆ.
ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಜಂಟಿ ಕೃಷಿ ನಿರ್ದೇಶಕ ಹಾಗೂ ಆತ್ಮ ಯೋಜನೆ ಯೋಜನಾ ನಿರ್ದೇಶಕ ಬಿ.ಮಂಜುನಾಥ್ ಅಧ್ಯಕ್ಷತೆವಹಿಸಲಿದ್ದಾರೆ.
ಕ್ಲಿಕ್ ಮಾಡಿ ಓದಿ: ಕೆರೆ ಏರಿ ಮೇಲೆ ಲಾರಿ ಪಲ್ಟಿ | ಮದ್ಯದ ಬಾಟಲ್‌ಗಳು ಚೆಲ್ಲಾಪಿಲ್ಲಿ
ಮುಖ್ಯ ಅತಿಥಿಗಳಾಗಿ ಕೃಷಿ ವಿಶ್ವ ವಿದ್ಯಾಲಯ ಜಿಕೆವಿಕೆ ವಿಸ್ತರಣಾ ನಿರ್ದೇಶಕ ವಿ.ಎಲ್.ಮಧುಪ್ರಸಾದ್, ರಾಜ್ಯ ನೋಡಲ್ ಅಧಿಕಾರಿ ಆರ್.ನಾರಾಯಣ ರೆಡ್ಡಿ, ಜಿಲ್ಲಾ ಪಂಚಾಯಿತಿ ಉಪ ನಿರ್ದೇಶಕ ತಿಮ್ಮಪ್ಪ ಕೊರವ, ಬಬ್ಬೂರು ಫಾರಂ ಸಹ ಸಂಶೋಧನಾ ನಿರ್ದೇಶಕ ಸುರೇಶ್ ಏಕಬೋಟೆ, ಕಾರ್ಯಕ್ರಮ ಸಂಯೋಜಕ ಓ.ಕುಮಾರ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ, ರೇಷ್ಮೆ ಇಲಾಖೆ ಉಪ ನಿರ್ದೇಶಕ ಮಾರಪ್ಪ ಬೀರಲದಿನ್ನಿ, ಕೃಷಿ ಪರಿಕರ ಮಾರಾಟಗಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರೇವಣ್ಣಸಿದ್ದಪ್ಪ, ಕೃಷಿ ಉಪ ನಿರ್ದೇಶಕರಾದ ಬಿ.ಎನ್.ಪ್ರಭಾಕರ್, ಕೆ.ಎಸ್.ಶಿವಕುಮಾರ್ ಹಾಗೂ ಬಬ್ಬೂರು ಫಾರಂನ ಅನುವುಗಾರರಾದ ಎ.ವಿ.ಪುರುಷೋತ್ತಮ್, ಎನ್.ಪಿ.ಶಿವಶಂಕರ್, ದೇಸಿ ಸಂಯೋಜಕ ಆರ್.ರಜನಿಕಾಂತ ಭಾಗವಹಿಸಲಿದ್ದಾರೆ.
ತೋಟಗಾರಿಕೆ ಕಾಲೇಜಿನ ಉಪನ್ಯಾಸಕರು, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು, ವಲಯ ಕೃಷಿ, ತೋಟಗಾರಿಕಾ ಸಂಶೋಧನಾ ಕೇಂದ್ರದ ವಿಜ್ಞಾನಿಗಳು, ದೇಸಿ ಉಪನ್ಯಾಸಕರು ಹಾಗೂ ಶಿಬಿರಾರ್ಥಿಗಳು ಸಮಾರಂಭದಲ್ಲಿ ಉಪಸ್ಥಿತಿವಹಿಸಲಿದ್ದಾರೆ.