ಮುಖ್ಯ ಸುದ್ದಿ
ಪೊಲೀಸ್ ತನಿಖೆಗೆ ಕೈ ಜೋಡಿಸುತ್ತಿದ್ದ ಅಗಸ್ತ್ಯ ಇನ್ನಿಲ್ಲ

Published on
CHITRADURGA NEWS | 10 JUNE 2024
ಚಿತ್ರದುರ್ಗ: ವಯೋಸಹಜ ಖಾಯಿಲೆದಿಂದ ಬಳಲುತಿದ್ದ ಚಿತ್ರದುರ್ಗ ಪೊಲೀಸ್ ಶ್ವಾನ(ಅಗಸ್ತ್ಯ) ಮೃತ ಪಟ್ಟಿರುವ ಘಟನೆ ನಡೆದಿದೆ.
ಇದನ್ನೂ ಓದಿ: ಜೆಇಇ ಫಲಿತಾಂಶ | ರಾಷ್ಟ್ರಮಟ್ಟದಲ್ಲಿ ಚಿತ್ರದುರ್ಗದ SRS ಪಿಯು ವಿದ್ಯಾರ್ಥಿಗಳ ಸಾಧನೆ

10 ವರ್ಷ 4 ತಿಂಗಳ ಶ್ವಾನ(ಅಗಸ್ತ್ಯ) ಕಳೆದ ಹಲವು ವರ್ಷಗಳಿಂದ ಚಿತ್ರದುರ್ಗದ ಜಿಲ್ಲಾ ಶ್ವಾನ ದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿತ್ತು.
ಅಪರಾಧ ಪತ್ತೆಯಲ್ಲಿ ಉತ್ತಮ ಹೆಸರು ಗಳಿಸಿದ್ದ ಅಗತ್ಯ ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿಗೂ ಪಾತ್ರವಾಗಿದ್ದ ಅಗಸ್ತ್ಯ ಎಲ್ಲರ ಮೆಚ್ಚುಯನ್ನು ಗಳಿಸಿತ್ತು.
ಚಿತ್ರದುರ್ಗ ಜಿಲ್ಲೆಯ ಜಿಲ್ಲಾ ಪೊಲೀಸ್ ಇಲಾಖೆ ಸರ್ಕಾರಿ ಗೌರವಗಳೊಂದಿಗೆ ಡಿಎಆರ್ ಮೈದಾನದಲ್ಲಿ ಅಂತ್ಯಕ್ರಿಯೆ ಜರುಗಿಸಿದರು.
ಇದನ್ನೂ ಓದಿ: ಕೆರೆ ಏರಿ ಮೇಲೆ ಲಾರಿ ಪಲ್ಟಿ | ಮದ್ಯದ ಬಾಟಲ್‌ಗಳು ಚೆಲ್ಲಾಪಿಲ್ಲಿ
ಈ ವೇಳೆ ಎಸ್ಪಿ ಧರ್ಮೇಂದ್ರ ಕುಮಾರ್ ಮೀನಾ, ಎಎಸ್ಪಿ ಕುಮಾರಸ್ವಾಮಿ, ಡಿವೈಎಸ್ಪಿ ಗಣೇಶ್ ಸೇರಿದಂತೆ ಪೋಲಿಸ್ ಇಲಾಖೆ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
Continue Reading
Related Topics:Agastya, Chitradurga, Chitradurga news, dog pack, Kannada News, no more, ಅಗಸ್ತ್ಯ, ಇನ್ನಿಲ್ಲ, ಕನ್ನಡ ಸುದ್ದಿ, ಚಿತ್ರದುರ್ಗ, ಚಿತ್ರದುರ್ಗ ಸುದ್ದಿ, ಶ್ವಾನ ದಳ

Click to comment