Connect with us

ಈ ಚುನಾವಣೆಲಿ ಲೀಡ್ ಕೊಟ್ಟವರಿಗೆ ಸಚಿವ ಸ್ಥಾನ ಪಕ್ಕಾನಾ | ಕೌತುಕ ಮೂಡಿಸಿದ ಎನ್.ವೈ.ಗೋಪಾಲಕೃಷ್ಣ ಹೇಳಿಕೆ

ಎನ್.ವೈ.ಗೋಪಾಲಕೃಷ್ಣ

ಲೋಕಸಮರ 2024

ಈ ಚುನಾವಣೆಲಿ ಲೀಡ್ ಕೊಟ್ಟವರಿಗೆ ಸಚಿವ ಸ್ಥಾನ ಪಕ್ಕಾನಾ | ಕೌತುಕ ಮೂಡಿಸಿದ ಎನ್.ವೈ.ಗೋಪಾಲಕೃಷ್ಣ ಹೇಳಿಕೆ

CHITRADURGA NEWS | 18 APRIL 2024

ಚಿತ್ರದುರ್ಗ: ಲೋಕಸಭೆ ಚುನಾವಣೆ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಮೂರು ಪಕ್ಷಗಳಿಗೂ ಪ್ರತಿಷ್ಠೆಯ ಪ್ರಶ್ನೆಯಾಗಿದೆ.

ಹಾಲಿ ಹಿಡಿತದಲ್ಲಿರುವ ಚಿತ್ರದುರ್ಗ ಲೋಕಸಭಾ ಸ್ಥಾನವನ್ನು ಮತ್ತೆ ಉಳಿಸಿಕೊಳ್ಳುವುದು ಬಿಜೆಪಿಗೆ ಪ್ರತಿಷ್ಠೆಯಾಗಿದ್ದರೆ, ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಚಿತ್ರದುರ್ಗವನ್ನು ಮತ್ತೆ ಕೈ ವಶ ಮಾಡಿಕೊಳ್ಳುವ ತವಕದಲ್ಲಿ ಕಾಂಗ್ರೆಸ್ಸಿನಲ್ಲಿದೆ.

ಇದನ್ನೂ ಓದಿ: ಚಿತ್ರದುರ್ಗದ ಸಂಸದ, ನಾಡಿನ ಮುಖ್ಯಮಂತ್ರಿಯೇ ಆದರು

ರಾಜ್ಯದಲ್ಲಿ 11 ತಿಂಗಳ ಹಿಂದೆ ಅಸ್ತಿತ್ವಕ್ಕೆ ಬಂದಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರಕ್ಕೆ ಈ ಚುನಾವಣೆ ಸವಾಲಾಗಿದೆ. ರಾಜ್ಯ ಸರ್ಕಾರದ ಬಗ್ಗೆ ಜನರಿಗೆ ಇರುವ ಅಭಿಪ್ರಾಯ ಕೂಡಾ ಇಲ್ಲಿ ವ್ಯಕ್ತವಾಗಲಿದೆ. ಅದೇ ರೀತಿ ಕೇಂದ್ರ ಸರ್ಕಾರಕ್ಕೆ ಆಡಳಿತ ವಿರೋಧಿ ಅಲೆ ಇದೆಯೇ ಇಲ್ಲವೇ ಎನ್ನುವುದು ಕೂಡಾ ಬಿಜೆಪಿಗೆ ಈ ಚುನಾವಣೆ ಮೂಲಕ ಅರಿವಾಗಲಿದೆ.

ಈ ಹಿನ್ನೆಲೆಯಲ್ಲಿ ರಾಜ್ಯದ ಕಾಂಗ್ರೆಸ್ ವರಿಷ್ಠರು ಹಾಗೂ ಮುಖ್ಯಮಂತ್ರಿಗಳು ಎಲ್ಲ ಶಾಸಕರು, ಮಂತ್ರಿಗಳಿಗೆ ಸೀಕ್ರೇಟ್ ಟಾಸ್ಕ್ ಕೊಟ್ಟಿದ್ದಾರೆ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.

ಇದನ್ನೂ ಓದಿ: ವದ್ದೀಕೆರೆ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ | 22ರಂದು ಬ್ರಹ್ಮ ರಥೋತ್ಸವ

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶಾಸಕರು ಎಷ್ಟು ಮತಗಳ ಅಂತರದಿಂದ ಗೆದ್ದಿದ್ದರೋ ಅಷ್ಟು ಲೀಡ್ ಲೋಕಸಭಾ ಚುನಾವಣೆಯಲ್ಲೂ ಬರಬೇಕು. ಒಂದು ವೇಳೆ ಮತಗಳ ಪ್ರಮಾಣ ಕಡಿಮೆಯಾದರೆ ಮುಂದೆ ಶಿಸ್ತುಕ್ರಮ ಎನ್ನುವ ಮಾತು ಕೇಳಿಬರುತ್ತಿವೆ.

ಇದರೊಟ್ಟಿಗೆ ಮೊಳಕಾಲ್ಮೂರು ಕ್ಷೇತ್ರದ ಹಿರಿಯ ಶಾಸಕ ಎನ್.ವೈ.ಗೋಪಾಲಕೃಷ್ಣ ಕ್ಷೇತ್ರದ ಮತದಾರರಲ್ಲಿ ಮಾಡಿರುವ ಮನವಿ ಗಮನ ಸೆಳೆದಿದೆ.

ಇದನ್ನೂ ಓದಿ: ಬಂದೇ ಬಿಡ್ತು ಬಯಲು ಸೀಮೆಲಿ ಬೆಳೆಯುವ ಭತ್ತದ ತಳಿ | ಸಿರಿಗೆರೆಯಲ್ಲಿ ಯಶಸ್ವಿ ಪ್ರಯೋಗ

ನಾನು ಸಚಿವನಾಗಲು ಇನ್ನೊಂದು ಹಂತವಿದೆ. ಈಗಾಗಲೇ ಹೆಚ್ಚು ಮತ ಕೊಟ್ಟು ಶಾಸಕನನ್ನಾಗಿ ಮಾಡಿದ್ದೀರಿ. ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಅತ ಹೆಚ್ಚು ಮತಗಳನ್ನು ಕೊಟ್ಟರೆ ಹೈಕಮಾಂಡ್ ನನ್ನ ಶಕ್ತಿ, ಸಾಮಥ್ರ್ಯವನ್ನು ಗಮನಿಸಲಿದೆ. ಸಚಿವ ಸ್ಥಾನವೂ ಸಿಗುತ್ತದೆ ಎಂದು ಎನ್‍ವೈಜಿ ಹೇಳಿದ್ದಾರೆ.

ನಾನು ಶಾಸಕನಾಗಿಯೇ ಸಾಕಷ್ಟು ಕೆಲಸ ಮಾಡಿದ್ದೇನೆ. ಇನ್ನೂ ಮಂತ್ರಿಯಾದರೆ ಎಷ್ಟು ಕೆಲಸ ಮಾಡಬಹುದು ಯೋಚನೆ ಮಾಡಿ. ಹಾಗಾಗಿ ಯಾರೂ ಕೂಡಾ ಮೈ ಮರೆಯದೆ, ಯಾರ ಮಾತಿಗೂ ಮರುಳಾಗದೆ ಹಸ್ತದ ಗುರುತಿಗೆ ಮತ ಹಾಕಿ ಎಂದು ಕೇಳಿದ್ದಾರೆ.

ಇದನ್ನೂ ಓದಿ: ರಾಹುಲ್‌ ಗಾಂಧಿಗೆ ನೈತಿಕತೆಯಿಲ್ಲ | ವಿಧಾನ ಪರಿಷತ್‌ ಸದಸ್ಯ ಎನ್‌.ರವಿ ಕುಮಾರ್‌

ಬಿಜೆಪಿ ಅಭ್ಯರ್ಥಿ ಶ್ರೀಮಂತರಿರಬಹುದು. ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಇರಬಹುದು. ಒಂದು ವೇಳೆ ಬಂದು ಹಣ ಕೊಟ್ಟರೆ ತೆಗೆದುಕೊಳ್ಳುವುದು ನಿಮಗೆ ಬಿಟ್ಟಿದ್ದು, ತೆಗೆದುಕೊಂಡರೂ ಮಾಡಬೇಕಾದ ಕೆಲಸ ಮಾಡಿ ಕಾಂಗ್ರೆಸ್ ಗೆಲ್ಲಿಸಿ ಎಂದಿದ್ದಾರೆ.

ಈ ಮೂಲಕ ಮೊಳಕಾಲ್ಮೂರಿನಿಂದ ಕಾಂಗ್ರೆಸ್ ಅಭ್ಯರ್ಥಿಗೆ ಲೀಡ್ ಕೊಟ್ಟರೆ ಗೋಪಾಲಕೃಷ್ಣ ಅವರಿಗೆ ಸಚಿವ ಸ್ಥಾನ ಗ್ಯಾರೆಂಟಿ ಇದೆಯಾ ಎನ್ನುವ ಪ್ರಶ್ನೆ ಮೂಡಿದೆ. ಅದೇ ರೀತಿ ಇತರೆ ಕ್ಷೇತ್ರಗಳಲ್ಲೂ ಶಾಸಕರು ತಮ್ಮ ಶಕ್ತಿ, ಅಸ್ತಿತ್ವ ಪ್ರದರ್ಶನಕ್ಕೆ ಶ್ರಮ ಹಾಕುತ್ತಿದ್ದಾರಾ ಎನ್ನುವ ಕುತೂಹಲ ಮೂಡಿದೆ.

Click to comment

Leave a Reply

Your email address will not be published. Required fields are marked *

More in ಲೋಕಸಮರ 2024

To Top
Exit mobile version