Connect with us

    ಜಿಲ್ಲಾಧಿಕಾರಿ ಕಚೇರಿ ಎದುರು ಕೊಬ್ಬರಿ ಸುರಿದು ರೈತರ ಆಕ್ರೋಶ | ಕೊಬ್ಬರಿ ಖರೀದಿ ನಿಯಮ ಸಡಿಲಿಕೆಗೆ ಆಗ್ರಹ

    ಜಿಲ್ಲಾಧಿಕಾರಿ ಕಚೇರಿ ಎದುರು ಕೊಬ್ಬರಿ ಸುರಿದು ರೈತರ ಆಕ್ರೋಶ

    ಮುಖ್ಯ ಸುದ್ದಿ

    ಜಿಲ್ಲಾಧಿಕಾರಿ ಕಚೇರಿ ಎದುರು ಕೊಬ್ಬರಿ ಸುರಿದು ರೈತರ ಆಕ್ರೋಶ | ಕೊಬ್ಬರಿ ಖರೀದಿ ನಿಯಮ ಸಡಿಲಿಕೆಗೆ ಆಗ್ರಹ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 22 APRIL 2024

    ಚಿತ್ರದುರ್ಗ: ಹೊಸದುರ್ಗ ಕೊಬ್ಬರಿ ಖರೀದಿ ಕೇಂದ್ರದಲ್ಲಿ ರೈತರಿಗೆ ಅನುಕೂಲ ಆಗುವಂತೆ ನಿಯಮಗಳನ್ನು ಸರಳೀಕರಣ ಮಾಡಲು ಒತ್ತಾಯಿಸಿ ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಕೊಬ್ಬರಿ ಸುರಿದು ಪ್ರತಿಭಟನೆ ನಡೆಸಿದರು.

    ಇದನ್ನೂ ಓದಿ: ನೀತಿ ಸಂಹಿತೆ ಉಲ್ಲಂಘಿಹಿಸಿದರೆ ಕಠಿಣ ಕ್ರಮ

    ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ನಡೆದ ಪ್ರತಿಭಟನೆಯಲ್ಲಿ, ರೈತರು ಬೆಳೆದಿರುವ ಕೊಬ್ಬರಿಯನ್ನು ಮಾರಾಟ ಮಾಡದಂತೆ ನಿಯಮಗಳನ್ನು ರೂಪಿಸಲಾಗಿದೆ. ಕೃಷಿ ಉತ್ಪನ್ನಗಳನ್ನು ಈ ರೀತಿಯ ಸಲ್ಲದ ನಿಯಮಗಳನ್ನು ಹೇರಿಕೆ ಮಾಡಿ ಖರೀದಿ ಮಾಡುವುದು ಸರಿಯಲ್ಲ. ಹವಾಮಾನ ವೈಪರೀತ್ಯದಿಂದಾಗಿ ಕೊಬ್ಬರಿ ಗಾತ್ರದಲ್ಲಿ ವ್ಯತ್ಯಾಸವಾಗಿದೆ. ಸರ್ಕಾರ ಇದನ್ನೇ ಲಾಭ ಮಾಡಿಕೊಂಡು ರೈತರು ಕೊಬ್ಬರಿಯನ್ನೇ ಮಾರಾಟ ಮಾಡದಂತೆ ಮಾಡುತ್ತಿರುವುದು ಸರಿಯಲ್ಲ ಎಂದರು.

    ಈಗಾಗಲೇ ತೆಂಗು ಬೆಳೆಗೆ ಕಪ್ಪು ತಲೆಯ ಹುಳು ಬಾಧೆ, ನುಸಿ ರೋಗ, ಅಂತರ್ಜಲ ಕುಸಿತದಿಂದ ರೈತರು ಕಂಗೆಟ್ಟು ಹೋಗಿದ್ದಾರೆ. ಬರಗಾಲದಲ್ಲಿ ತೋಟಗಳನ್ನು ಉಳಿಸಿಕೊಳ್ಳಲು ಹರಸಾಹಸ ಮಾಡುತ್ತಿದ್ದಾರೆ. ಇತಹ ಸಂದರ್ಭದಲ್ಲಿ ಸರ್ಕಾರ ಅತಾರ್ಕಿಕ ನಿಯಮಗಳನ್ನು ಹೇರುವುದು ಸರಿಯಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.

    ಇದನ್ನೂ ಓದಿ: ಲೋಕಸಭೆ ಚುನಾವಣೆ | ಮತ ಚಲಾಯಿಸಿದ ಡಿಸಿ, ಜಿಪಂ ಸಿಇಓ

    ರೈತರ ಎಫ್‍ಐಡಿ ಬಳಕೆ ಮಾಡಿ ಕೆಲವೇ ವರ್ತಕರಿಂದ ಕೊಬ್ಬರಿ ಖರೀದಿಸಿರುವ ಅಧಿಕಾರಿಗಳು ಕುತಂತ್ರದಿಂದ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಈ ವರ್ಷ ಬರಗಾಲ ಇರುವುದರಿಂದ ಸರ್ಕಾರ ರೈತರ ಬಳಿಯಿರುವ ಎಲ್ಲ ಕೊಬ್ಬರಿಯನ್ನೂ ಸಂಪೂರ್ಣವಾಗಿ ಖರೀಧಿಸಬೇಕು ಎಂದು ಆಗ್ರಹಿಸಿದರು.

    ಕೊಬ್ಬರಿ ಖರೀದಿಗೆ ಈಗ ವಿಧಿಸಿರುವ 75 ಎಂ.ಎಂ ಗಾತ್ರ ಹಾಗೂ ಗುಣಮಟ್ಟವನ್ನು ಬಿಟ್ಟು ಎಲ್ಲ ಕೊಬ್ಬರಿಯನ್ನೂ ಖರೀದಿಸಬೇಕು ಎಂದು ಆಗ್ರಹಿಸಿದರು.

    ಇದನ್ನೂ ಓದಿ: ಮೋದಿ ಮತ್ತೆ ಪ್ರಧಾನಿಯಾಗೋದು ಸೂರ್ಯ, ಚಂದ್ರರಷ್ಟೇ ಸತ್ಯ | ಬಿ.ಎಸ್.ಯಡಿಯೂರಪ್ಪ

    ಈ ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಈಚಘಟ್ಟ ಸಿದ್ದವೀರಪ್ಪ, ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ್, ಹೊಸದುರ್ಗ ತಾಲೂಕು ಅಧ್ಯಕ್ಷ ಬೋರೇಶ ಅರಲಹಳ್ಳಿ, ಪ್ರಧಾನ ಕಾರ್ಯದರ್ಶಿ ಶಶಿಧರ ಹರೇನಹಳ್ಳಿ, ಮಂಜುನಾಥ್ ಬೈಲಪ್ಪ, ಕುಮಾರಣ್ಣ, ಮುರಿಗಪ್ಪ, ಚಿತ್ತಪ್ಪ, ಮಹೇಶ್ವರಪ್ಪ, ಕರಿಬಸಪ್ಪ, ಅಣ್ಣಪ್ಪ ಸೇರಿದಂತೆ ಹಲವಾರು ರೈತರಿದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top