ಮುಖ್ಯ ಸುದ್ದಿ
ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ)ಗೆ ಸನ್ಮಾನ | ಮೆದೇಹಳ್ಳಿ ನೀರಿನ ಸಮಸ್ಯೆ ಇತ್ಯರ್ಥದ ಭರವಸೆ
CHITRADURGA NEWS | 24 MARCH 2025
ಚಿತ್ರದುರ್ಗ: ಮೆದೇಹಳ್ಳಿ ರಸ್ತೆಯಲ್ಲಿರುವ ಆದಿಶೇಷ ರೋಟರಿ ಭವನದಲ್ಲಿ ಚೈತನ್ಯ ಕ್ಷೇಮಾಭಿವೃದ್ದಿ ಸಂಘದಿಂದ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಸನ್ಮಾನಿಸಲಾಯಿತು.
Also Read: ಅಡಿಕೆ ಧಾರಣೆ | ರಾಶಿ ಅಡಿಕೆ ಬೆಲೆ ಮತ್ತೆ ಏರಿಕೆ
ಈ ವೇಳೆ ಮಾತನಾಡಿದ ಶಾಸಕ ಕೆ.ಸಿ.ವೀರೇಂದ್ರ(ಪಪ್ಪಿ), ಮೆದೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಫ್ಲೋರೈಡ್ ಅಂಶ ಜಾಸ್ತಿಯಿದೆ ಎನ್ನುವುದನ್ನು ನನ್ನ ಗಮನಕ್ಕೆ ತಂದಿದ್ದೀರ. ಶೀಘ್ರವೇ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ನೀವುಗಳು ಮಾಡಿರುವ ಸನ್ಮಾನ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ. ಸಿ.ಸಿ.ರಸ್ತೆಗೆ ರೂ.2 ಕೋಟಿ ನೀಡಿದ್ದೇನೆ. ಇನ್ನು ರೂ.1 ಕೋಟಿ ಕೊಡುತ್ತೇನೆ. ಯು.ಜಿ.ಡಿ.ಸಮಸ್ಯೆ ಕೇವಲ ಮೆದೇಹಳ್ಳಿಯಲ್ಲಷ್ಟೆ ಇಲ್ಲ. ಇಡೀ ಚಿತ್ರದುರ್ಗದಲ್ಲಿ ಯು.ಜಿ.ಡಿ.ಸಮಸ್ಯೆಯಿದೆ. ಕಾಮಗಾರಿ ಕಳಪೆಯಾಗಿರುವುದರಿಂದ ರಿಪೇರಿ ಮಾಡಿಸಬಹುದು ಎಂದು ಹೇಳಿದರು.
ನಿಗಮ ಮಂಡಳಿಗಳ ನೇಮಕದಲ್ಲಿ ಮೆದೇಹಳ್ಳಿಯವರಿಗೆ ಆದ್ಯತೆ ನೀಡಿದ್ದೇನೆ. ದೇವಸ್ಥಾನಕ್ಕೆ 5 ಲಕ್ಷ ರೂ.ಗಳನ್ನು ಕೊಟ್ಟಿದ್ದೇನೆ. ಎರಡು ಅಂಗನವಾಡಿಗಳನ್ನು ಕಟ್ಟಿಸಲಾಗಿದೆ. ಮೂರುವರೆ ಕೋಟಿ ರೂ.ಗಳಿಗಿಂತ ಹೆಚ್ಚು ಹಣ ಮೆದೇಹಳ್ಳಿ ಗ್ರಾಮ ಪಂಚಾಯಿತಿಗೆ ಮಂಜೂರು ಮಾಡಿಸಿದ್ದೇನೆ ಎಂದರು.
Also Read: ಸಂಘಟನೆ ರಾಜಕೀಯಕ್ಕೆ ಬಳಸಬೇಡಿ | ಶಾಂತವೀರ ಶ್ರೀ
ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಪಂಚಾಯಿತಿಗಳಲ್ಲಿ ಉಚಿತ ನೇತ್ರ ತಪಾಸಣೆಯನ್ನು ನಡೆಸುವುದಾಗಿ ಶಾಸಕ ಕೆ.ಸಿ.ವೀರೇಂದ್ರಪಪ್ಪಿ ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಾವ್ಯ ವಿಜಯಕುಮಾರ್ ಮಾತನಾಡಿದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಿಜಯಕುಮಾರ್, ಗುರಪ್ಪ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು, ಮುಖಂಡರುಗಳು ಇದ್ದರು.