ಮುಖ್ಯ ಸುದ್ದಿ
ಮಹಿಳೆ ಅಬಲೆಯಲ್ಲ, ಸಬಲೆ | ಸೌಭಾಗ್ಯ ಬಸವರಾಜನ್
CHITRADURGA NEWS | 24 MARCH 2025
ಚಿತ್ರದುರ್ಗ: ಎಲ್ಲಾ ರಂಗದಲ್ಲಿಯೂ ಪುರುಷರಿಗೆ ಸಮಾನವಾಗಿ ಸಾಧನೆಗೈಯುತ್ತಿರುವ ಹೆಣ್ಣು ಅಬಲೆಯಲ್ಲ, ಸಬಲೆ ಎನ್ನುವುದನ್ನು ಸಾಬೀತುಪಡಿಸುತ್ತಿದ್ದಾಳೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ತಿಳಿಸಿದರು.
Also Read: ಒಂದು ದೇಶ – ಒಂದು ಚುನಾವಣೆ ಘೋಷಣೆಯಲ್ಲ | ಭಾರತೀಯರ ಹೃದಯ ಬಡಿತ | ಗೋವಿಂದ ಕಾರಜೋಳ
ಚಿತ್ರ ಡಾನ್‍ಬೋಸ್ಕೋ ಸಭಾಂಗಣದಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಉತ್ಕøಷ್ಚ ಸಮಾಜಕ್ಕಾಗಿ ಮಹಿಳಾ ಸಬಲೀರಕಣ ಎನ್ನುವ ವಿಚಾರ ಕುರಿತು ಮಾತನಾಡಿದ ಸೌಭಾಗ್ಯ ಬಸವರಾಜನ್ ಆರೋಗ್ಯಪೂರ್ಣ ಸಮಾಜ ನಿರ್ಮಾಣದಲ್ಲಿ ಮಹಿಳೆಯ ಪಾತ್ರ ಅಡಗಿದೆ. ಕೇವಲ ಮನೆಗಷ್ಟೆ ಮಹಿಳೆಯರು ಸೀಮಿತಗೊಳ್ಳದೆ ಸಮಾಜದ ಮುಖ್ಯವಾಹಿನಿಗೆ ಬಂದು ಸ್ವಾವಲಂಭಿಯಾಗಿ ಬದುಕು ಕಟ್ಟಿಕೊಂಡಾಗ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಅಭಿವೃದ್ದಿಯಾಗಲು ಸಾಧ್ಯ.
ಸಮಾಜಮುಖಿ ಕೆಲಸಗಳ ಜೊತೆ ಚಿತ್ರಡಾನ್‍ಬೋಸ್ಕೋ ಮಹಿಳೆಯರ ಸಬಲೀಕರಣಕ್ಕಾಗಿ ಶ್ರಮಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
Also Read: ಅಡಿಕೆ ಧಾರಣೆ | ರಾಶಿ ಅಡಿಕೆ ಬೆಲೆ ಮತ್ತೆ ಏರಿಕೆ
ಚಿತ್ರಡಾನ್‍ಬೋಸ್ಕೋ ನಿರ್ದೇಶಕ ಡಿ.ಸಿ.ಅಂಥೋನಿರಾಜ್ ಮಾತನಾಡಿ, ಹೆಣ್ಣು ಸಮಾಜದ ಕಣ್ಣು, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ. ಅದಕ್ಕಾಗಿ ಹೆಣ್ಣಾಗಿರುವುದಕ್ಕೆ ಹೆಮ್ಮೆ ಪಡೆಬೇಕು. ಹೆಣ್ಣು-ಗಂಡೆಂಬ ತಾರತಮ್ಯ ಸರಿಯಲ್ಲ, ಇಬ್ಬರನ್ನು ಸಮಾನತೆಯಿಂದ ನೋಡಬೇಕಿದೆ ಎಂದರು.
ವಂದನೀಯ ಸ್ವಾಮಿ ಉದಯ್ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಚಿತ್ರ ಡಾನ್‍ಬೋಸ್ಕೋ ಆಡಳಿತಾಧಿಕಾರಿ ವಿ.ಎಂ.ಮ್ಯಾಥ್ಯೂ, ಡಾನ್‍ಬೋಸ್ಕೋ ಸಂಸ್ಥೆಯ ಆಡಳಿತಾಧಿಕಾರಿ ಜಾನ್‍ಪೌಲ್, ಡಾನ್‍ಬೋಸ್ಕೊ ಪದವಿ ಕಾಲೇಜಿನ ಪ್ರಾಂಶುಪಾಲ ಬೆನ್ನಿ ಕ್ರಿಸ್ತದಾಸ್, ಡಾನ್‍ಬೋಸ್ಕೋ ಐ.ಸಿ.ಎಸ್.ಇ. ಶಾಲೆಯ ಪ್ರಾಚಾರ್ಯರಾದ ಕೆ.ಸಿ.ಮ್ಯಾಥ್ಯು, ಫ್ಯಾಪ್ಕೋ ಸೊಸೈಟಿಯ ನಿರ್ದೇಶಕಿ ಚಂದ್ರಕಲಾ, ಪ್ರಾಣಿ ಸಂರಕ್ಷಕಿ ಸ್ಪೂರ್ತಿ, ನಿಧಿಶ್ರಿ ಸೇರಿದಂತೆ ಇತರರು ಭಾಗವಹಿಸಿದ್ದರು.
Also Read: ಸಂಘಟನೆ ರಾಜಕೀಯಕ್ಕೆ ಬಳಸಬೇಡಿ | ಶಾಂತವೀರ ಶ್ರೀ
ಮಣಿಪುರ ಸಾಂಸ್ಕøತಿಕ ನೃತ್ಯ ಎಲ್ಲರ ಗಮನ ಸೆಳೆಯಿತು.