Connect with us

Hindu Mahaganapati: ಗರುಡ ವಾಹನದಲ್ಲಿ ಕೋಟೆನಾಡು ಪ್ರವೇಶಿಸಲಿದೆ ಹಿಂದೂ ಮಹಾಗಣಪತಿ | ಆಕರ್ಷಿಸುತ್ತಿದೆ ರಾಜವೀರ ಮದಕರಿ ನಾಯಕ ಮಹಾದ್ವಾರ

HNIDU GANAPATHI

ಮುಖ್ಯ ಸುದ್ದಿ

Hindu Mahaganapati: ಗರುಡ ವಾಹನದಲ್ಲಿ ಕೋಟೆನಾಡು ಪ್ರವೇಶಿಸಲಿದೆ ಹಿಂದೂ ಮಹಾಗಣಪತಿ | ಆಕರ್ಷಿಸುತ್ತಿದೆ ರಾಜವೀರ ಮದಕರಿ ನಾಯಕ ಮಹಾದ್ವಾರ

CHITRADURGA NEWS |03 SEPTEMBER 2024
ಚಿತ್ರದುರ್ಗ: ಲಕ್ಷಾಂತರ ಭಕ್ತರ ಸಂಭ್ರಮ ಇಮ್ಮಡಿಗೊಳಿಸುವ ಹಿಂದೂ ಮಹಾಗಣಪತಿ ಆಗಮನಕ್ಕೆ ಸ್ವಾಗತಕ್ಕೆ ಸಿದ್ಧತೆ ಪೂರ್ಣಗೊಂಡಿದ್ದು, ಬುಧವಾರದಿಂದಲೇ ಕೋಟೆನಾಡಿನಲ್ಲಿ ಗೌರಿಪುತ್ರನ ದರ್ಬಾರ್‌ ಶುರುವಾಗಲಿದೆ.

ವಿಶ್ವ ಹಿಂದೂ ಪರಿಷತ್‌, ಬಜರಂಗದಳದಿಂದ ನಗರದ ಜೈನಧಾಮದಲ್ಲಿ ಶನಿವಾರ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆಯಾಗಲಿದೆ. ಈ ಕುರಿತು ಹಿಂದೂ ಮಹಾಗಣಪತಿ ಉತ್ಸವ ಸಮಿತಿ ಅಧ್ಯಕ್ಷ ನಯನ್‌ ಮಂಗಳವಾರ ಸುದ್ದಿಗೋಷ್ಠಿ ನಡೆಸಿದರು.

‘ದೊಡ್ಡಬಳ್ಳಾಪುರದಲ್ಲಿ ಸಿದ್ಧವಾಗಿರುವ 14 ಅಡಿ ಎತ್ತರದ ಗರುಡ ವಾಹನದಲ್ಲಿ ಅಲಂಕೃತವಾಗಿರುವ ಗಣಪತಿ ಬುಧವಾರ ವಿದ್ಯುಕ್ತವಾಗಿ ಪುರ ಪ‍್ರವೇಶಿಸಲಿದೆ. ಮಧ್ಯಾಹ್ನ ಮೂರು ಗಂಟೆಗೆ ಕಲಾತಂಡಗಳೊಂದಿಗೆ ಗಣಪತಿ ಆಗಮನವಾಗಲಿದೆ’ ಎಂದರು.

ಹಿಂದೂ ಮಹಾಗಣಪತಿ ಉತ್ಸವ ಸಮಿತಿ ಸುದ್ದಿಗೋಷ್ಠಿ

‘ಸಭಾಂಗಣ ಮತ್ತು ಹೊರಗೆ 5 ಎಲ್‌ಇಡಿ ಅಳವಡಿಸಲಾಗುತ್ತದೆ. ಹೊರಗೆ ಇರುವ ಎಲ್ಇಡಿ ನಲ್ಲಿ ಪೂಜಾ ಕಾರ್ಯಕ್ರಮಗಳು ನೇರ ಪ್ರಸಾರ ಇರುತ್ತವೆ. ಭಕ್ತರಿಗೆ ಅನುಕೂಲವಾಗುವಂತೆ ಸಕಲ ವ್ಯವಸ್ಥೆ ಕಲ್ಪಿಸಲಾಗುತ್ತಿದೆ’ ಎಂದು ತಿಳಿಸಿದರು.

ಕ್ಲಿಕ್ ಮಾಡಿ ಓದಿ: ಅಕ್ಕ ಸಮ್ಮೇಳನದಲ್ಲಿ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ | ಮಾತುಕತೆ

ಬಜರಂಗದಳ ಪ್ರಾಂತ ಸಂಯೋಜಕ ಪ್ರಭಂಜನ್ ಮಾತನಾಡಿ, ‘ಈ ವರ್ಷ ಗಣಪತಿ ಪೆಂಡಾಲ್‌ ಬಹು ಬೇಗ ಸಿದ್ಧವಾಗಿದೆ. ದಶಾವತಾರ ಬಿಂಬಿಸುವ ಮಾದರಿಯ ಪೆಂಡಾಲ್‌ ಹಾಕಲಾಗಿದೆ. ಭಕ್ತರ ಸಂಖ್ಯೆ ಹೆಚ್ಚಾಗುವುದು, ಮಳೆ ಕಾರಣಕ್ಕೆ ಪೆಂಡಾಲ್ ವಿನ್ಯಾಸ ಬದಲಾಯಿಸಲಾಗಿದೆ’ ಎಂದರು.

‘ನಿತ್ಯ ಸಂಜೆ ದೇಶಭಕ್ತಿ ಪ್ರಸ್ತುತಪಡಿಸುವ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಮಾದಾರ ಚನ್ನಯ್ಯ ಮಠಕ್ಕೆ ಆಗಮಿಸುವ ಗಣಪತಿಯನ್ನು ಪೆಂಡಾಲ್‌ಗೆ ತರಲಾಗುತ್ತದೆ’ ಎಂದು ತಿಳಿಸಿದರು.

‘ಮಹೋತ್ಸವದ ಪ್ರಮುಖ ಘಟ್ಟವಾದ ಶೋಭಾಯಾತ್ರೆಯನ್ನು ಬಜರಂಗದಳ ರಾಷ್ಟ್ರೀಯ ಸಂಯೋಜಕ ನೀರಜ್ ದೊನೇರಿಯಾ ಉದ್ಘಾಟಿಸಲಿದ್ದಾರೆ. ಸ್ಥಳದ ಪಾವಿತ್ರ್ಯತೆ, ರಾಷ್ಟ್ರೀಯತೆ, ಸಂಸ್ಕೃತಿ ಬಿಂಬಿಸುವಂತೆ ಪ್ರತಿಷ್ಠಾಪಿಸುವ ಜಿಲ್ಲೆಯ 25 ಗಣಪತಿಗಳಿಗೆ ಬಹುಮಾನ ಕೊಡಲು ತೀರ್ಮಾನಿಸಲಾಗಿದೆ. ಜತೆಗೆ ವಿಶ್ವಹಿಂದೂ ಪರಿಷತ್ ಷಷ್ಠಿಪೂರ್ತಿ ಹಿನ್ನೆಲೆಯಲ್ಲಿ 60 ಜನರಿಗೆ ಸನ್ಮಾನ ಮಾಡಲಾಗುತ್ತದೆ. ಸಭಾಮಂಟಪಕ್ಕೆ ಕೇಶವ ಹೆಗಡೆ ಹೆಸರನ್ನು ಇಡಲಾಗುತ್ತದೆ. ವೇದಿಕೆಗೆ ಜ.ರಾ.ರಾಮಮೂರ್ತಿ ನಾಮಕರಣ. ಮುಖ್ಯದ್ವಾರ ರಾಜವೀರ ಮದಕರಿ ನಾಯಕ ಮಹಾದ್ವಾರ ಎಂದೇ ಇರುತ್ತದೆ’ ಎಂದು ವಿವರಿಸಿದರು.

ವಿಶ್ವ ಹಿಂದೂ ಪರಿಷತ್‌ ಜಿಲ್ಲಾ ಅಧ್ಯಕ್ಷ ಷಡಾಕ್ಷರಪ್ಪ, ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಶರಣ್‌ ಕುಮಾರ್‌, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಟಿ.ಬದರೀನಾಥ್, ವಿಎಚ್‌ಪಿ ನಗರ ಅಧ್ಯಕ್ಷ ಅಶೋಕ್‌, ಮುಖಂಡರಾದ ಚನ್ನಕೇಶವ, ಸಂದೀಪ್, ರಂಗಸ್ವಾಮಿ ಇತರರಿದ್ದರು.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version