ಮುಖ್ಯ ಸುದ್ದಿ
ಹಿಂದೂ ಮಹಾಗಣಪತಿ ದರ್ಶನಕ್ಕೆ ಹರಿದು ಬಂದ ಜನಸಾಗರ
ಚಿತ್ರದುರ್ಗ ನ್ಯೂಸ್.ಕಾಂ: ಹಿಂದೂ ಮಹಾಗಣಪತಿ ದರ್ಶನಕ್ಕೆ ಶನಿವಾರ ಸಂಜೆ ಜನ ಸಾಗರವೇ ಹರಿದು ಬಂದಿತ್ತು. ವಿಸರ್ಜನೆಗೆ ಇನ್ನು ಒಂದು ವಾರ ಮಾತ್ರ ಬಾಕಿ ಉಳಿದಿರುವುದು ಹಾಗೂ ಲೇಸರ್ ಶೋ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಇಡೀ ಗಣಪತಿ ಪೆಂಡಾಲ್ ಕಿಕ್ಕಿರಿದು ತುಂಬಿತ್ತು.
ಸಂಜೆಯಾಗುತ್ತಲೇ ಸಾವಿರಾರು ಜನ ಗಣಪತಿ ಪೆಂಡಾಲ್ ಕಡೆಗೆ ಹೆಜ್ಜೆ ಹಾಕಿದ್ದರಿಂದ ಬಿ.ಡಿ.ರಸ್ತೆಯಲ್ಲಿ ಸಾವಿರಾರು ವಾಹನಗಳು ನಿಂತಿದ್ದವು. ಗಣಪತಿ ಮಂಟಪದಿಂದ ಹಿಂಭಾಗದಲ್ಲಿರುವ ವೇದಿಕೆಯ ಬಳಿ ಲೇಸರ್ ಶೋ ನೋಡುವ ಜಾಗದಲ್ಲಿ ಕಾಲಿಡಲು ಆಗದಷ್ಟು ಜನ ಕಕ್ಕಿರಿದು ತುಂಬಿದ್ದರು.
ಹಿಂದೂ ಮಹಾಗಣಪತಿ ದರ್ಶನಕ್ಕೆ ಹರಿದು ಬಂದ ಜನಸಾಗರ
ಒಳಗೆ ಸೇರಿದ್ದವರು ಹೊರಗೆ ಬರುವದು ಕಷ್ಟವಾಗಿತ್ತು. ಸುಮಾರು ಒಂದು ಗಂಟೆಗಳ ಕಾಲ ಪೊಲೀಸರು ಹಾಗೂ ಹಿಂದೂ ಮಹಾಗಣಪತಿ ಸಮಿತಿಯ ಕಾರ್ಯಕರ್ತರು ಜನರನ್ನು ನಿಯಂತ್ರಿಸಲು ಹರಸಾಹಸ ಮಾಡುವಂತಾಯಿತು.
ವಾರಾಂತ್ಯದ ಸಂದರ್ಭವಾದ್ದರಿಂದ ಹೊರಗಿನಿಂದ ಊರಿಗೆ ಬಂದವರು, ರಜೆಯಲ್ಲಿದ್ದವರು ಕುಟುಂಬ ಸಮೇತ ಗಣಪತಿ ದರ್ಶನಕ್ಕೆ ಸಂಜೆ ವೇಳೆಗೆ ಆಗಮಿಸಿದ್ದರಿಂದ ಜನಜಂಗುಳಿಯಾಗಿತ್ತು.
ವಿಸರ್ಜನೆಗೆ ಇನ್ನು ಒಂದು ವಾರ ಮಾತ್ರ ಬಾಕಿ:
ಹಿಂದೂ ಮಹಾಗಣಪತಿ ವಿಸರ್ಜನೆಗೆ ಇನ್ನೂ ಒಂದು ವಾರ ಮಾತ್ರ ಉಳಿದಿದೆ. ಅಕ್ಟೋಬರ್ 8 ರಂದು ಗಣಪತಿ ವಿಸರ್ಜನೆ ಅಂಗವಾಗಿ ಶೋಭಾಯಾತ್ರೆ ನಡೆಯಲಿದೆ. ಈ ಹಿನ್ನೆಲೆಯಲ್ಲೂ ಗಣಪನನ್ನು ಕಣ್ತುಂಬಿಕೊಳ್ಳಲು ಜನ ಆಗಮಿಸುತ್ತಿದ್ದಾರೆ.
ಇದನ್ನೂ ಓದಿ: ಹಿಂದೂ ಮಹಾಗಣಪತಿ ಶೋಭಾಯಾತ್ರೆಗೆ ಮುಂಬೈ ಡಿಜೆ | ದಾವಣಗೆರೆಯಲ್ಲಿ ಡಿಜೆ ಸೀಕ್ರೇಟ್ ಮಾಡಿದ ಶಾಸಕ ಕೆ.ಸಿ.ವೀರೇಂದ್ರ(ಪಪ್ಪಿ)
ಇಂದು ಭಾನುವಾರವಾದ್ದರಿಂದ ಇಂದೂ ಕೂಡಾ ಜನ ಹೆಚ್ಚು ಸೇರುವ ಸಾಧ್ಯತೆ ಇದೆ. ಸಂಜೆ ಒಮ್ಮೆಲೆ ಹೋಗುವುದಕ್ಕಿಂತ ಇಡೀ ದಿನ ದರ್ಶನಕ್ಕೆ ಮುಕ್ತ ಅವಕಾಶವಿರುವುದರಿಂದ ಸಾರ್ವಜನಿಕರು ತಮ್ಮ ಬಿಡುವಿನ ವೇಳೆಯನ್ನು ನೋಡಿಕೊಂಡು ಬೆಳಗಿನ ವೇಳೆಯಲ್ಲೂ ಆಗಮಿಸಬಹುದು ಎಂದು ಸಂಘಟಕರು ಮನವಿ ಮಾಡಿದ್ದಾರೆ.