ಮುಖ್ಯ ಸುದ್ದಿ
ಮಾಡದಕೆರೆ, ಶ್ರೀರಾಂಪುರದಲ್ಲಿ ವ್ಯಾಪಕ ಮಳೆ | ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ ಇಲ್ಲಿದೆ ಮಾಹಿತಿ
ಚಿತ್ರದುರ್ಗ: ಜಿಲ್ಲೆಗೆ ಮಳೆರಾಯ ಕೃಪೆ ತೋರಿದ್ದು, ಹೊಸದುರ್ಗ ಭಾಗದಲ್ಲಿ ಉತ್ತಮ ಮಳೆಯಾಗಿದೆ. ಮೊಳಕಾಲ್ಮೂರು ಹಾಗೂ ಚಳ್ಳಕೆರೆ ತಾಲೂಕಿನಲ್ಲಿ ಮಳೆ ಬಂದಿಲ್ಲ.
ಶುಕ್ರವಾರ ಜಿಲ್ಲೆಯಲ್ಲಿ ಸುರಿದ ಮಳೆಯ ವಿವರ ಈ ಕೆಳಗಿನಂತಿದೆ.
ಹೊಸದುರ್ಗ ತಾಲೂಕಿನ ಮಾಡದಕೆರೆಯಲ್ಲಿ ಅತೀ ಹೆಚ್ಚು ಮಳೆ ಸುರಿದಿದ್ದು, 42 ಮಿಲಿ ಮೀಟರ್ ಮಳೆಯಾಗಿದೆ.
ಹೊಸದುರ್ಗ ಪಟ್ಟಣದಲ್ಲಿ 1.6 ಮಿ.ಮೀ, ಬಾಗೂರಿನಲ್ಲಿ 5.3, ಮತ್ತೋಡಿನಲ್ಲಿ 3 ಮಿ.ಮೀ ಮಳೆಯಾಗಿದೆ.
ಶ್ರೀರಾಂಪುರ ಹೋಬಳಿ ವ್ಯಾಪ್ತಿಯಲ್ಲಿ 40.2 ಮಿ.ಮೀ ಮಳೆಯಾಗಿದೆ.
ಹೊಳಲ್ಕೆರೆ ತಾಲೂಕಿನ ರಾಮಗಿರಿಯಲ್ಲಿ 11.4 ಮಿ.ಮೀ, ತಾಳ್ಯ 16.2 ಮಿ.ಮೀ ಮಳೆಯಾಗಿದೆ.
ನಾಯಕನಹಟ್ಟಿಯಲ್ಲಿ 2 ಮಿ.ಮೀ ಮಳೆಯಾಗಿದೆ.
ಹಿರಿಯೂರು ಪಟ್ಟಣದಲ್ಲಿ 5.2 ಮಿ.ಮೀ, ಇಕ್ಕನೂರು 1 ಹಾಗೂ ಬಬ್ಬೂರಿನಲ್ಲಿ 11.6 ಮಿ.ಮೀ ಮಳೆಯಾಗಿದೆ.
ಚಿತ್ರದುರ್ಗ 1 ರಲ್ಲಿ 27.4, ಚಿತ್ರದುರ್ಗ 2 ರಲ್ಲಿ 34.1 ಮಿ.ಮೀ ಮಳೆಯಾದರೆ, ಭರಮಸಾಗರ ವ್ಯಾಪ್ತಿಯಲ್ಲಿ 13.2, ತುರುವನೂರು 9.6 ಮಿ.ಮೀ, ಸಿರಿಗೆರೆ 11.8 ಮಿ.ಮೀ, ಹಿರೇಗುಂಟನೂರು 5.2 ಹಾಗೂ ಐನಹಳ್ಳಿ 9.2 ಮಿ.ಮೀ ಮಳೆಯಾಗಿದೆ.