ಮುಖ್ಯ ಸುದ್ದಿ
Heavy rain: ಚಿತ್ರದುರ್ಗದ ಈ ಗ್ರಾಮಕ್ಕೆ ರಾಜ್ಯದಲ್ಲೇ ಅತಿ ಹೆಚ್ಚು ಮಳೆ | ತುಂಬಿ ಹರಿದ ಹಳ್ಳಕೊಳ್ಳ
CHITRADURGA NEWS | 21 AUGUST 2024
ಚಿತ್ರದುರ್ಗ: ಕಳೆದೆರಡು ದಿನಗಳ ಹಿಂದೆ ಹವಾಮಾನ ಇಲಾಖೆ ನೀಡಿದ ಮುನ್ಸೂಚನೆಯಂತೆ ಚಿತ್ರದುರ್ಗ ಜಿಲ್ಲೆಯಲ್ಲಿ ಮಂಗಳವಾರ ತಡರಾತ್ರಿ ಮಳೆ ಅಬ್ಬರಿಸಿದೆ. ಚಳ್ಳಕೆರೆ ತಾಲ್ಲೂಕಿ ಬೇಡರೆಡ್ಡಿಹಳ್ಳಿಯಲ್ಲಿ ರಾಜ್ಯದಲ್ಲೇ ಅತೀ ಹೆಚ್ಚು ಮಳೆ ದಾಖಲಾಗಿದೆ.
ಮಂಗಳವಾರ ರಾತ್ರಿಯಿಂದ ಶುರುವಾದ ಮಳೆ ಇನ್ನಿಲ್ಲದಂತೆ ಸುರಿದಿದೆ. ಬೇಡರೆಡ್ಡಿಹಳ್ಳಿಯಲ್ಲಿ ಬರೋಬ್ಬರಿ 114 ಮಿಲಿ ಮೀಟರ್‌ನಷ್ಟು ಅಧಿಕ ಮಳೆಯಾಗಿದೆ. ಇದರಿಂದಾಗಿ ಸುತ್ತಲಿನ ಕೆರೆಕಟ್ಟೆಗಳು ಭರ್ತಿಯಾಗಿ ಕೋಡಿ ಬಿದ್ದಿವೆ. ಸಂಚಾರ ಸಂಪೂರ್ಣ ಅಸ್ತವ್ಯಸ್ಥವಾಗಿದೆ.
ಕ್ಲಿಕ್ ಮಾಡಿ ಓದಿ: ರಾತ್ರೋರಾತ್ರಿ ಕಣ್ಮುಚ್ಚಿ ಸುರಿದ ಮಳೆ | ಕೋಡಿ ಬಿದ್ದ ಕೆರೆಗಳು ಗ್ರಾಮಗಳು ಜಲಾವೃತ
ಬೇಡರೆಡ್ಡಿಹಳ್ಳಿ, ಮಲ್ಲಸಮುದ್ರ, ತಳಕು, ಕೋಡಿಹಳ್ಳಿ ಹಳ್ಳ ಭರ್ತಿಯಾಗಿ ತುಂಬಿ ಹರಿಯುತ್ತಿವೆ. ಕೋಡಿಹಳ್ಳಿ ಬಳಿ ಹೆದ್ದಾರಿ ಪಕ್ಕದ ಬೃಹತ್ ಕಾಂಪೌಂಡ್ ಗೋಡೆ ಕುಸಿದು ಅಪಾರ ಹಾನಿಯಾಗಿದೆ.
ಮಳೆ ನೀರು ಹರಿಯುತ್ತಿರುವ ಪರಿಣಾಮ ಬೇಡರೆಡ್ಡಿಹಳ್ಳಿ, ದೇವರೆಡ್ಡಿಹಳ್ಳಿ, ಗೌರಸಮುದ್ರ ಸಂಚಾರ ಮಾರ್ಗ ಬಂದ್ ಆಗಿದ್ದು, ಹಳ್ಳ ದಾಟಲು ಆಗದೇ ವಾಹನ ಸವಾರರು ವಾಪಸ್ ತೆರಳುತ್ತಿದ್ದಾರೆ.
ಉಳಿದಂತೆ ಬಾಗೇಪಲ್ಲಿಯ ಪಾಳ್ಯಕೆರೆ 103, ಜಗಳೂರು ತಾಲ್ಲೂಕಿನ ಗುತ್ತಿದುರ್ಗದಲ್ಲಿ 102 ಮಿ.ಮೀಟರ್ ಮಳೆಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.