ನಿಧನವಾರ್ತೆ
ಕೋಟೆ ಪ್ರೌಢಶಾಲೆಯ ಎಚ್.ವನಜಾಕ್ಷಮ್ಮ ನಿಧನ
CHITRADURGA NEWS | 02 MARCH 2025
ಚಿತ್ರದುರ್ಗ: ನಗರದ ಐತಿಹಾಸಿಕ ಸರ್ಕಾರಿ ಪ್ರೌಢಶಾಲೆ(ಕೋಟೆ) ಇಲ್ಲಿ ಡಿ.ಗ್ರೂಪ್ ನೌಕರರಾಗಿ ಕಾರ್ಯನಿರ್ವಹಿಸುತ್ತಿದ್ದ ಎಚ್.ವನಜಾಕ್ಷಮ್ಮ(50) ನಿಧನರಾಗಿದ್ದಾರೆ.
ಅನಾರೋಗ್ಯದಿಂದ ಚಿಕಿತ್ಸೆಗೆ ದಾಖಲಾಗಿದ್ದ ಅವರು, ಮಾರ್ಚ್ 1 ರಂದು ರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ಇದನ್ನೂ ಓದಿ: ಅತಿಥಿ ಶಿಕ್ಷಕರ ನೇಮಕಾತಿ | ನೇರ ಸಂದರ್ಶನಕ್ಕೆ ಆಹ್ವಾನ
ಮೃತರು ಓರ್ವ ಪುತ್ರ ಸೇರಿದಂತೆ ಅನೇಕ ಬಂಧುಗಳನ್ನು ಅಗಲಿದ್ದಾರೆ.
ಸ್ವಗ್ರಾಮ ಹೊಸದುರ್ಗ ತಾಲೂಕು ಬೆನಕನಹಳ್ಳಿಯಲ್ಲಿ ಇಂದು ಮಧ್ಯಾಹ್ನ 3.30ಕ್ಕೆ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ ಎಂದು ಮೃತರ ಕುಟುಂಬದ ಮೂಲಗಳು ತಿಳಿಸಿವೆ.