Connect with us

ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಿಂದ ಮಕ್ಕಳ ಸ್ನೇಹಿ ಗ್ರಂಥಾಲಯ | ನಾಳೆ ಉದ್ಘಾಟನೆ

ಮುಖ್ಯ ಸುದ್ದಿ

ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಿಂದ ಮಕ್ಕಳ ಸ್ನೇಹಿ ಗ್ರಂಥಾಲಯ | ನಾಳೆ ಉದ್ಘಾಟನೆ

CHITRADURGA NEWS | 20 FEBRUARY 2025

ಚಿತ್ರದುರ್ಗ: ಇಂದಿನ ವಿದ್ಯಾರ್ಥಿಗಳು ಮೊಬೈಲ್ ಆಕರ್ಷಣೆಯ ಹೊಡತಕ್ಕೆ ಸಿಕ್ಕಿ ತಮ್ಮ ಅಮೂಲವ್ಯವಾದ ಬದುಕಿನ ಮೌಲ್ಯಗಳನ್ನು ಮರೆಯುತ್ತಿದ್ದಾರೆ. ಅವರನ್ನು ಮತ್ತೆ ಸಾಹಿತ್ಯ, ಪುಸ್ತಕ, ಓದಿನ ಅಭಿರುಚಿಯತ್ತ ಆಕರ್ಷಿಸುವ ಸಲುವಾಗಿ ಶಾಲೆಯಲ್ಲಿ ಮಕ್ಕಳ ಸ್ನೇಹಿ ಗ್ರಂಥಾಲಯ ನಿರ್ಮಾಣಕ್ಕೆ ಕೈ ಹಾಕಿದ್ದಾರೆ ಸರ್ಕಾರಿ ಪ್ರೌಢಶಾಲೆ(ಕೋಟೆ)ಯ ಚಿತ್ರಕಲಾ ಶಿಕ್ಷಕ ನಿರಂಜನಮೂರ್ತಿ.

Also Read: ಫೆ.22 ಮತ್ತು 23 ರಂದು ಸರಿಗಮ ಸಂಗೀತ ನಾಟಕೋತ್ಸವ

“ನನ್ನ ಶಾಲೆ, ನನ್ನ ಕನಸು” ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಯಾವುದರಲ್ಲೂ ಕಡಿಮೆ ಇರಬಾರದು. ಖಾಸಗಿ ಶಾಲೆಯಲ್ಲಿ ಸಿಗುವ ಸೌಲಭ್ಯಗಳು ನನ್ನ ವಿದ್ಯಾರ್ಥಿಗಳಿಗೂ ಸಿಗಬೇಕೆಂಬ ಹಂಬಲ ಈ ಶಿಕ್ಷಕರದ್ದಾಗಿದೆ.

ಈ ಮಕ್ಕಳ ಸ್ನೇಹಿ ಗ್ರಂಥಾಲಯದಲ್ಲಿ ಸುಮಾರು ಐದು ಸಾವಿರ ಪುಸ್ತಕಗಳನ್ನು ಹೊಂದಿದ್ದು ಮಕ್ಕಳು ಯಾವುದೇ ಭಯವಿಲ್ಲದೆ ತಮಗೆ ಇಷ್ಟವಾದ ಪುಸ್ತಕವನ್ನು ಓದಿ ಆ ಪುಸ್ತಕದ ಪರಿಚಯ ಮಾಡಲು ಒಂದು ವೇದಿಕೆಯನ್ನೂ ನಿರ್ಮಿಸಿದ್ದಾರೆ.

 ಸರ್ಕಾರಿ ಪ್ರೌಢಶಾಲೆ (ಕೋಟೆ) ಸುಮಾರು 80 ವರ್ಷಗಳ ಇತಿಹಾಸ ಪ್ರಸಿದ್ಧಿಯನ್ನು ಪಡೆದಿರುವ ಶಾಲೆಯಾಗಿದ್ದು, ಇದು ಒಂದು ಕಾಲಘಟ್ಟದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ನೀಡಿ ಕಲೆ, ಸಾಹಿತ್ಯ, ವಿಜ್ಞಾನ, ಸಾಮಾಜಿಕ, ರಾಜಕೀಯ ಕ್ಷೇತ್ರದಲ್ಲಿ ಈ ನಾಡಿಗೆ ಕೀರ್ತಿ ತಂದುಕೊಟ್ಟಿದೆ.

Also Read: ಪ್ರವಾಸೋದ್ಯಮ ಇಲಾಖೆಯಲ್ಲಿ ವಿವಿಧ ತರಬೇತಿಗೆ ಅರ್ಜಿ ಆಹ್ವಾನ

ಇಂತಹ ಶಾಲೆಗೆ ಏನಾದರೂ ಶಾಶ್ವತ ಕೊಡುಗೆ ನೀಡಬೇಕು ಎಂದು ಈ ಕಾರ್ಯಕ್ಕೆ ಮುಂದಾಗಿದ್ದು, ಸಾಕಷ್ಟು ಶ್ರಮವಹಿಸಿ ಸಿದ್ಧಪಡಿಸಿರುವ ಈ ಗ್ರಂಥಾಲಯಕ್ಕೆ “ಮಿಗುವ ನಕ್ಷತ್ರಗಳ ಕೊಠಡಿ” ಎಂದು ಹೆಸರಿಡಲಾಗಿದೆ. ಇದೇ ಫೆ.21ರಂದು ಶುಕ್ರವಾರ ಗ್ರಂಥಾಲಯದ ಉದ್ಘಾಟನೆ ಹಮ್ಮಿಕೊಳ್ಳಲಾಗಿದೆ.

ಫೆ.21ರಂದು ಮಕ್ಕಳ ಸ್ನೇಹಿ ಗ್ರಂಥಾಲಯ ಪ್ರಾರಂಭೋತ್ಸವ: 

ಚಿತ್ರದುರ್ಗ ನಗರದ ಸರ್ಕಾರಿ ಪ್ರೌಢಶಾಲೆ (ಕೋಟೆ)ಯಲ್ಲಿ ಇದೇ ಫೆ.21ರಂದು ಬೆಳಿಗ್ಗೆ 11ಕ್ಕೆ ಮಕ್ಕಳ ಸ್ನೇಹಿ ಗ್ರಂಥಾಲಯ ಪ್ರಾರಂಭೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

Also Read: ಮಾ.1 ರಿಂದ 20 ರವರೆಗೆ PUC ಎಕ್ಸಾಮ್ | ಜಿಲ್ಲೆಯಲ್ಲಿ 26 ಪರೀಕ್ಷಾ ಕೇಂದ್ರಗಳು | 15991 ವಿದ್ಯಾರ್ಥಿಗಳು 

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಉದ್ಘಾಟನೆ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಆರ್.ಮಂಜುನಾಥ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್, ಸರ್ಕಾರಿ ಪ್ರೌಢಶಾಲೆ (ಕೋಟೆ) ಮುಖ್ಯ ಶಿಕ್ಷಕಿ ಸೌಮ್ಯ ಕುಮಾರಿ ಭಾಗವಹಿಸುವರು.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version