Connect with us

ನಂದಿ ರಥಯಾತ್ರೆ | ಹಸು ಇದ್ದ ಮನೆಗೆ ವಾಸ್ತು ಬೇಕಾಗಿಲ್ಲ | ಕುಮಾರಸ್ವಾಮಿ

Nandi Rathayatre chitradurga

ಮುಖ್ಯ ಸುದ್ದಿ

ನಂದಿ ರಥಯಾತ್ರೆ | ಹಸು ಇದ್ದ ಮನೆಗೆ ವಾಸ್ತು ಬೇಕಾಗಿಲ್ಲ | ಕುಮಾರಸ್ವಾಮಿ

CHITRADURGA NEWS | 21 FEBRUARY 2025

ಚಿತ್ರದುರ್ಗ: ಹಿಂದೆ ನಮ್ಮ ಮನೆಗಳ ಮುಂದೆ ಹಸು, ಎತ್ತುಗಳಿರುತ್ತಿದ್ದವು. ಹೀಗೆ ಹಸು, ಎತ್ತು ಇದ್ದ ಮನೆಗೆ ವಾಸ್ತು ಬೇಕಾಗಿರಲಿಲ್ಲ. ಹಸು ಇದ್ದ ಕಡೆ ಋಣಾತ್ಮಕ ಅಂಶಗಳು ಇರುತ್ತಿರಲಿಲ್ಲ ಎಂದು ಪ್ರಾಂತ ಗೋ ಸೇವಾ ಪ್ರಮುಖ್ ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

ಗೋ ಸೇವಾ ಗತಿವಿಧಿ ಕರ್ನಾಟಕ ವತಿಯಿಂದ ಆಯೋಜಿಸಿದ್ದ ‘ನಂದಿ ರಥಯಾತ್ರೆ’ ಕಾರ್ಯಕ್ರಮ ಗುರುವಾರ ಸಂಜೆ ಚಿತ್ರದುರ್ಗ ನಗರ ಪ್ರವೇಶಿಸಿ, ಮುಖ್ಯ ರಸ್ತೆಯಲ್ಲಿ ಸಂಚರಿಸಿದ ನಂತರ ಕಬೀರಾನಂದ ಮಠದ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇದನ್ನೂ ಓದಿ: ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಿಂದ ಮಕ್ಕಳ ಸ್ನೇಹಿ ಗ್ರಂಥಾಲಯ | ನಾಳೆ ಉದ್ಘಾಟನೆ

ಹಿಂದೆ ಹಸು ನಮ್ಮ ಮನೆಯ ಆಸ್ಪತ್ರೆ, ಹಸು ನಮ್ಮ ಮನೆಯ ಬ್ಯಾಂಕ್ ಆಗಿತ್ತು. ಆದರೆ, ಇಂದು ಹಸುವಿನ ಮೆರವಣಿಗೆ ಮಾಡಿ ಜಾಗೃತಿ ಮೂಡಿಸಬೇಕಾದ ಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ತಾಯಿಯ ಎದೆಹಾಲು ಬಿಟ್ಟ ನಂತರ ನಾವು ಸಾಯುವವರೆಗೆ ಹಸುವಿನ ಹಾಲು ಕುಡಿಯುತ್ತೇವೆ. ಆದರೆ, ಅಂತಹ ಹಸುವನ್ನು ಬಿಟ್ಟು ಇಂದು ಎಚ್‍ಎಫ್, ಜೆರ್ಸಿ ಎಂಬ ಹಸುವಿನ ರೀತಿಯ ಪ್ರಾಣಿ ಹಾಲು ಕುಡಿದು ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದೇವೆ.

ಇದನ್ನೂ ಓದಿ: ಮಾ.1 ರಿಂದ 20 ರವರೆಗೆ PUC ಎಕ್ಸಾಮ್ | ಜಿಲ್ಲೆಯಲ್ಲಿ 26 ಪರೀಕ್ಷಾ ಕೇಂದ್ರಗಳು | 15991 ವಿದ್ಯಾರ್ಥಿಗಳು 

ದೇಶಕ್ಕೆ 70 ಲಕ್ಷ ಲೀ. ಹಾಲು ಬೇಕು. ಆದರೆ, ಉತ್ಪಾಧನೆ 20 ಲಕ್ಷ ಲೀ. ಮಾತ್ರ ಆಗುತ್ತಿದೆ. ದೇಸಿ ಹಸುವಿನ ಹಾಲು ಬಿಟ್ಟು ಬೇರೆ ತಳಿಯ ಹಾಲು ಬಳಕೆ ಮಾಡಿದ ಪರಿಣಾಮ ಚಿಕ್ಕ ಮಕ್ಕಳು ಋತುಮತಿಯಾಗುತ್ತಿದ್ದಾರೆ. ಎಳೆಯ ವಯಸ್ಸಿಗೆ ದೃಷ್ಟಿ ಮಂದವಾಗುತ್ತಿದೆ. ಇದಕ್ಕೆಲ್ಲಾ ನಾವು ಸೇವಿಸುತ್ತಿರುವ ಆಹಾರವೇ ಕಾರಣ ಎಂದು ಹೇಳಿದರು.

ನಂದಿ ರಥಯಾತ್ರೆ

ಹತ್ತು ತಿಂಗಳ ಮಗುವಿಗೆ ಅನ್ನಪ್ರಾಶನ ಮಾಡುವ ಸಂಪ್ರದಾಯವಿದೆ. ಆದರೆ, ನಾವು ಸೇವಿಸುವ ಅಥವಾ ಮಗುವಿಗೆ ನೀಡುವ ಆಹಾರದಲ್ಲಿ ಎಷ್ಟು ವಿಷ ಇದೆ ಎಂದು ಆಲೋಚನೆ ಮಾಡಬೇಕಾಗಿದೆ. 40-50 ವರ್ಷಗಳ ಹಿಂದೆ ನಮ್ಮ ಜಮೀನಿನಲ್ಲಿ ಓಡಾಡಿದರೆ ಹೂವಿನ ಮೇಲೆ ನಡೆದ ಅನುಭವ ಆಗುತ್ತಿತ್ತು. ಆದರೆ, ಈಗ ಮುಳ್ಳಿನ ಮೇಲೆ ನಡೆದ ಅನುಭವ ಆಗುತ್ತಿದೆ ಎಂದರು.

ಇದನ್ನೂ ಓದಿ: ಪ್ರವಾಸೋದ್ಯಮ ಇಲಾಖೆಯಲ್ಲಿ ವಿವಿಧ ತರಬೇತಿಗೆ ಅರ್ಜಿ ಆಹ್ವಾನ

ಇಂದು ರೈತನಿಗೆ ವಿಷಮುಕ್ತ ಆಹಾರ ಕೊಡಲು ಆಗುತ್ತಿಲ್ಲ. ನಮ್ಮತನ ಎನ್ನುವ ಎಲ್ಲವನ್ನೂ ಕಳೆದುಕೊಂಡು ಪ್ರಗತಿಪರ ರೈತ ಎಂದು ಹೇಳಿಕೊಳ್ಳುವ ದುಸ್ಥಿತಿಯಿದೆ. ಹಿಂದೆ ನಮ್ಮ ಜಮೀನಿನ ಗೊಬ್ಬರಕ್ಕಾಗಿ ಹಸು ಸಾಕುತ್ತಿದ್ದರು. ಹಾಲು ಮಾರಾಟಕ್ಕೆ ಅಲ್ಲ. ಮನುಷ್ಯ ಆರ್ಥಿಕತೆ ಹಿಂದೆ ಬಿದ್ದು ಹಾಲು ಮಾರಾಟ ಮಾಡುತ್ತಿದ್ದಾನೆ. ಕರುವಿಗೂ ಹಾಲು ಬಿಡದೆ ಎಲ್ಲವನ್ನೂ ಕರೆದುಕೊಂಡು ನಾವು ದರಿದ್ರರಾಗುತ್ತಿದ್ದೇವೆ ಎಂದು ತಿಳಿಸಿದರು.

ಕರು ಹಾಲು ಕುಡಿಯುತ್ತಿರುವಾಗಲೇ ಹಾಲು ಕರೆದರೆ ಆ ತಾಯಿ ಬೇಲಾದಷ್ಟು ಹಾಲು ಕೊಡುತ್ತಾಳೆ. ಕರು ಕಟ್ಟಿಹಾಕಿ ಹಾಲು ಕರೆದರೆ ನೊಂದುಕೊಂಡು ಹಾಲು ಕೊಡುತ್ತಾಳೆ. ಆಗ ಹಾಲು ಕಡಿಮೆಯಾಯಿತು ಎನ್ನುತ್ತೇವೆ. ಹಸು, ಎತ್ತು ಇದ್ದ ಮನೆಗೆ ವಾಸ್ತು ಬೇಕಾಗಿರಲಿಲ್ಲ. ಆ ಮನೆಗೆ ಋಣಾತ್ಮಕ ಶಕ್ತಿ ಬರುತ್ತಿರಲಿಲ್ಲ ಎಂದರು.

ಇದನ್ನೂ ಓದಿ: ಇಂದು ಸಂಜೆ ಚಿತ್ರದುರ್ಗಕ್ಕೆ ‘ನಂದಿ ರಥಯಾತ್ರೆ’

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಸಂಘ ಪರಿವಾರದ ಪ್ರಮುಖರಾದ ಜ್ಞಾನೇಶ್, ರಾಜಕುಮಾರ್, ಶ್ರೀನಾಥ್, ಉಮೇಶ್, ದೇವರಾಜ್ ಕೋಟ್ಲಾ, ಓಂಕಾರ್, ರುದ್ರೇಶ್, ಸಂಪತ್‍ಕುಮಾರ್, ಭಾರ್ಗವಿ ದ್ರಾವಿಡ್, ಛಲವಾದಿ ತಿಪ್ಪೇಸ್ವಾಮಿ, ಯೋಗೀಶ್ ಸಹ್ಯಾದ್ರಿ ಇತರರಿದ್ದರು.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version