ಲೋಕಸಮರ 2024
ಕೋಟೆನಾಡಿನಲ್ಲಿ ಸಿಎಂ ಸಿದ್ದರಾಮಯ್ಯ | ದುರ್ಗದ ಬಗ್ಗೆ ಐದು ಪ್ರಮುಖ ವಿಚಾರ ಪ್ರಸ್ತಾಪ
CHITRADURGA NEWS | 05 MARCH 2024
ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಅಭ್ಯರ್ಥಿಗಳು ತಡವಾಗಿ ಅಭ್ಯರ್ಥಿ ಘೋಷಣೆ ಮಾಡಿವೆ.
ಆರಂಭದಲ್ಲಿ ಚುನಾವಣಾ ವಾತಾವರಣವೇ ಇರಲಿಲ್ಲ. ಆದರೆ, ದಿನೇ ದಿನೇ ಕ್ಷೇತ್ರ ರಂಗೇರುತ್ತಿದೆ. ಅದರಲ್ಲೂ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಗುರುವಾರ ಚಿತ್ರದುರ್ಗ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರಿಂದ ತುಂಬಿ ಹೋಗಿತ್ತು.
ಇದನ್ನೂ ಓದಿ: ನಾಮಪತ್ರ ಸಲ್ಲಿಸುವ ಅವಧಿ ಮುಕ್ತಾಯ | ಚಿತ್ರದುರ್ಗ ಲೋಕಸಭೆಗೆ ಸಲ್ಲಿಕೆಯಾದ ನಾಮಪತ್ರಗಳೆಷ್ಟು ಗೊತ್ತಾ
ಒಂದು ಕಡೆ ಕಾಂಗ್ರೆಸ್ ಸಮಾವೇಶ ಆಯೋಜಿಸಿ ಸದ್ದು ಮಾಡಿದರೆ, ಬಿಜೆಪಿ ಭರ್ಜರಿ ರೋಡ್ ಶೋ ಮೂಲಕ ಸದ್ದು ಮಾಡಿದೆ.
ಕಾಂಗ್ರೆಸ್ ಪಾಳೆಯದಲ್ಲಿ ಖುದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಭಾವಿ ಸಚಿವ ಸತೀಶ್ ಜಾರಕಿಹೊಳಿ ಬಂದು ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಪರ ಪ್ರಚಾರ ಮಾಡಿದರೆ, ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಪರ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಿಎಂ ಸದಾನಂದಗೌಡ, ಮಾಜಿ ಸಚಿವರಾದ ಮಾಧುಸ್ವಾಮಿ, ಶ್ರೀರಾಮುಲು, ಮುರುಗೇಶ್ ನಿರಾಣಿ, ಜನಾರ್ಧನ ರೆಡ್ಡಿ ಬಂದು ರಣ ಕಹಳೆ ಮೊಳಗಿಸಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ, ವಿಜಯೇಂದ್ರ ಆಗಮಿಸಿದ ಹೆಲಿಕಾಪ್ಟರ್ ತಪಾಸಣೆ
ಕಾಂಗ್ರೆಸ್ ಅಭ್ಯರ್ಥಿ ಪರ ಚುನಾವಣಾ ಪ್ರಚಾರದಲ್ಲಿ ಭಾಗಿಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಮುಖ ಐದು ಅಂಶಗಳನ್ನು ಉಲ್ಲೇಖಿಸಿದ್ದಾರೆ. ಆ ಕುರಿತು ಕೆಳಗೆ ಮಾಹಿತಿ ಇದೆ.
- • ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳಗೆ ಇಲ್ಲಿನ ಮತದಾರರು ಪ್ಲೀಸ್ ಗೋ ಬ್ಯಾಕ್ ಬಾಗಲಕೋಟೆ ಎನ್ನಬೇಕು.
- ಪಕ್ಕದಲ್ಲೇ ಬಿಜಾಪುರ ಮೀಸಲು ಕ್ಷೇತ್ರವಿದ್ದರೂ ಚಿತ್ರದುರ್ಗಕ್ಕೆ ಬಂದಿದ್ದಾರೆ. ರಮೇಶ್ ಜಿಗಜಿಣಗಿ ಇವರ ನೆಂಟರು ಎನ್ನುವ ಕಾರಣಕ್ಕೆ ಅಲ್ಲಿ ಸ್ಪರ್ಧೆ ಮಾಡಿಲ್ಲ.
- ಚಿತ್ರದುರ್ಗ ಸಂಸದರಾಗಿದ್ದ ಎ.ನಾರಾಯಣಸ್ವಾಮಿ ಹೆಸರು ಕೆಡಿಸಿಕೊಂಡಿದ್ದಾರೆ. ಕ್ಷೇತ್ರಕ್ಕೆ ಬರದೆ ದೆಹಲಿಯಲ್ಲಿ ಎಸಿ ರೂಮಿನಲ್ಲಿ ಕುಳಿತಿದ್ದರು. ಈ ಕಾರಣಕ್ಕೆ ಇಲ್ಲಿಗೆ ಗೋವಿಂದ ಕಾರಜೋಳ ಕರೆತಂದಿದ್ದಾರೆ ಎಂದರು.
- ಚಿತ್ರುದುರ್ಗ ಲೋಕಸಭಾ ಕ್ಷೇತ್ರದ ಎಂಟರಲ್ಲಿ ಏಳು ಕಡೆಗಳಲ್ಲಿ ನಮ್ಮ ಶಾಸಕರು ಗೆದ್ದಿದ್ದಾರೆ. ಇಷ್ಟು ಜನರದ್ದು ಸೇರಿದರೆ ಎರಡು ಲಕ್ಷ ಮತಗಳ ಅಂತರ ಇದೆ. ಇಷ್ಟು ಮತಗಳ ಅಂತರದಲ್ಲಿ ಬಿ.ಎನ್.ಚಂದ್ರಪ್ಪ ಗೆಲ್ಲುತ್ತಾರೆ.
ಇದನ್ನೂ ಓದಿ: ಮುಖ್ಯಮಂತ್ರಿಗೆ ಶ್ರೀಗಳಿಂದ ಆಶೀರ್ವಾದ | ಭೋವಿ ಗುರುಪೀಠಕ್ಕೆ ಭೇಟಿ
ಚಿತ್ರದುರ್ಗ ಕಾಂಗ್ರೆಸ್ ಭದ್ರಕೋಟೆ. ಇಲ್ಲಿ ಕಾಂಗ್ರೆಸ್ ಸೋತಿದ್ದು ಬಹಳ ಕಡಿಮೆ. ಎಲ್ಲ ಶಾಸಕರು ಈ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು.
ಮುಂದಿನ ನಾಲ್ಕು ವರ್ಷ ನಮ್ಮ ಸರ್ಕಾರ ಅಧಿಕಾರದಲ್ಲಿರುತ್ತದೆ. ಈ ಅವಧಿಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಯನ್ನು ಪೂರ್ಣಗೊಳಿಸಿ ನೀರು ಹರಿಸುತ್ತೇವೆ. ಈಗಾಗಲೇ 9 ಸಾವಿರ ಕೋಟಿ ವೆಚ್ಚವಾಗಿದ್ದು, ಉಳಿದ 13 ಸಾವಿರ ಕೋಟಿ ರೂ. ಅನುದಾನ ಕೊಟ್ಟು ಕೆಲಸ ಮಾಡುತ್ತೇವೆ. ಕೇಂದ್ರ ಸರ್ಕಾರದ ಬಜೆಟ್‍ನಲ್ಲಿ 5300 ಕೋಟಿ ಅನುದಾನ ಘೋಷಿಸಿದರೂ ಈವರೆಗೆ 1 ರೂಪಾಯಿ ಕೊಟ್ಟಿಲ್ಲ.
| ಸಿದ್ದರಾಮಯ್ಯ, ಮುಖ್ಯಮಂತ್ರಿ.
ಇದನ್ನೂ ಓದಿ: ಚೌಕಾಸಿ ಇಲ್ಲದೆ ತರಕಾರಿ ಖರೀಧಿಸಿದ ಗೋವಿಂದ ಕಾರಜೋಳ
ಬಿಜೆಪಿಯವರು ಚಿತ್ರದುರ್ಗವನ್ನು ಟೂರಿಂಗ್ ಟಾಕೀಸ್ ಮಾಡಿಕೊಂಡಿದ್ದಾರೆ. ಹಿಂದೆ ಆನೆಕಲ್ ಕಡೆಯಿಂದ ಒಬ್ಬರು ಬಂದು ವಾಪಾಸು ಹೋಗಿದ್ದಾರೆ. ಈಗ ಮುಧೋಳದಿಂದ ಬಂದಿದ್ದಾರೆ. ಹಿಂದಿನ ಬಿಜೆಪಿ ಸಂಸದರು ಬಹಳ ದೂರದಿಂದ ಬಂದಿದ್ದರು. ಈ ಬಾರಿ ಅವರು ಗೆಲ್ಲುವುದಿಲ್ಲ ಎನ್ನುವ ಕಾರಣಕ್ಕೆ ಮತ್ತಷ್ಟು ದೂರದಿಂದ ಇನ್ನೊಬ್ಬರನ್ನು ಕರೆತಂದಿದ್ದಾರೆ.
| ಸತೀಶ್ ಜಾರಕಿಹೊಳಿ. ಸಚಿವರು.