Connect with us

    ಏಕನಾಥೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ | ಮೇಲುದುರ್ಗದಲ್ಲಿ ಭಂಡಾರ ಪೂಜೆ

    ಮುಖ್ಯ ಸುದ್ದಿ

    ಏಕನಾಥೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ | ಮೇಲುದುರ್ಗದಲ್ಲಿ ಭಂಡಾರ ಪೂಜೆ

    CHITRADURGA NEWS | 27 APRIL 2024
    ಚಿತ್ರದುರ್ಗದ ಅಧಿದೇವತೆ ಶ್ರೀ ಏಕನಾಥೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವಕ್ಕೆ ಶನಿವಾರ ವಿದ್ಯುಕ್ತ ಚಾಲನೆ ದೊರೆಯಿತು. ಮಂಗಳವಾರ (ಏ.23 ರಂದು) ತಡರಾತ್ರಿಯಿಂದ ಜಾತ್ರೆಗೆ ಅಧಿಕೃತ ಸಾರು ಹಾಕಲಾಯಿತು. ಮೇ 7ರವರೆಗೆ ನಿತ್ಯ ಪೂಜಾ ಕಾರ್ಯ ಜರುಗಲಿವೆ.

    ಜಾತ್ರಾ ಮಹೋತ್ಸವ ಮೊದಲ ಭಂಡಾರದ ಪೂಜೆ ಶನಿವಾರ ಬೆಳಿಗ್ಗೆ ಮೇಲುದುರ್ಗದ ದೇವಸ್ಥಾನದಲ್ಲಿ ನೆರವೇರಿಸಲಾಯಿತು. ಇದೇ ವೇಳೆ ಕಂಕಣಧಾರಣೆ, ಮದುವಣಗಿತ್ತಿ ಮಹಾರುದ್ರಾಭಿಷೇಕ ನಡೆಯಿತು. 27, 28, 29ರಂದು ರಾತ್ರಿ ವೇಳೆ ದೇವಿಯ ಉತ್ಸವ ಮೂರ್ತಿಯನ್ನು ಐತಿಹಾಸಿಕ ಕೋಟೆಯ ಮೇಲುದುರ್ಗದ ದೇವಿ ದೇಗುಲದಿಂದ ಕೆಳಗಿನ ದುರ್ಗಕ್ಕೆ ಬುರುಜನಹಟ್ಟಿ ಭಕ್ತರು ವಿಶೇಷ ಪುಷ್ಪಾಲಂಕಾರದೊಂದಿಗೆ ಸಿಂಹವಾಹಿನಿ, ಸರ್ಪೋತ್ಸವ ಹಾಗೂ ನವಿಲು ವಾಹನೋತ್ಸವದ ಮೂಲಕ ಸುಸಜ್ಜಿತ ಉಚ್ಛಾಯದಲ್ಲಿ ಪ್ರತಿಷ್ಠಾಪಿಸಿ ಕರೆತರಲಿದ್ದಾರೆ.

    ಕ್ಲಿಕ್ ಮಾಡಿ ಓದಿ: ಶ್ರೀ ಶಿವಕುಮಾರ ಸ್ವಾಮೀಜಿ ರಥೋತ್ಸವಕ್ಕೆ ಸಾಣೇಹಳ್ಳಿ ಸಜ್ಜು | ವಚನಗೀತೆ, ನಾಟಕದ ಮೂಲಕ ಗುರು ಸ್ಮರಣೆ

    ಏ.30 ರಂದು ರಾತ್ರಿ ಭಂಡಾರದ ಪೂಜೆ ನಡೆಯಲಿದೆ. 1ರಂದು ಕೋಟೆಯ ಮೇಲಿರುವ ದೇಗುಲದಲ್ಲಿ ದೇವಿಗೆ ದೊಡ್ಡಭಂಡಾರದ ಪೂಜೆ ನೆರವೇರಲಿದೆ. ನಂತರ ವಿವಿಧ ಪುಷ್ಪಗಳಿಂದ ಸಿಂಗರಿಸಿ, ಅಶ್ವ ವಾಹನದ ಮೇಲೆ ದೇವಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ನಗರಕ್ಕೆ ಜಾತ್ರೆಯ ಸಂಪ್ರದಾಯದಂತೆ ಕರೆತರಲಾಗುವುದು.

    ಕ್ಲಿಕ್ ಮಾಡಿ ಓದಿ: 29ರಿಂದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ | 9 ಕೇಂದ್ರಗಳಲ್ಲಿ ಸಜ್ಜು

    ಚಂದ್ರಮಾಸ ಹೊಂಡದಲ್ಲಿ ದೇವಿಗೆ ಗಂಗಾಪೂಜೆ, ಕುಂಭಾಭಿಷೇಕ ಜರುಗಲಿದೆ. ರಾತ್ರಿ ಜಿಲ್ಲಾಧಿಕಾರಿ ಹಾಗೂ ಗುಡಿಗೌಡರ ಮನೆಯಲ್ಲಿ ಮಹಾಮಂಗಳಾರತಿ ಪೂಜೆ ನಡೆಯಲಿದೆ. ನಂತರ ಪಾದದಗುಡಿಗೆ ಮೂರ್ತಿಯನ್ನು ಕರೆತರಲಾಗುತ್ತದೆ.

    2ರಂದು ಕರುವಿನಕಟ್ಟೆ ವೃತ್ತ, ಚಿಕ್ಕಪೇಟೆ, ಮೆದೇಹಳ್ಳಿ ಭಕ್ತರಿಂದ ಪೂಜೆ ಸ್ವೀಕಾರ ನಡೆಯಲಿದೆ. 3 ರಂದು ಕರುವಿನಕಟ್ಟೆ ವೃತ್ತ, ಜೋಗಿಮಟ್ಟಿ ರಸ್ತೆ ಸೇರಿ ಗಂಗಾಂಬಿಕ ಬೆಸ್ತರ ಸಮುದಾಯ ಒಳಗೊಂಡು ಭಕ್ತಸಮೂಹದಿಂದ ವಿವಿಧ ಬಗೆಯ ಪುಷ್ಪ, ವಸ್ತುಗಳಿಂದ ಅಲಂಕಾರದ ಸೇವೆ ನೆರವೇರಲಿದೆ.

    ಬೆಳಗ್ಗೆ 10ರಿಂದ ರಾತ್ರಿ 9ರವರೆಗೆ ನಗರದ ರಾಜಬೀದಿಗಳಲ್ಲಿ ಸಕಲ ಮಂಗಳ ವಾದ್ಯಗಳೊಂದಿಗೆ ದೇವತೆಯ ಉತ್ಸವ ಮೂರ್ತಿಯ ಭವ್ಯ ರಥೋತ್ಸವದ ಮೆರವಣಿಗೆ ನಡೆಯಲಿದೆ. ಈ ಸಂದರ್ಭದಲ್ಲಿ ಭಕ್ತರಿಂದ ಮೀಸಲು ಅರ್ಪಣೆ ಹಾಗೂ ಹರಕೆ ಸಲ್ಲಿಕೆಯಾಗಲಿದೆ.

    4ರಂದು ಸಂಜೆ 5.30ಕ್ಕೆ ಪಾದಗುಡಿ ಬಳಿ ಏಕನಾಥೇಶ್ವರಿ ದೇವಿಯೂ ವಿವಿಧ ಭಕ್ತರಿಂದ ಪೂಜೆ ಸ್ವೀಕರಿಸಿದ ನಂತರ ಸಿಡಿ ಉತ್ಸವ ಮಹಾಮಂಗಳಾರತಿ ನಡೆಯಲಿದೆ. ಬಳಿಕ ಕೋಟೆಯೊಳಗಿನ ಮೂಲ ದೇಗುಲದಲ್ಲಿ ಗುಡಿದುಂಬುವ ಕಾರ್ಯಕ್ರಮದೊಂದಿಗೆ ದೇವಿಯನ್ನು ಸ್ವಸ್ಥಾನಕ್ಕೆ ಕರೆತರಲಾಗುವುದು.

    5 ರಂದು ಬೆಟ್ಟದ ಮೇಲೆ ಓಕಳಿ ಉತ್ಸವ ನಡೆಯಲಿದೆ. 7ರವರೆಗೂ ದೇವಿಗೆ ವಿಶೇಷ ಪೂಜಾ ಕೈಂಕರ್ಯ ನಡೆಯಲಿದ್ದು, ಅಂದು ಬೆಳಿಗ್ಗೆ 10.30ಕ್ಕೆ ಕಂಕಣ ವಿಸರ್ಜನೆ, ಗಂಗಾ ಪೂಜೆಯೊಂದಿಗೆ ದೇವಿಯ ಜಾತ್ರೆ ಮುಕ್ತಾಯವಾಗಲಿದೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top