Connect with us

    Cyber crime: ಫೇಸ್‌ಬುಕ್‌ ಜಾಹೀರಾತು ಮೇಲೆ ಕ್ಲಿಕ್‌ | ಲಕ್ಷಾಂತರ ರೂಪಾಯಿ ವಂಚನೆ

    cyber money fraud

    ಕ್ರೈಂ ಸುದ್ದಿ

    Cyber crime: ಫೇಸ್‌ಬುಕ್‌ ಜಾಹೀರಾತು ಮೇಲೆ ಕ್ಲಿಕ್‌ | ಲಕ್ಷಾಂತರ ರೂಪಾಯಿ ವಂಚನೆ

    CHITRADURGA NEWS | 30 AUGUST 2024
    ಚಿತ್ರದುರ್ಗ: ಫೇಸ್‌ ಬುಕ್‌ ಜಾಹೀರಾತಿನ ಮೇಲೆ ಕ್ಲಿಕ್ ಮಾಡಿ ವರ್ತಕರೊಬ್ಬರು ಲಕ್ಷಾಂತರ ರೂಪಾಯಿ ಕಳೆದುಕೊಂಡ ಘಟನೆ ಹಿರಿಯೂರಿನಲ್ಲಿ ನಡೆದಿದೆ.

    ಹಿರಿಯೂರು ನಗರದ ವರ್ತಯ ಎಸ್‌.ಸುಹಾಸ್‌ 2 ತಿಂಗಳ ಅಂತರದಲ್ಲಿ ₹ 9.59 ಲಕ್ಷ ಕಳೆದುಕೊಂಡಿದ್ದಾರೆ. ಜೂನ್‌ 17 ರಂದು ರಾತ್ರಿ 7 ಗಂಟೆ ಸಮಯದಲ್ಲಿ ಫೇಸ್‌ಬುಕ್‌ ನ ಜಾಹೀರಾತು ಮೇಲೆ ಕ್ಲಿಕ್‌ ಮಾಡಿದ್ದಾರೆ. ಕೆಲ ಕ್ಷಣಕ್ಕೆ ವ್ಯಾಟ್ಸ್‌ ಆಫ್‌ಗೆ ಮೇಸೆಜ್‌ ಬಂದಿದ್ದು, ಸ್ಟಾಕ್‌ ಮಾರ್ಕೆಟ್‌ ಟ್ರೇಡಿಂಗ್‌ನಲ್ಲಿ ಹಣ ಹಾಕಿದರೆ ಹೆಚ್ಚಿನ ಲಾಭಾಂಶ ಬರುತ್ತದೆ ಎಂದು ತಿಳಿಸಿದ್ದಾರೆ.

    ಕ್ಲಿಕ್ ಮಾಡಿ ಓದಿ: ನಡೆದಂತೆ ನುಡಿ ನುಡಿದಂತೆ ನಡೆಯುವ ಮಾರ್ಗ ತೋರಿದ ಶರಣರು

    ಇದನ್ನು ನಂಬಿದ ಸುಹಾಸ್‌ಗೆ ₹ 1,16,000 ಶೇರ್‌ ಆರ್ಲಟ್‌ ಮಾಡಿ ಮಾರಲು ತಿಳಿಸಿದ್ದಾರೆ. ಬಳಿಕ ₹ 2,55,000 ಲಾಭಾಂಶ ಬಂದಿದೆ ಎಂದು ತಿಳಿಸಿದ್ದಾರೆ. ಮತ್ತೊಮ್ಮೆ ನಿಮಗೆ ಶೇರ್‌ ಆರ್ಲಟ್‌ ಆಗಿದ್ದು, ₹ 1,80,000 ಹಣ ಹಾಕಲು ತಿಳಿಸಿದ್ದಾರೆ. ಬಳಿಕ ಸುಹಾಸ್‌ ಹಾಗೂ ಆತನ ಪತ್ನಿ, ಸ್ನೇಹಿತನ ಖಾತೆಯಿಂದ ಆಗಸ್ಟ್‌ 16 ಹಾಗೂ 22 ರಂದು ₹ 9,59,359 ವರ್ಗಾವಣೆ ಮಾಡಿಸಿಕೊಂಡು ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

    ಈ ಬಗ್ಗೆ ಚಿತ್ರದುರ್ಗದ ಸೈಬರ್ ಅಪರಾಧ ಠಾಣೆಯಲ್ಲಿ ಮಂಗಳವಾರ ಸಂಜೆ ದೂರು ದಾಖಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ಹಣವನ್ನು ಮರಳಿ ಕೊಡಿಸುವಂತೆ ದೂರುದಾರರು ಕೋರಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಕ್ರೈಂ ಸುದ್ದಿ

    To Top