Connect with us

    ಆಸ್ಟ್ರೇಲಿಯಾ ತಂಡವನ್ನು ಬಗ್ಗು ಬಡಿಯಲಿದೆ ಭಾರತ

    ಮುಖ್ಯ ಸುದ್ದಿ

    ಆಸ್ಟ್ರೇಲಿಯಾ ತಂಡವನ್ನು ಬಗ್ಗು ಬಡಿಯಲಿದೆ ಭಾರತ

    https://chat.whatsapp.com/Jhg5KALiCFpDwME3sTUl7x

    ಚಿತ್ರದುರ್ಗ ನ್ಯೂಸ್.ಕಾಂ:

    ಭಾರತಕ್ಕೆ ವಿಜಯಮಾಲೆ

    ಭಾರತ ವಿಶ್ವ ಗುರುವಾಗುತ್ತಿದ್ದು, ಕ್ರಿಕೆಟ್‌ನಲ್ಲೂ ಕೂಡ ಬೇರೆ ದೇಶಗಳು ಭಾರತದತ್ತ ಮುಖ ಮಾಡುತ್ತಿವೆ. ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಬಗ್ಗು ಬಡೆದು ಭಾರತ ವಿಜಯಮಾಲೆ ಹಾಕಿಕೊಳ್ಳಲಿದೆ. ಈ ಸಲ ಕಪ್ ನೂರಕ್ಕೆ ನೂರರಷ್ಟು ನಮ್ಮದೇ.

    | ಸಿ.ರುದ್ರಸ್ವಾಮಿ ಮೇದೇಹಳ್ಳಿ

    ****

    ಸೋಲಿಲ್ಲದ ಸರದಾರ

    ವಿಶ್ವಕಪ್ ಪ್ರಾರಂಭದಿಂದ ಈವರೆಗೂ ಭಾರತ ತಂಡ ಗೆಲವು ಸಾಧಿಸಿ ಫೈನಲ್‌ಗೆ ಸಜ್ಜಾಗಿದೆ. ಕೊನೆ ಪಂದ್ಯದಲ್ಲಿ ಗೆಲವು ಸಾಧಿಸುವ ಮೂಲಕ ಸೋಲಿಲ್ಲದ ಸರದಾರನಾಗಿ ತಂಡ ಹೊರ ಹೊಮ್ಮಲಿದೆ. ಗೆದ್ದು ಬಾ ಭಾರತ

    | ಸುದರ್ಶನ್ ನಾಯ್ಕ್ ಚಿತ್ರದುರ್ಗ

    ****

    ಕ್ರಿಕೆಟ್‌ನಲ್ಲಿ ಇತಿಹಾಸ ನಿರ್ಮಾಣ

    ಭಾರತದ ಕ್ರಿಕೆಟ್‌ ಇತಿಹಾಸದಲ್ಲಿ ವಿಶ್ವಕಪ್ ನಲ್ಲಿ ಹತ್ತು ಪಂದ್ಯಗಳನ್ನು ಗೆದ್ದ ತಂಡ ಭಾರತ ವಿಶ್ವಕಪ್ ಎತ್ತಿ ಹಿಡಿದು ಮೈಲುಗಲ್ಲು ಸೃಷ್ಟಿಸಲಿದೆ.ಗೆದ್ದು ಬಾ..ಇಂಡಿಯಾ..

    | ನಾಗೇಶ್ ಚೌಳೂರು

    ****

    ನನ್ನ ಭಾರತಕ್ಕೆ ನನ್ನ ಬೆಂಬಲ

    ಟೀಂ ಇಂಡಿಯಾ ಮೇಲೆ ಇಡೀ ವಿಶ್ವದ ಕಣ್ಣಿದೆ. ಈ ಸಲ ಭಾರತ ವಿಶ್ವಕಪ್ ಗೆದ್ದೇ ಗೆಲ್ಲುತ್ತದೆ. ಭಾರತ ತಂಡ ಬಲಿಷ್ಠವಾಗಿದೆ. ಎಲ್ಲರೂ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಈ ಸಲ ಎಲ್ಲವೂ ಚೆನ್ನಾಗಿದೆ ಭಾರತ್ ಕಪ್ ತರುತ್ತೆ.

    ಆರ್‌.ಕನಕರಾಜ್ ಕೋಡಿಹಳ್ಳಿ

    ****

    ಸುವರ್ಣಾಕ್ಷರದ ದಿನ

    ಈ ದಿನ ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವ ದಿನವಾಗಿದೆ. ಒಂದು ಪಂದ್ಯದಲ್ಲೂ ಸೋಲನ್ನು ಕಾಣದೇ ವಿಶ್ವಕಪ್‌ಗೆ ಭಾರತ ತಂಡ ಮುತ್ತಿಡಲಿದೆ.

    | ರವಿ ಚಿತ್ರದುರ್ಗ

    *****

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top