Connect with us

ತಾಮ್ರದ ಕೇಬಲ್‍ ಕಳ್ಳರ ಬಂಧನ | ₹ 11 ಲಕ್ಷದ ತಂತಿ ವಶ

ಕ್ರೈಂ ಸುದ್ದಿ

ತಾಮ್ರದ ಕೇಬಲ್‍ ಕಳ್ಳರ ಬಂಧನ | ₹ 11 ಲಕ್ಷದ ತಂತಿ ವಶ

CHITRADURGA NEWS | 14 FEBRUARY 2024
ಚಿತ್ರದುರ್ಗ: ತಾಮ್ರದ ವಿದ್ಯುತ್‌ ವಾಹಕ ಕೇಬಲ್‍ ಕಳವು ಮಾಡುತ್ತಿದ್ದ ಗ್ಯಾಂಗ್‌ ಅನ್ನು ಪೊಲೀಸರು ಬಂಧಿಸಿದ್ದಾರೆ.

ಹೊಳಲ್ಕೆರೆ ತಾಲ್ಲೂಕಿನ ಕೆ.ಗುರುಮೂರ್ತಿ ,ಕೆ.ಸಂತೋಷ್‌, ಸಣ್ಣಕೆಂಚಪ್ಪ, ಕೆ.ಎಸ್‌.ರಾಘವೇಂದ್ರ, ಜೆ. ವೆಂಕಟೇಶ್‌, ಡಿ. ರಾಜು ಬಂಧಿತರು. ಆರೋಪಿಗಳಾದ ಕೃಷ್ಣ, ಚಂದ್ರು ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಹೊಳಲ್ಕೆರೆ ತಾಲ್ಲೂಕಿನ ತೇಕಲವಟ್ಟಿ ಗ್ರಾಮದ ಬಳಿಯ ವಿಂಡ್‌ ವಲ್ರ್ಡ್‌ ಲಿಮಿಟಿಡ್‌ ಕಂಪನಿಯ8 ಪವನ ವಿದ್ಯುತ್‌ ಕೇಂದ್ರಗಳಿಗೆ ಅಳವಡಿಸಿರುವ 700 ಮೀಟರ್‌ ತಾಮ್ರದ ವಿದ್ಯುತ್ ವಾಹಕ ಕೇಬಲ್‌ಗಳನ್ನು ಕಳವು ಮಾಡಿದ್ದಾರೆ ಎಂದು ಕಂಪೆನಿಯ ಆಡಳಿತ ವ್ಯವಸ್ಥಾಪಕ ನವೀನ್‌ ಕುಮಾರ್‌ 2023ರ ಅಕ್ಟೋಬರ್‌ 8 ರಂದು ಚಿತ್ರಹಳ್ಳಿ ಗೇಟ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.

ಇದನ್ನೂ ಓದಿ: ಅಡಿಕೆ ಉತ್ಪಾದನೆಯಲ್ಲಿ ಕರ್ನಾಟಕ ದೇಶದಲ್ಲೇ ಮೊದಲು

ಪ್ರಕರಣದ ತನಿಖೆ ಪ್ರಾರಂಭಿಸಿದ ಸಿಪಿಐ ಎಂ.ಬಿ ಚಿಕ್ಕಣ್ಣನವರ್, ಪಿಎಸ್‌ಐ ಕಾಂತರಾಜು, ಆರ್‌.ಡಿ.ರಮೇಶ್‌ ಕುಮಾರ, ರುದ್ರೇಶ್‌, ತಿಮ್ಮಣ್ಣ, ಸನಾವುಲ್ಲಾ. ರವಿಕುಮಾರ, ಕುಬೇರಪ್ಪ, ನೂರ್ ಅಹಮದ್ ನದಾಪ್, ಸಿದ್ದನಗೌಡ ಅವರ ತಂಡ ಆರು ಆರೋಪಿಗಳನ್ನು ಬಂಧಿಸಿದೆ. ಬಂಧಿತರಿಂದ ₹ 11,92,175 ಬೆಲೆ ಬಾಳುವ ತಾಮ್ರದ ತಂತಿ ಮತ್ತು ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿಗಳು ತೇಕಲವಟ್ಟಿ ಗ್ರಾಮದ ಗುಡ್ಡದ ಮೇಲಿರುವ ವಿಂಡ್‌ ಫ್ಯಾನ್‍ಗಳಲ್ಲಿ ಅಳವಡಿಸಿರುವ ತಾಮ್ರದ ವಿದ್ಯುತ್ ಕೇಬಲ್‍ಗಳನ್ನು ತುಂಡರಿಸಿ ಬೈಕ್‍ಗಳ ಸಹಾಯದಿಂದ ಗುಡ್ಡದಿಂದ ಕೆಳಗೆ ತಂದು ಲಗೇಜ್ ವಾಹನದಲ್ಲಿ ಜಗಳೂರು ಹಾಗೂ ಹಿರಿಯೂರಿನ ಗುಜರಿ ಅಂಗಡಿ ಮಾರಾಟ ಮಾಡಿದ್ದರು.

Click to comment

Leave a Reply

Your email address will not be published. Required fields are marked *

More in ಕ್ರೈಂ ಸುದ್ದಿ

To Top
Exit mobile version