ಮುಖ್ಯ ಸುದ್ದಿ
Convocation; ಸೆ.20 ರಂದು ಬಿಟ್ಸ್ ಹೈಟೆಕ್ ಕಾಲೇಜಿನ ಘಟಿಕೋತ್ಸವ
CHITRADURGA NEWS | 17 SEPTEMBER 2024
ಚಿತ್ರದುರ್ಗ: ನಗರದ ತೋಟಗಾರಿಕಾ ಕಚೇರಿ ಹತ್ತಿರವಿರುವ ಬಿಟ್ಸ್ ಹೈಟೆಕ್ ಕಾಲೇಜಿನ ಪದವಿ ಪ್ರದಾನ(Convocation) ಸಮಾರಂಭವನ್ನು ಸೆ.20 ರಂದು ಬೆಳಿಗ್ಗೆ 11 ಕ್ಕೆ ತ.ರಾ.ಸು.ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಾಲೇಜಿನ ಸಂಸ್ಥಾಪಕ ಕೆ.ಬಿ.ರವೀಂದ್ರ ತಿಳಿಸಿದರು.
ಕ್ಲಿಕ್ ಮಾಡಿ ಓದಿ: Gaurasandra Maramma; ಹೊಳಲ್ಕೆರೆ ರಸ್ತೆಯ ಗೌರಸಂದ್ರ ಮಾರಮ್ಮ ದೇವಿಯ ಅಲಂಕಾರಕ್ಕೆ ಮನಸೋತ ಭಕ್ತರು
ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು.
ಕಾರ್ಯಕ್ರಮವನ್ನು ಗುಲ್ಬರ್ಗ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಪ್ರೊ.ಎಸ್.ಆರ್.ನಿರಂಜನ ಸಮಾರಂಭ ಉದ್ಘಾಟಿಸುವರು.
ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಬಿ.ಕುಂಬಾರ ಅಧ್ಯಕ್ಷತೆ ವಹಿಸಲಿದ್ದಾರೆ.
ಅಪರಾಧಶಾಸ್ತ್ರ ವಿಶ್ರಾಂತ ಪ್ರಾಧ್ಯಾಪಕ ಡಾ.ನಟರಾಜ್, ಸರ್ಕಾರಿ ವಿಜ್ಞಾನ ಕಾಲೇಜು ಸ್ನಾತಕೋತ್ತರ ಗಣಿತ ವಿಭಾಗದ ಸಹ ಪ್ರಾಧ್ಯಾಪಕ ಡಾ.ಗಟ್ಟಿ ಎನ್.ಬಿ. ಬಿಟ್ಸ್ ಹೈಟೆಕ್ ಕಾಲೇಜು ಪ್ರಾಂಶುಪಾಲರಾದ ಶ್ರೀಮತಿ ಕವಿತ ಬಿ.ಎಂ. ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸುವವರು.
ಕ್ಲಿಕ್ ಮಾಡಿ ಓದಿ: ಚಾಲಕನ ನಿಯಂತ್ರಣ ತಪ್ಪಿ KSRTC ಬಸ್ ಅಪಘಾತ
2014 ರಲ್ಲಿ ನಮ್ಮ ಕಾಲೇಜು ಆರಂಭಗೊಂಡಿದ್ದು, ಕೊರೋನಾ ಸಂದರ್ಭದಲ್ಲಿ ಕೆಲವು ವರ್ಷಗಳ ಕಾಲ ಪದವಿ ಪ್ರದಾನ ಸಮಾರಂಭವಾಗಿರಲಿಲ್ಲ. ಈ ಬಾರಿಯ ಸಮಾರಂಭದಲ್ಲಿ 75 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಗುವುದು ಎಂದರು.
ಅಪರಾಧಶಾಸ್ತ್ರ ವಿಶ್ರಾಂತ ಪ್ರಾಧ್ಯಾಪಕ ಡಾ.ನಟರಾಜ್ ಮಾತನಾಡಿ, ಡೊನೇಷನ್ ಹಾವಳಿ ಹೆಚ್ಚಾಗಿರುವ ಇಂದಿನ ಕಾಲದಲ್ಲಿ ಬಿಟ್ಸ್ ಹೈಟೆಕ್ ಕಾಲೇಜು ವಿಭಿನ್ನವಾಗಿದೆ.
ವಿಶ್ವವಿದ್ಯಾನಿಲಯಗಳು, ಸರ್ಕಾರಗಳು ವಿದ್ಯಾರ್ಥಿಗಳ ಗೋಳನ್ನು ಕೇಳದ ಇಂತಹ ಪರಿಸ್ಥಿತಿಯಲ್ಲಿ ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದೇವೆ ಎಂದು ಹೇಳಿದರು.
ಕ್ಲಿಕ್ ಮಾಡಿ ಓದಿ: Education; ಕರುವಿನಕಟ್ಟೆ ಸರ್ಕಲ್ ಶಿಕ್ಷಣದ ಶಕ್ತಿಕೇಂದ್ರವಾಗಿತ್ತು | CPI ತಿಪ್ಪೇಸ್ವಾಮಿ
ಬಿಟ್ಸ್ ಹೈಟೆಕ್ ಕಾಲೇಜಿನ ಪ್ರಾಂಶುಪಾಲರಾದ ಜಿ.ಎಂ. ಕವಿತ ಮಾತನಾಡಿ, ಪ್ರತಿ ವರ್ಷವೂ ನಮ್ಮ ಕಾಲೇಜಿಗೆ ಒಂದು ಇಲ್ಲವೇ ಎರಡು ರಾಂಕ್ ಗಳು ಬರುತ್ತಿವೆ. ಹಣಕ್ಕಿಂತ ಮುಖ್ಯವಾಗಿ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮ ಉದ್ದೇಶ ಎಂದರು.