Connect with us

Education; ಕರುವಿನಕಟ್ಟೆ ಸರ್ಕಲ್ ಶಿಕ್ಷಣದ ಶಕ್ತಿಕೇಂದ್ರವಾಗಿತ್ತು | CPI ತಿಪ್ಪೇಸ್ವಾಮಿ

ನಗರದ ಕಂಪಳ ಗೆಳೆಯರ ಬಳಗದಿಂದ ಸನ್ಮಾನ ಸಮಾರಂಭ ನಡೆಯಿತು

ಮುಖ್ಯ ಸುದ್ದಿ

Education; ಕರುವಿನಕಟ್ಟೆ ಸರ್ಕಲ್ ಶಿಕ್ಷಣದ ಶಕ್ತಿಕೇಂದ್ರವಾಗಿತ್ತು | CPI ತಿಪ್ಪೇಸ್ವಾಮಿ

CHITRADURGA NEWS | 17 SEPTEMBER 2024

ಚಿತ್ರದುರ್ಗ: ನಗರದ ಕರುವಿನಕಟ್ಟೆ ವೃತ್ತ ಹಿಂದೆ ವಿದ್ಯಾಭ್ಯಾಸ(Education)ದ ಶಕ್ತಿ ಕೇಂದ್ರವಾಗಿತ್ತು ಎಂದು ನಗರ ಠಾಣೆ ಸಿಪಿಐ ತಿಪ್ಪೇಸ್ವಾಮಿ ಹೇಳಿದರು.

ಕ್ಲಿಕ್ ಮಾಡಿ ಓದಿ: DINA RASHI BHAVISHYA: ದಿನ ಭವಿಷ್ಯ | ಸೆಪ್ಟೆಂಬರ್ 17 | ಎಲ್ಲಾ ಕಡೆಯಿಂದ ಆದಾಯದ ಹರಿವು, ಹೊಸ ವಸ್ತ್ರ, ಆಭರಣ ಖರೀದಿ

ನಗರದ ಕ್ರೀಡಾ ಭವನದಲ್ಲಿ ಸೋಮವಾರ ಕಂಪಳ ಗೆಳೆಯರ ಬಳಗದಿಂದ ಆಯೋಜಿಸಿದ್ದ ಸನ್ಮಾನ ಹಾಗೂ ಗೆಳೆಯರ 4ನೇ ವಾರ್ಷಿಕ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು.

ನನ್ನ ವಿದ್ಯಾಭ್ಯಾಸದ ಸಂದರ್ಭದಲ್ಲಿ ಕರುವಿನಕಟ್ಟೆಗೆ ಆಗಾಗ ಭೇಟಿ ನೀಡಿ ಗುರುಗಳ ಮಾರ್ಗದರ್ಶನ ಪಡೆದ ಪರಿಣಾಮ ಇಂದು ಉನ್ನತ ಸ್ಥಾನಮಾನಕ್ಕೆ ಬಂದಿದ್ದೇನೆ. ಬಡತನದಲ್ಲಿ ಬಂದ ನಾವು,ಕೇವಲ 500 ರೂಗಳ ಸಂಬಳಕ್ಕೆ ಮಂಡಕ್ಕಿ ತಿಂದು ಉಪನ್ಯಾಸಕನಾಗಿ ಕೆಲಸ ಮಾಡಿದ್ದೆ.

ನನಗೆ ಶಿಕ್ಷಕ ವೃತ್ತಿಯಲ್ಲಿ ತುಂಬಾ ಸಂತೋಷವಿತ್ತು. ನಮ್ಮ ತಂದೆ ಕೂಡಾ ಶಿಕ್ಷಕರಾಗಿದ್ದರು. ಆದರೆ, ಆಕಸ್ಮಿಕವಾಗಿ ಪೊಲೀಸ್ ಇಲಾಖೆಯಲ್ಲಿ ಅವಕಾಶ ಸಿಕ್ಕಿ ಸೇವೆಗೆ ಬಂದೆ ಎಂದು ಮೆಲುಕು ಹಾಕಿದರು.

ಕ್ಲಿಕ್ ಮಾಡಿ ಓದಿ: POLICE: ಈದ್ ಮಿಲಾದ್ ಮೆರವಣಿಗೆಯಲ್ಲಿ ಪ್ಯಾಲೆಸ್ತೇನ್ ಪರ ಘೋಷಣೆ, ಭಾವುಟ ಪ್ರದರ್ಶನ | ನಗರ ಠಾಣೆಯಲ್ಲಿ ದೂರು ದಾಖಲು

ನಾವು ಹೋರಾಟದಿಂದ ಬಂದು ಜೀವನ ರೂಪಿಸಿಕೊಂಡಿದ್ದೇವೆ ನಮ್ಮಗಳಿಗೆ. ಬಡತನ ಹಸಿವು ಏನು ಎನ್ನುವುದು ಗೊತ್ತಿದೆ. ಪೊಲೀಸ್ ಇಲಾಖೆಯಲ್ಲಿ ಉತ್ತಮ ಕಾರ್ಯನಿರ್ವಹಿಸಿ ಇಲಾಖೆಗೆ ಕೀರ್ತಿತರುತ್ತೇನೆ ಎಂದು ತಿಳಿಸಿ ಕಂಪಳ ಗೆಳೆಯರ ಬಳಗಕ್ಕೆ ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಕೊಪ್ಪಳದ ಕೆಎಸ್‌ಎಫ್‌ಸಿ ನಿವೃತ್ತ ವ್ಯವಸ್ಥಾಪಕರಾದ ಚಿದಾನಂದಪ್ಪ ಮಾತನಾಡಿ, ಕಂಪಳ ಗೆಳೆಯರ ಬಳಗ ಹಿಂದಿನ 40 ವರ್ಷಗಳ ಸ್ನೇಹರ ಬಳಗವಾಗಿದೆ ಇಂದಿಗೂ ನಮ್ಮಗಳ ಸ್ನೇಹತ್ವ ಹೀಗೆ ಮುಂದುವರಿದು ಕೊಂಡು ಹೋಗಿರುವುದು ತುಂಬಾ ಸಂತೋಷವಾಗಿದೆ ಎಂದರು.

ಶಿಕ್ಷಣ ಇಲಾಖೆ ನಿವೃತ್ತ ಅಧಿಕಾರಿ ಎಂ.ರೇವಣಸಿದ್ದಪ್ಪ ಮಾತನಾಡಿ, ವಿವಿಧ ಜಾತಿ, ಧರ್ಮ, ಪ್ರದೇಶಗಳನ್ನು ಒಳಗೊಂಡ ಗುಂಪು ಕಂಪಳ ಬಳಗವಾಗಿದೆ. ಈ ಬಳಗದಲ್ಲಿರುವ ಎಲ್ಲಾ ಸ್ನೇಹಿತರು ಬೆಂಕಿಯಲ್ಲಿ ಅರಳಿದ ಹೂವುಗಳಂತೆ ಎಂದು ಬಣ ್ಣಸಿದರು. ನಾವುಗಳು ಇನ್ನೂಷ್ಟು ಆರ್ಥಿಕವಾಗಿ ಸಾಮಾಜಿಕವಾಗಿ ರಾಜಕೀಯವಾಗಿ ಮತ್ತು ಶೈಕ್ಷಣ ಕವಾಗಿ ಹೆಚ್ಚು ಬೆಳೆಯೋಣಾ ಎಂದರು.

ಶಿಕ್ಷಣ ಇಲಾಖೆ ನಿವೃತ್ತ ಉಪನಿರ್ದೇಶಕ ಎಂ.ಎನ್.ರಮೇಶ್ ಮಾತನಾಡಿ, ನಮ್ಮ ಬದುಕುಗಳನ್ನು ಹಸನು ಮಾಡಿಕೊಳ್ಳುವುದಕ್ಕೆ ಕಂಪಳ ಗೆಳೆಯರ ಬಳಗ ಸಹಕಾರಿಯಾಗಿದೆ ಎಂದು ಸ್ಮರಿಸಿದರು.

ಸನ್ಮಾನ ಸ್ವೀಕರಿಸಿದ ಮೇಜರ್ ಡಾ.ಅಂಜಿನಪ್ಪ ಮಾತನಾಡಿ, ನಾನು ಆಕಸ್ಮಿಕವಾಗಿ ಈ ಬಳಗದ ಸದಸ್ಯನಾದೆ ನಾನು ಅನಕ್ಷರತೆ ಜಾತೀಯತೆ ಧರ್ಮ ಅಸ್ಪೃಶ್ಯತೆ ಮತ್ತು ಬಡತನ ಇಂತಹ ಸಮಸ್ಯೆಗಳ ಬಗ್ಗೆ ನನ್ನ ವಿದ್ಯಾರ್ಥಿ ಜೀವನದಿಂದಲೇ ಹೋರಾಟ ಮಾಡಿಕೊಂಡು ಬಂದಿದ್ದೇನೆ.

ಕ್ಲಿಕ್ ಮಾಡಿ ಓದಿ: Short circuit: ಶಾರ್ಟ್‌ ಸರ್ಕೀಟ್‌ | ಎಲೆಕ್ಟ್ರಿಕಲ್ ಪರಿಕರಗಳಿಗೆ ಹಾನಿ

ನಾನು ಸಣ್ಣ ನೌಕರಿಯಲ್ಲಿ ಕೆಲಸ ಮಾಡಿಕೊಂಡು ಸ್ನಾತಕೋತರ ಪದವಿ ವ್ಯಾಸಂಗ ಮಾಡಿ ಕನ್ನಡ ಪ್ರಾಧ್ಯಾಪಕನಾಗಿ ಕೆಲಸ ಮಾಡುವ ಅವಕಾಶವನ್ನು ದೊರಕಿಸಿಕೊಂಡು ನಾನು ಬಯಲು ಸೀಮೆಯಿಂದ ಹೋಗಿ 32 ವರ್ಷಗಳ ಕಾಲ ಮಲೆನಾಡಿನಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದೇನೆ ಎಂದು ತಿಳಿಸಿದರು.

ಜಿಲ್ಲಾ ಉಪನ್ಯಾಸಕರ ಸಂಘದ ಮಾಜಿ ಅಧ್ಯಕ್ಷ ಎಸ್.ಲಕ್ಶ್ಮಣ್, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ರಾಮಯ್ಯ, ತುಂಗಾ ಮಹಾವಿದ್ಯಾಲಯ ತೀರ್ಥಹಳ್ಳಿಯ ಆರ್.ಜಿ.ವೀರಪ್ಪ, ಓ.ಮಲ್ಲಿಕಾರ್ಜುನಯ್ಯ, ಅಧಿಕಾರಿಗಳಾದ ನಾಗರಾಜ್, ನಿವೃತ್ತ ಜಂಟಿ ನಿರ್ದೇಶಕ ವಿ.ಅಜ್ಜಪ್ಪ, ಪ್ರಾಚಾರ್ಯರಾದ ಎಂ. ಮಂಜಣ್ಣ, ವೇದಮೂರ್ತಿ, ಗೃಹ ರಕ್ಷಕ ದಳ ಆಡಳಿತಾಧಿಕಾರಿ ಆರ್.ಪಿ.ಜಯಣ್ಣ, ಉಪನ್ಯಾಸಕ ಜೈ ಶ್ರೀನಿವಾಸ್, ನಿವೃತ್ತ ಉಪನ್ಯಾಸಕ ಎಸ್.ರಾಮಣ್ಣ, ಹಿಂದಿ ಶಿಕ್ಷಕ ನಾಗರಾಜ್ ಮತ್ತಿತರರಿದ್ದರು.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version