Connect with us

ಬಿಸಿಯೂಟ ಸೇವನೆ ಬಳಿಕ ಮಕ್ಕಳು ಅಸ್ವಸ್ಥ | ಆಸ್ಪತ್ರೆಗೆ ದಾಖಲು

ಬಿಸಿಯೂಟ ಸೇವನೆ ಬಳಿಕ ಮಕ್ಕಳು ಅಸ್ವಸ್ಥ

ಮುಖ್ಯ ಸುದ್ದಿ

ಬಿಸಿಯೂಟ ಸೇವನೆ ಬಳಿಕ ಮಕ್ಕಳು ಅಸ್ವಸ್ಥ | ಆಸ್ಪತ್ರೆಗೆ ದಾಖಲು

ಚಿತ್ರದುರ್ಗ ನ್ಯೂಸ್.ಕಾಂ: ಮಧ್ಯಾಹ್ನದ ಬಿಸಿಯೂಟ ಸೇವನೆ ಬಳಿಕ ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥವಾಗಿರುವ ಘಟನೆ ಚಿತ್ರದುರ್ಗ ನಗರದಲ್ಲಿ ನಡೆದಿದೆ.

ಸುಮಾರು 20 ಮಕ್ಕಳನ್ನು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು, ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದೆ, ಯಾವುದೇ ಅಪಾಯ ಇಲ್ಲ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ದೇವರಾಜ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಹಿರಿಯೂರು ಅಪಘಾತದ ಫಾಲೋಅಪ್ | ಮದುವೆಗೆ ಹೆಣ್ಣು ನೋಡುವ ಶಾಸ್ತ್ರ ಮುಗಿಸಿ ತೆರಳುತ್ತಿದ್ದ ಯುವಕನ ಧಾರುಣ ಸಾವು

ಮಂಗಳವಾರ ಮಧ್ಯಾಹ್ನ ಊಟ ಸೇವಿಸಿದ ನಂತರ ಮಕ್ಕಳಿಗೆ ವಾಂತಿಯಾಗಿರುವ ಘಟನೆ ಇಲ್ಲಿನ ಉರ್ದು ಪ್ರಾಥಮಿಕ ಶಾಲೆಯಲ್ಲಿ ಘಟನೆ ನಡೆದಿದೆ. ಬಿಸಿಯೂಟದ ನಂತರ ಮೊಟ್ಟೆ ಹಾಗೂ ಶೇಂಕಾ ಚಿಕ್ಕಿ ಸೇವಿಸಿದ್ದರು. ಆದರೆ, ವಿದ್ಯಾರ್ಥಿಗಳ ಅಸ್ವಸ್ಥತೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಜಿಲ್ಲಾ ಆಸ್ಪತ್ರೆಗೆ ಚಿತ್ರದುರ್ಗ ನಗರ ಪೊಲೀಸ್ ಠಾಣೆ ಸಿಪಿಐ ತಿಪ್ಪೇಸ್ವಾಮಿ ಮತ್ತಿತರೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

(ಚಿತ್ರದುರ್ಗದ ಕ್ಷಣ ಕ್ಷಣದ ಮಾಹಿತಿಗಾಗಿ Facebook page follow ಮಾಡಿ  https://www.facebook.com/chitradurganews?mibextid=ZbWKwL)

(ಚಿತ್ರದುರ್ಗದ ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ.      https://chat.whatsapp.com/DBdpIl5D3JYHFoKkhA0cQg)

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version