ಕ್ರೈಂ ಸುದ್ದಿ
ಕುಡಿದ ಮತ್ತಿನಲ್ಲಿ ಹೆತ್ತ ತಂದೆಯನ್ನೇ ಕೊಲೆ ಮಾಡಿದ ಪುತ್ರ | ಕೊಲೆ ಬಳಿಕ ಪೊಲೀಸ್ ಠಾಣೆಗೆ ಬಂದ ಆರೋಪಿ

Published on
ಚಿತ್ರದುರ್ಗ ನ್ಯೂಸ್.ಕಾಂ: ಕುಡಿದ ಮತ್ತಿನಲ್ಲಿ ಪಾಪಿಯೊಬ್ಬ ಹೆತ್ತ ತಂದೆಯನ್ನೇ ಕೊಲೆ ಮಾಡಿರುವ ಅಮಾನವೀಯ ಘಟನೆ ನಾಯಕನಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಚಳ್ಳಕೆರೆ ತಾಲೂಕಿನ ವರವು ಕಾವಲಿನ ಬಳಿ ಘಟನೆ ನಡೆದಿದ್ದು, ಬತ್ತಯ್ಯನಹಟ್ಟಿ ನಿವಾಸಿ 55 ವರ್ಷದ ಸೂರಯ್ಯ ಮಗನಿಂದಲೇ ಹತ್ಯೆಯಾದ ದುರ್ದೈವಿ.
ಪುತ್ರ ಮೋಹನ್ ಕುಡಿದ ಮತ್ತಿನಲ್ಲಿ ತಂದೆಯ ಮೇಲೆ ತಡರಾತ್ರಿ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ಕೊಲೆ ಬಳಿಕ ಆರೋಪಿ ನೇರವಾಗಿ ಚಳ್ಳಕೆರೆ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.
ರಾತ್ರಿ ಕುಡಿದ ಮತ್ತಿನಲ್ಲಿ ಸೂರಯ್ಯ ಹಾಗೂ ಪುತ್ರ ಮೋಹನ್ ನಡುವೆ ಜಗಳವಾಗಿತ್ತು. ಈ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.
ಸ್ಥಳಕ್ಕೆ ಸಿಪಿಐ ಸಮೀವುಲ್ಲಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಾಯಕನಹಟ್ಟಿ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ.
Continue Reading
Related Topics:Challakere, Chitradurga, crime, father, Kannada Latest News, Murder, nayakanahatty, Police, son, ಅಪರಾಧ, ಕನ್ನಡ ಅಪ್ಡೇಟ್ ನ್ಯೂಸ್, ಕೊಲೆ, ಚಳ್ಳಕೆರೆ, ಚಿತ್ರದುರ್ಗ, ಜಿಲ್ಲಾ ಪೊಲೀಸ್, ತಂದೆ, ನಾಯಕನಹಟ್ಟಿ, ಪುತ್ರ

Click to comment