Connect with us

    ಕೀ ಓಟರ್ಸ್ ಮೇಲೆ ಕಣ್ಣಿಟ್ಟ ಕಾರಜೋಳ

    ಬಿಜೆಪಿ ಅಭ್ಯರ್ಥಿ ಗೋವಿಂದ್ ಕಾರಜೋಳ

    ಲೋಕಸಮರ 2024

    ಕೀ ಓಟರ್ಸ್ ಮೇಲೆ ಕಣ್ಣಿಟ್ಟ ಕಾರಜೋಳ

    CHITRADURGA NEWS | 06 APRIL 2024

    ಚಿತ್ರದುರ್ಗ:  ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಗೋವಿಂದ್ ಕಾರಜೋಳ ಅವರು ನಗರದಲ್ಲಿ ವಿವಿಧ ಸಮುದಾಯದ ಪ್ರಬುದ್ಧರ ಮತ್ತು ಕೀ ಓಟರ್ಸ್ ರ ಜೊತೆ ಮಾತಯಾಚನೆ ಮಾಡಿದರು.

    ಇದನ್ನೂ ಓದಿ: ಅಡಿಕೆ ಧಾರಣೆ ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ ಅಡಿಕೆ ರೇಟ್

    ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರತಿ ಬೂತ್‍ನಲ್ಲಿ 300ಕ್ಕೂ ಅಧಿಕ ಮತಗಳು ಬರುವಂತೆ ನೋಡಿಕೊಳ್ಳಬೇಕು. ನರೇಂದ್ರ ಮೋದಿ ಅವರು ಮೂರನೇ ಅವಧಿಗೆ ಗೆದ್ದು ಪ್ರಧಾನಿಯಾದಾಗ ಮಾತ್ರ ಭಾರತ ವಿಶ್ವ ಗುರು ಆಗಲು ಸಾಧ್ಯ. ಈ ಹಿನ್ನೆಲೆಯಲ್ಲಿ ಸಮಾಜದ ಪ್ರಮುಖರು ನರೇಂದ್ರ ಮೋದಿ ನೀಡಿರುವ ಜನಪರ ಯೋಜನೆಗಳನ್ನು ಪ್ರತಿ ಮನೆಗೆ ತಲುಪಿಸಿ ಬಿಜೆಪಿಯನ್ನು ಗೆಲುವಿನ ದಡ ಮುಟ್ಟಿಸಬೇಕು ಎಂದರು.

    ಇದನ್ನೂ ಓದಿ: ಹೊರ ರಾಜ್ಯಗಳಿಗೆ ಮೇವು ಸಾಗಾಟ ನಿಷೇಧ

    ಬೂತ್ ಮಟ್ಟದ ಸಭೆಗಳಿಗೆ ಹೆಚ್ಚಿನ ಮಹತ್ವ ಇರುವುದರಿಂದ ಸರಿಯಾಗಿ ನಡೆಯುವಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ. ಹಿರಿಯ ನಾಗರೀಕರ ಮನಸ್ಸನ್ನು ಗೆಲ್ಲುವುದು ತುಂಬಾ ಮುಖ್ಯ. ಕುಟುಂಬದ ಎಲ್ಲಾ ಮತದಾರರು ಮತದಾನ ಮಾಡುವಂತೆ ಜಾಗೃತಿ ವಹಿಸಿ ಬೂತ್ ಗೆದ್ದರೆ ಚುನಾವಣೆ ಗೆದ್ದಂತೆ. ಈ ನಿಟ್ಟಿನಲ್ಲಿ ಕಾರ್ಯಕರ್ತರು ಕಾರ್ಯಪ್ರವೃತ್ತರಾಗಬೇಕು ಎಂದು ತಿಳಿಸಿದರು.

    ಸಮಾಜ ಕಲ್ಯಾಣ ಇಲಾಖೆ ಸಚಿವನಾಗಿದ್ದಾಗ ಏನು ಅಭಿವೃದ್ದಿ ಕೆಲಸಗಳನ್ನು ಮಾಡಿದ್ದೆನೋ ಅದನ್ನು ಚಿತ್ರದುರ್ಗ ಜಿಲ್ಲೆಯಲ್ಲಿ ಅನುಷಾ್ಠನಗೊಳಿಸಿ ಮಧ್ಯಕರ್ನಾಟಕದ ಬಯಲು ಸೀಮೆಯನ್ನು ಅಭಿವೃದ್ದಿಗೊಳಿಸುವುದಾಗಿ ಗೋವಿಂದ ಕಾರಜೋಳ ವಾಗ್ದಾನ ಮಾಡಿದರು.

    ಇದನ್ನೂ ಓದಿ: ಗೋ ಬ್ಯಾಕ್ ಹೇಳಿಕೆಗೆ ತಿರುಗೇಟು ನೀಡಿದ ಕೆ.ಎಸ್.ನವೀನ್

    ಏಪ್ರಿಲ್ 26 ರಂದು ನಡೆಯುವ ಚುನಾವಣೆಯಲ್ಲಿ ಯಾರು ಎಲ್ಲಿಯೇ ಇದ್ದರೂ ಬಂದು ಮತದಾನ ಮಾಡುವುದನ್ನು ಮರೆಯಬಾರದು. ಅದರಂತೆ ನಿಮ್ಮ ಮನೆಯ ಅಕ್ಕಪಕ್ಕದಲ್ಲಿರುವವರು ಕಡ್ಡಾಯವಾಗಿ ಮತದಾನ ಮಾಡುವಂತೆ ಮನವೊಲಿಸಬೇಕೆಂದು ಮನವಿ ಮಾಡಿದರು.

    ಈ ವೇಳೆ ಪಟೇಲ್, ಗುಜ್ಜರ್, ಜೈನ್, ವಿಷ್ಣು, ವಿಶ್ವಕರ್ಮ, ಮರಾಠ, ಗಂಗಾಮತಸ್ಥ, ಆರ್ಯವೈಶ್ಯ ಸಮಾಜದ ಪ್ರಮುಖರನ್ನು ಭೇಟಿ ಮಾಡಿ ಮತಯಾಚಿಸಿದ ಗೋವಿಂದ ಕಾರಜೋಳ ನಮ್ಮ ಪಕ್ಷ ಸಣ್ಣಸಣ್ಣ ಜಾತಿಗಳನ್ನು ಗುರುತಿಸಿ ಒಂದಲ್ಲ ಒಂದು ರೀತಿಯಲ್ಲಿ ಅಧಿಕಾರ ನೀಡುತ್ತಿದೆ. ಇದೆ ತಿಂಗಳ 26 ರಂದು ನಡೆಯುವ ಚುನಾವಣೆಯಲ್ಲಿ ಅತಿ ಹೆಚ್ಚಿನ ಮತಗಳನ್ನು ನೀಡಿ ಗೆಲ್ಲಿಸುವುದರ ಮೂಲಕ ದೇಶದಲ್ಲಿ ಮತ್ತೊಮ್ಮೆ ನರೇಂದ್ರಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡುವಂತೆ ಮನವಿ ಮಾಡಿದರು.

    ಇದನ್ನೂ ಓದಿ: ಬಾಡೂಟ ಸೇವನೆ 50ಕ್ಕೂ ಹೆಚ್ಚು ಜನ ಅಸ್ವಸ್ಥ

    ಬಿಜೆಪಿ ನಗರಾಧ್ಯಕ್ಷ ನವೀನ್ ಚಾಲುಕ್ಯ, ಪ್ರಮುಖರಾದ ನಾಗರಾಜ್ ಬೇದ್ರೆ, ದಗ್ಗೆ ಶಿವಪ್ರಕಾಶ್, ಶಿವಣ್ಣಾಚಾರ್, ಶ್ರೇಣಿಕ್ ಮತ್ತಿತರರಿದ್ದರು.

    Click to comment

    Leave a Reply

    Your email address will not be published. Required fields are marked *

    More in ಲೋಕಸಮರ 2024

    To Top