Connect with us

ವೈ.ಎ.ನಾರಾಯಣಸ್ವಾಮಿ ಪರ ಅಖಾಡಕ್ಕಿಳಿದ ಮಾಜಿ ಮುಖ್ಯಮಂತ್ರಿ | ಕಾಲೇಜುಗಳಲ್ಲಿ ಬಿರುಸಿನ ಪ್ರಚಾರ

mlc election

ಮುಖ್ಯ ಸುದ್ದಿ

ವೈ.ಎ.ನಾರಾಯಣಸ್ವಾಮಿ ಪರ ಅಖಾಡಕ್ಕಿಳಿದ ಮಾಜಿ ಮುಖ್ಯಮಂತ್ರಿ | ಕಾಲೇಜುಗಳಲ್ಲಿ ಬಿರುಸಿನ ಪ್ರಚಾರ

CHITRADURGA NEWS | 22 MAY 2024
ಚಿತ್ರದುರ್ಗ: ಆಗ್ನೇಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ಪರ ಕೋಲಾರದಲ್ಲಿ ಪ್ರಚಾರ ಕಾರ್ಯ ಬಿರುಸಾಗಿದೆ. ಸಿಬಿಐಟಿ ಕಾಲೇಜು, ಸಹ್ಯಾದ್ರಿ ಕಾಲೇಜು, ಎಸ್‌ಡಿಸಿ, ಚಿನ್ಮಯಿ ಕಾಲೇಜು, ಮಹಿಳಾ ಸಮಾಜ ಕಾಲೇಜಿಗೆ ಸಂಸದ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ತೆರಳಿ ಮತಯಾಚಿಸಿದರು.

ಈ ವೇಳೆ ಮಾತನಾಡಿದ ಅವರು, ‘ಮೇಲ್ಮನೆಯ ಘನತೆ ಉಳಿಸಲು ಹಾಗೂ ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ವೈ.ಎ.ನಾರಾಯಣಸ್ವಾಮಿ ಅವರನ್ನು ಪುನಾರಾಯ್ಕೆ ಮಾಡಿ. ಶಿಕ್ಷಕರ ನಿರೀಕ್ಷೆಗೆ ತಕ್ಕಂತೆ ಅವರು ಕೆಲಸ ಮಾಡುತ್ತಾರೆ’ ಎಂದು ಭರವಸೆ ನೀಡಿದರು.

‘ರಾಜಕಾರಣಿಗಳು ಅಧ್ಯಯನ ಮಾಡುತ್ತಿಲ್ಲ. ಇದು ಬೇಸರದ ಸಂಗತಿ. ಆದರೆ, ರಾಜಕಾರಣಿಯಾದ ನಂತರವೂ ಅಧ್ಯಯನ ನಡೆಸಿ ಪಿಎಚ್‍.ಡಿ ಮಾಡಿರುವ ಅವರು ಶಿಕ್ಷಕರ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದಾರೆ’ ಎಂದು ತಿಳಿಸಿದರು.

ಕ್ಲಿಕ್ ಮಾಡಿ ಓದಿ: ಲೋಕಸಭೆ ಚುನಾವಣೆ ಮತ ಎಣಿಕೆ | ಅಧಿಕ ಸಿಬ್ಬಂದಿ ನಿಯೋಜನೆಗೆ ಕಡಿವಾಣ

‘ಶಿಕ್ಷಣ ಸಂಸ್ಥೆಗಳು ಸಮಸ್ಯೆಯಲ್ಲಿವೆ‌. ಜನ ಸಾಮಾನ್ಯರಿಗೆ ಶಿಕ್ಷಣ ‌ಕೈಗೆ ಎಟುಕುತ್ತಿಲ್ಲ. ಹೀಗಾಗಿ, ಶಿಕ್ಷಣ ಕ್ಷೇತ್ರದ ಸಮಸ್ಯೆಗೆ ಸ್ಪಂದಿಸುವವರನ್ನು, ಯೋಗ್ಯರನ್ನು ವಿಧಾನ ಪರಿಷತ್‌ಗೆ ಆಯ್ಕೆ ಮಾಡಿ ಕಳುಹಿಸಿ’ ಎಂದು ಮನವಿ ಮಾಡಿದರು.

ಕೋಲಾರದಲ್ಲಿ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ

‘ಚಿಂತಕರ ಚಾವಡಿಯಂತಿರುವ ಮೇಲ್ಮನೆಯನ್ನು (ವಿಧಾನ ಪರಿಷತ್‌) ರಾಜಕೀಯವಾಗಿ ಯಾರನ್ನೋ ಸಮಾಧಾನಪಡಿಸಿಕೊಳ್ಳಲು ಬಳಸಿಕೊಳ್ಳಲಾಗುತ್ತಿದೆ. ವಿಚಾರಗಳೇ ಗೊತ್ತಿಲ್ಲದವರು, ಮಾಹಿತಿಯ ಕೊರತೆ ಇದ್ದವರ ಪ್ರವೇಶದಿಂದ ಮೂಲ ಆಶಯ ಕಳೆದುಕೊಳ್ಳುತ್ತಿದೆ. ಇಲ್ಲಿಗೆ ಆಯ್ಕೆಯಾಗಿ ಬರುವವರು ತಾವು ಪ್ರತಿನಿಧಿಸುವ ಕ್ಷೇತ್ರದ ಮಾಹಿತಿ ಹೊಂದಿರಬೇಕು. ಶಿಕ್ಷಕರ ಸಮಸ್ಯೆಗಳನ್ನು ಅದ್ಭುತವಾಗಿ ಪ್ರತಿಪಾದಿಸುವ ಶಕ್ತಿ ಹೊಂದಿರಬೇಕು. ಶಿಕ್ಷಣ ಸಂಸ್ಥೆ ನಡೆಸುವವರ ಸಮಸ್ಯೆ ಅರ್ಥ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.

ಕ್ಲಿಕ್ ಮಾಡಿ ಓದಿ: ಕಂಟೇನರ್ ಲಾರಿಯಲ್ಲಿ ಎತ್ತುಗಳ ಸಾಗಾಣೆ | ವಿಎಚ್‌ಪಿ, ಬಜರಂಗದಳ ಕಾರ್ಯಕರ್ತರಿಂದ ರಕ್ಷಣೆ

ಕೋಲಾರದಲ್ಲಿ ಮತಯಾಚಿಸಿದ ಮಾಜಿ ಸಿಎಂ ಸದಾನಂದ ಗೌಡ

ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು, ಸಹ್ಯಾದ್ರಿ ಕಾಲೇಜಿನ ಅಧ್ಯಕ್ಷ ಎಂ.ಉದಯಕುಮಾರ್‌, ಸಿಬಿಐಟಿ ಕಾಲೇಜಿನ ಕಾರ್ಯದರ್ಶಿ ವಿ.ಕೃಷ್ಣಾರೆಡ್ಡಿ, ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಎಂ.ಮಲ್ಲೇಶಬಾಬು, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಕೆ.ಎನ್‌. ವೇಣುಗೋಪಾಲ್, ವೀರಭದ್ರೇಗೌಡ, ಸಹ್ಯಾದ್ರಿ ಕಾಲೇಜಿನ ಅಧ್ಯಕ್ಷ ಎಂ.ಉದಯಕುಮಾರ್, ಕೃಷ್ಣಪ್ಪ, ಎಸ್‍ಡಿಸಿ ಕಾಲೇಜಿನ ಕಾರ್ಯದರ್ಶಿ ಉಷಾಗಂಗಾಧರ್, ಮಹಿಳಾ ಸಮಾಜ ಕಾಲೇಜಿನ ನವೀನಾ, ಜಿಲ್ಲಾ ವಕ್ತಾರ ಎಸ್.ಬಿ.ಮುನಿವೆಂಟಪ್ಪ, ಜೆಡಿಎಸ್ ಮಹಿಳಾ ಜಿಲ್ಲಾಧ್ಯಕ್ಷೆ ಗಾಯತ್ರಿ ಮುತ್ತಪ್ಪ, ಬಿಜೆಪಿ ಮುಖಂಡರಾದ ವಿಜಯಕುಮಾರ್, ಕೆಂಬೋಡಿ ನಾರಾಯಣಸ್ವಾಮಿ, ಮಮತಮ್ಮ, ಮಾಗೇರಿ ನಾರಾಯಣಸ್ವಾಮಿ, ಯಲ್ದೂರು ಪದ್ಮನಾಭ್, ಅಪ್ಪಿಗೌಡ, ವೈಎ.ವೀರಭದ್ರಪ್ಪ, ರಾಜೇಶ್‍ಸಿಂಗ್ ಇದ್ದರು.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version