ಮುಖ್ಯ ಸುದ್ದಿ
ಕಂಟೇನರ್ ಲಾರಿಯಲ್ಲಿ ಎತ್ತುಗಳ ಸಾಗಾಣೆ | VHP, ಬಜರಂಗದಳ ಕಾರ್ಯಕರ್ತರಿಂದ ರಕ್ಷಣೆ
CHITRADURGA NEWS | 22 MAY 2024
ಚಿತ್ರದುರ್ಗ: ತಡರಾತ್ರಿಯಲ್ಲಿ ಕಂಟೇನರ್ ಲಾರಿಯಲ್ಲಿ ಸಾಗಿಸುತ್ತಿದ್ದ ಎತ್ತುಗಳನ್ನು ಪೊಲೀಸರು ಹಾಗೂ ಪೊಲೀಸರಿಗೆ ವಿಶ್ವಹಿಂದೂ ಪರಿಷತ್, ಬಜರಂಗದಳ ಕಾರ್ಯಕರ್ತರು ರಕ್ಷಿಸಿದ್ದಾರೆ.
ತಡರಾತ್ರಿಯಲ್ಲಿ ಕಂಟೈನರ್ ಲಾರಿಯಲ್ಲಿ ಸಾಗಿಸುತ್ತಿದ್ದ ಎತ್ತುಗಳ ಕುರಿತು ಮಾಹಿತಿ ಆಧರಿಸಿ, ಹಿಂದೂ ಸಂಘಟನೆಗಳ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ್ದು, ಲಾರಿಯನ್ನು ಹಿಡಿದು ನೋಡಿದಾಗ ಅದರಲ್ಲಿ ಎತ್ತುಗಳಿರುವುದು ಖಚಿತವಾಗಿದೆ.
ಇದನ್ನೂ ಓದಿ: ವಿವಿ ಸಾಗರ ಜಲಾಶಯದ ಇಂದಿನ ಮಟ್ಟ | ಮೂರೇ ದಿನದಲ್ಲಿ 1 ಟಿಎಂಸಿಗಿಂತ ಹೆಚ್ಚು ನೀರು ಸಂಗ್ರಹ
ಕಂಟೇನರ್ ಲಾರಿಯಲ್ಲಿ 14 ಎತ್ತುಗಳನ್ನು ಅಕ್ರಮವಾಗಿ ಕಸಾಯಿಖಾನೆಗೆ ತೆಗೆದುಕೊಂಡು ಹೋಗಲಾಗುತ್ತಿತ್ತು ಎಂದು ಹಿಂದೂ ಸಂಘಟನೆಗಳ ಕಾರ್ಯಕರ್ತರು ಆರೋಪಿಸಿದ್ದಾರೆ.
ತಡರಾತ್ರಿ 1 ಗಂಟೆ ವೇಳೆ ಚಳ್ಳಕೆರೆ ಕಡೆಯಿಂದ ಬಂದು ದಾವಣಗೆರೆ ಕಡೆಗೆ ಬೈಪಾಸ್‍ನಲ್ಲಿ ಸಂಚರಿಸುತ್ತಿದ್ದ ಕಂಟೇನರನ್ನು ಚೇಸ್ ಮಾಡಿ ಹಿಡಿಯಲಾಗಿದೆ.
ಇದನ್ನೂ ಓದಿ: ಪಿಯುಸಿ ಸೈನ್ಸ್ ಕನ್ನಡದಲ್ಲೂ ಓದಬಹುದು | ಪ್ರತ್ಯೇಕ ವಿಭಾಗ ತೆರೆಯಲು ಡಿಸಿ ಸೂಚನೆ
ಈ ವೇಳೆ ಲಾರಿ ಚಾಲಕ ಲಾರಿ ಬಿಟ್ಟು ಪರಾರಿಯಾಗಿದ್ದಾನೆ. ಪೊಲೀಸರು ಗ್ರಾಮಾಂತರ ಪೊಲೀಸ್ ಠಾಣೆ ಬಳಿಗೆ ಕಂಟೇನರ್ ತಂದು ನಿಲ್ಲಿಸಿಕೊಂಡಿದ್ದಾರೆ.
ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.