ನಿಧನವಾರ್ತೆ
ಉದ್ಯಮಿ ನವರತನ್ ಮಲ್ ನಿಧನ
CHITRADURGA NEWS | 26 MARCH 2024
ಚಿತ್ರದುರ್ಗ: ನಗರದ ಖ್ಯಾತ ಉದ್ಯಮಿ ಹಾಗೂ ನವರತ್ನ ಹೋಲ್‌ಸೇಲ್ ಕ್ಲಾತ್ ಸ್ಟೋರ್ ಮಾಲೀಕ ಎಂ.ನವರತನ್ ಮಲ್ (75) ಮಂಗಳವಾರ ನಿಧನರಾಗಿದ್ದಾರೆ.
ಮೃತರಿಗೆ ಮೂವರು ಪುತ್ರರಿದ್ದಾರೆ. ಮೃತರ ನೇತ್ರಗಳನ್ನು ನಗರದ ಬಸವೇಶ್ವರ ‘ಐ’ಜ್ಯೋತಿ ಬ್ಯಾಂಕ್‍ಗೆ ದಾನ ಮಾಡಲಾಗಿದೆ. ಮುಕ್ತಿಧಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಕ್ಲಿಕ್ ಮಾಡಿ ಓದಿ: 150 ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಾಣೆ | ಖಚಿತ ಮಾಹಿತಿ ಆಧರಿಸಿ ಪೊಲೀಸರ ಕಾರ್ಯಾಚರಣೆ
ನವರತನ್ ಮಲ್ ಅವರ ನಿಧನಕ್ಕೆ ನಗರದ ಹಲವು ಉದ್ಯಮಿಗಳು, ಜೈನ್ ಸಮುದಾಯದ ಮುಖಂಡರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಂಘಟನೆ ಮುಖಂಡರು ಸಂತಾಪ ಸೂಚಿಸಿದ್ದಾರೆ.