ನಿಧನವಾರ್ತೆ
ದ್ವಿತೀಯ ಪಿಯುಸಿ ವಿದ್ಯಾರ್ಥಿ ಚೇತನ್ ಹೃದಯಾಘಾತದಿಂದ ಸಾವು
CHITRADURGA NEWS | 23 MARCH 2024
ಚಿತ್ರದುರ್ಗ: ನಗರದ ಕೋಣನಹಟ್ಟಿಯ ಓಬಳೇಶ್ ಮತ್ತು ಮಂಜುಳಾ ದಂಪತಿ ಪುತ್ರ 19 ವರ್ಷದ ಓ.ಚೇತನ್ ಹೃದಯಘಾತದಿಂದ ಶುಕ್ರವಾರ ನಿಧನ ಹೊಂದಿದ್ದಾನೆ.
ನಗರದ ಸಿ.ಎನ್.ಸಿ. ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯು ಓದುತ್ತಿದ್ದ ಚೇತನ್, ವಾರ್ಷಿಕ ಪರೀಕ್ಷೆ ಬರೆದು ಆರು ದಿನ ಕಳೆದಿತ್ತು.
ಇದನ್ನೂ ಓದಿ: ಚಿತ್ರದುರ್ಗ ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪ ನಿಧನ
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.90 ರಷ್ಟು ಅಂಕ ಗಳಿಸಿದ್ದ ಚೇತನ್ ಪಿಯುಸಿ ಪರೀಕ್ಷೆಯಲ್ಲೂ ಉತ್ತಮ ಅಂಕ ಗಳಿಸುವ ವಿಶ್ವಾಸ ವ್ಯಕ್ತಪಡಿಸಿದ್ದ. ನೀಟ್ ಪರೀಕ್ಷೆ ತಯಾರಿಗಾಗಿ ಕಳೆದ ನಾಲ್ಕೈದು ದಿನಗಳಿಂದ ತರಬೇತಿಗೂ ಹೋಗುತ್ತಿದ್ದ.
ಚೇತನ್ ನಿಧನದ ಸುದ್ದಿ ತಿಳಿದು ಕಾಲೇಜಿನ ಆಡಳಿತ ಮಂಡಳಿ, ಸಹಪಾಠಿ ವಿದ್ಯಾರ್ಥಿಗಳು, ಬಂಧುಗಳು, ಹಿತೈಷಿಗಳು ಭೇಟಿ ನೀಡಿ ಅಂತಿಮ ದರ್ಶನ ಪಡೆದರು.
ಇದನ್ನೂ ಓದಿ: ಎಚ್.ಎನ್.ಲೋಕೇಶ್ ಕನಕ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ
ನಗರದ ಹೊಳಲ್ಕೆರೆ ರಸ್ತೆಯ ಕನಕ ವೃತ್ತದ ಬಳಿಯ ಹಿಂದೂ ರುದ್ರಭೂಮಿಯಲ್ಲಿ ಶನಿವಾರ ಅಂತ್ಯಕ್ರಿಯೆ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.