ಮುಖ್ಯ ಸುದ್ದಿ
ಎಚ್.ಎನ್.ಲೋಕೇಶ್ ಕನಕ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ
CHITRADURGA NEWS | 23 MARCH 2024
ಚಿತ್ರದುರ್ಗ: ನಗರದ ಕನಕ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಉದ್ಯಮಿ ಎಚ್.ಎನ್.ಲೋಕೇಶ್ ಆಯ್ಕೆಯಾಗಿದ್ದಾರೆ.
ನಗರಸಭೆ ಮಾಜಿ ಅಧ್ಯಕ್ಷರು, ಹಾಲಿ ಸದಸ್ಯರಾಗಿದ್ದ ಡಿ.ಮಲ್ಲಿಕಾರ್ಜುನ್ ಕನಕ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿದ್ದರು.
ಇದನ್ನೂ ಓದಿ: ಚಿತ್ರದುರ್ಗ ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪ ನಿಧನ
ಡಿ.ಮಲ್ಲಿಕಾರ್ಜುನ್ ಅಕಾಲಿಕ ನಿಧನದಿಂದ ತೆರವಾಗಿದ್ದ ಬ್ಯಾಂಕಿನ ಅಧ್ಯಕ್ಷ ಸ್ಥಾನಕ್ಕೆ ಹಾಲಿ ನಿರ್ದೇಶಕರಾಗಿದ್ದ ಎಚ್.ಎನ್.ಲೋಕೇಶ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಸಂಸ್ಥಾಪಕ ಅಧ್ಯಕ್ಷರಾದ ಕೆ.ಬಿ.ರಾಮಪ್ಪ, ಉಪಾಧ್ಯಕ್ಷ ಓಂಕಾರಪ್ಪ, ಕಾರ್ಯದರ್ಶಿ ಷಣ್ಮುಖಪ್ಪ, ನಿರ್ದೇಶಕರಾದ ಕೆ.ಬಿ.ಕೃಷ್ಣಪ್ಪ, ಪುಷ್ಪರಾಜ್, ದೊಡ್ಡ ಲಿಂಗಪ್ಪ, ನೀಲಗಿರಿಯಪ್ಪ, ಡಿ.ಶೋಭಾ, ಈ.ಅರುಣ್‍ಕುಮಾರ್, ಸೋಮಶೇಖರ್, ನರಸಿಂಹಮಮೂರ್ತಿ, ಬಸವರಾಜಪ್ಪ ಸರ್ವಾನುಮತದಿಂದ ಆಯ್ಕೆ ಆಗಿದ್ದಾರೆ.
ಕ್ಲಿಕ್ ಮಾಡಿ ಓದಿ: ಹೊಸದುರ್ಗ, ಹೊಳಲ್ಕೆರೆಯಲ್ಲೂ ಬೋರ್‌ವೆಲ್ ಕೊರೆಯಲು ದರ ನಿಗದಿ | ಜಿಎಸ್‌ಟಿ ಬಿಲ್ ಕೊಡಲು ತಾಕೀತು
ಇದೇ ವೇಳೆ ನೂತನ ನಿರ್ದೇಶಕರಾಗಿ ಆರ್.ಹಾಲಪ್ಪ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
2001-02ನೇ ಸಾಲಿನಲ್ಲಿ ಚಿತ್ರದುರ್ಗ ನಗರದಲ್ಲಿ ಕನಕ ಪತ್ತಿನ ಸಹಕಾರ ಸಂಘ ಆರಂಭವಾಗಿದೆ.