ಮುಖ್ಯ ಸುದ್ದಿ
ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ
CHITRADURGA NEWS | 05 APRIL 2025
ಚಿತ್ರದುರ್ಗ: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ಇಲ್ಲಿನ ಒನಕೆ ಓಬವ್ವ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
Also Read: ಬೆಸ್ಕಾಂ ಎಇಇ ಸೇರಿ ಮೂರು ಜನರಿಗೆ ಜೈಲು ಶಿಕ್ಷೆ | ವಿದ್ಯುತ್ ತಗುಲಿ ಬಾಲಕ ಮೃತಪಟ್ಟಿದ್ದ ಪ್ರಕರಣ
ಪ್ರತಿಭಟನೆಯಲ್ಲಿ ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಎನ್.ಮಹೇಶ್ ಮಾತನಾಡಿ, ಐದು ಗ್ಯಾರೆಂಟಿಗಳನ್ನು ಕ್ರಾಂತಿಕಾರಿ ಯೋಜನೆಗಳು ಎಂಬಂತೆ ಬಿಂಬಿಸಿ ಕೆರೆಯ ನೀರನ್ನು ಕೆರೆಗೆ ಚೆಲ್ಲಿ ವರ ಪಡೆಯುವ ಕೆಲಸವನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಾಡುತ್ತಿದೆ ಎಂದು ಅಭಿಪ್ರಾಯಪಟ್ಟರು.
ಕಳೆದ ಎರಡು ವರ್ಷಗಳಿಂದ ರಾಜ್ಯ ಸರ್ಕಾರ ಜನವಿರೋಧಿ ಆರ್ಥಿಕ ನೀತಿ ಅನುಸರಿಸುತ್ತಿದೆ ಎಂದು ದೂರಿದರು. ಗಂಡನ ಜೇಬಿಗೆ ತೆರಿಗೆ ಹಾಕಿ ಹತ್ತು ರೂ. ಪಡೆದು ಹೆಂಡತಿಗೆ 2 ರೂ ಕೊಡುತ್ತಿದ್ದಾರೆ.
ಜನರ ಬದುಕಿಗೆ ಹೊರೆಯಾಗದಂತೆ ತರುವ ಯೋಜನೆಗಳು ಜನ ಕಲ್ಯಾಣ ಯೋಜನೆಗಳು. ಬಿಜೆಪಿಯವರು ಶೇ. 40 ಕಮಿಷನ್ ಪಡೆಯುತ್ತಿದ್ದಾರೆ, ಅದನ್ನು ನಿಲ್ಲಿಸಿದರೆ ಗ್ಯಾರೆಂಟಿ ಯೋಜನೆಗೆ ಹಣ ಸಾಕಾಗುತ್ತೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಆದರೆ, ಎಲ್ಲ ತನಿಖಾ ಸಂಸ್ಥೆಗಳು ಶೇ.40ಕ್ಕೆ ಸಾಕ್ಷ್ಯಾಧಾರ ಸಿಕ್ಕಿಲ್ಲ ಎಂದು ವರದಿ ಕೊಟ್ಟಿವೆ ಎಂದರು.
Also Read: ಏ.15 ರಿಂದ ಸರ್ಕಾರಿ ನೌಕರರ ಕ್ರೀಡಾಕೂಟ | ಯಾವ ಯಾವ ಕ್ರೀಡೆಗಳಲ್ಲಿ ಭಾಗವಹಿಸಬಹುದು? ಇಲ್ಲಿದೆ ಮಾಹಿತಿ
ಚಿತ್ರದುರ್ಗದ ನಗರಸಭೆ, ಪಪಂ ವ್ಯಾಪ್ತಿಯಲ್ಲಿ ನೀರಿನ ನಲ್ಲಿ ಸಂಪರ್ಕಕ್ಕೆ ಮೂರು ಸಾವಿರ, 11 ಸಾವಿರ ಆಗಿದೆ. ಆರ್ಟಿಸಿ ಗೆ 30, ವಿದ್ಯುತ್ ಪರಿವರ್ತಕ 30 ಸಾವಿರದಿಂದ ಮೂರು ಲಕ್ಷ ಆಗಿದೆ. ನೀರಿನಿಂದ ನೀರಾ ವರೆಗೆ ಎಲ್ಲ ಹಂತದಲ್ಲೂ ಇದು ಜನ ವಿರೋಧಿ ಆಗಿದೆ. ಇದು ದಲಿತ ವಿರೋಧಿ ಸರ್ಕಾರ.
ಶೇ.80 ರಷ್ಟು ದಲಿತರ ಮತ ಪಡೆದು, ಗಂಗಾ ಕಲ್ಯಾಣಕ್ಕೆ ಹಣ ಕೊಟ್ಟಿಲ್ಲ. ಎಸ್ಇಪಿ, ಟಿಎಸ್ಪಿ 38 ಸಾವಿರ ಕೋಟಿ ಗ್ಯಾರೆಂಟಿಗೆ ಕೊಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂವಿಧಾನದ ಪುಸ್ತಕ ಹಿಡಿದು ಓಡಾಡುತ್ತಾರೆ. ಆದರೆ, ಇವರು ಸಂವಿಧಾನ ವಿರೋಧಿಗಳು. ಹಿಂದುಳಿದ ಜಾತಿಗಳಿಗೆ ಮೀಸಲಾತಿ ಕೊಡಲು ಅವಕಾಶವಿದೆ. ಆದರೆ, ಧರ್ಮ ಆಧಾರಿತ ಮೀಸಲಾತಿಗೆ ಸಂವಿಧಾನದಲ್ಲಿ ಅವಕಾಶ ಇಲ್ಲ.
ಗುತ್ತಿಗೆಯಲ್ಲಿ ಮುಸ್ಲೀಂ ಸಮುದಾಯಕ್ಕೆ ಶೇ.೪ ರಷ್ಟು ಮೀಸಲಾತಿ ನೀಡುವುದನ್ನು ಇವರು ಬೆಂಬಲಿಸಿ ಸಂವಿಧಾನಕ್ಕೆ ಅಪಚಾರ ಎಸಗಿದ್ದಾರೆ. ಇದನ್ನು ಪ್ರಶ್ನೆ ಮಾಡಿ ಸಂವಿಧಾನದ ಪರವಾಗಿ ಮಾತನಾಡಿದ ಬಿಜೆಪಿಯ 18 ಶಾಸಕರನ್ನು ಅಮಾನತು ಮಾಡಿದ್ದಾರೆ ಎಂದರು.
Also Read: ಗೋವಿಂದ ಕಾರಜೋಳ ಭಾಷಣಕ್ಕೆ ಆಕ್ಷೇಪ | ಆರೆಸ್ಸೆಸ್ಸ್, ಮೋಹನ್ ಭಾಗವತ್ ಹೆಸರಿಗೆ ತಕರಾರು
ಇದು ಮುಸ್ಲೀಂ ವಿರೋಧಿ ಧೋರಣೆಯ ಮಾತಲ್ಲ, ಅಲ್ಲಿರುವ ಹಿಂದುಳಿದ 19 ಜಾತಿಗಳಿಗೆ ಮೀಸಲಾತಿ ಸಿಕ್ಕಿದೆ, ಆದರೆ, ಸಮವಿಧಾನದ ಸೂಚನೆ ನಿರಾಕರಿಸಿ ಮತ ಬ್ಯಾಂಕ್ ಕಾರಣಕ್ಕೆ ಮೀಸಲಾತಿ ಕೊಟ್ಟು ಸಂವಿಧಾನ ವಿರೋಧಿ ಕೆಲಸ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಳ್ಳ ಹಿಡಿದಿದೆ. ಕೊಡಗಿನ ಬಿಜೆಪಿ ಕಾರ್ಯಕರ್ತ ವಿನಯ್ ಗೆ ಪೊಲೀಸರ ಮೂಲಕ ಹೆದರಿಸಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ್ದಾರೆ. ಡೆತ್ ನೋಟ್ ನಲ್ಲಿ ಶಾಸಕರಾದ ಪೊನ್ನಣ್ಣ, ಮಂತರ್ ಗೌಡ ಹೆಸರು ಬರೆದಿದ್ದಾರೆ. ಆದರೆ, ಅವರ ಹೆಸರು ಎಫ್‌ಐಆರ್‌ನಲ್ಲಿ ಇಲ್ಲ ಎಂದರು.
ಕೋಲಾರದ ಮಾಜಿ ಸಂಸದ ಮುನಿಸ್ವಾಮಿ ಮಾತನಾಡಿ, ನಾವು ಮುಸ್ಲೀಂ ವಿರೋಧಿಗಳಲ್ಲ. ಬಹುಸಂಖ್ಯಾತರ ಅನುದಾನವನ್ನು ಅಲ್ಪ ಸಂಖ್ಯಾತರಿಗೆ ಕೊಡುತ್ತಿರುವ ಸಿದ್ದರಾಮಯ್ಯನವರಿಗೆ ಬಹುಸಂಖ್ಯಾತರ ಮತ ಬೇಡವೇ ಎಂದು ಪ್ರಶ್ನಿಸಿದರು.
Also Read: ಬಿಸಿಲಿಗೆ ನಿಮ್ಮ ಮುಖದ ಚರ್ಮ ಸುಡುತ್ತಿದೆಯೇ? ಹಾಗಾದ್ರೆ ಕಿಚನ್ನಲ್ಲಿ ಸಿಗುವ ಈ 6 ಪದಾರ್ಥಗಳನ್ನು ಮುಖಕ್ಕೆ ಬಳಸಿ
ಪೊಲೀಸ್ ಇಲಾಖೆ ಅಧಿಕಾರಿಗಳು ಕಾಂಗ್ರೆಸ್ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ಕೊಡಗಿನ ಬಿಜೆಪಿ ಕಾರ್ಯಕರ್ತ ಇಬ್ಬರು ಶಾಸಕರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಎಫ್ಐಆರ್ ನಲ್ಕಿ ಹೆಸರು ಸೇರಿಸಿಲ್ಲ. ಪೊಲೀಸರು ಚೇಲಾಗಳ ರೀತಿ ಕೆಲಸ ಮಾಡಬಾರದು. ಮುಂದೆ ನಮ್ಮ ಸರ್ಕಾರ ಬರುವುದಿಲ್ಲವೇ ಎಂದ ಅವರು, ಕಾನೂನು ಕೈಗೆತ್ತಿಕೊಳ್ಳುವವರು ಯಾರೇ ಆಗಿದ್ದರೂ ಬಗ್ಗು ಬಡಿದರೆ ಮಾತ್ರ ಪೊಲೀಸ್ ಇಲಾಖೆ ಬಗ್ಗೆ ಜನರಿಗೆ ವಿಶ್ವಾಸ ಬರುತ್ತದೆ ಎಂದರು.
ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಮಾತನಾಡಿ, ರಾಜ್ಯ ಸರ್ಕಾರದ ನೀತಿಗಳ ವಿರುದ್ಧವಾಗಿ ಮಾತನಾಡಿದ್ದಕ್ಕೆ 18 ಶಾಸಕರನ್ನು ಅಮಾನತು ಮಾಡಿದ್ದಾರೆ. ಯಾವ ಸ್ಪೀಕರ್ ಕೂಡಾ ಇಂತಹ ತೀರ್ಮಾನ ಮಾಡಿರಲಿಲ್ಲ. ವಿಪಕ್ಷಗಳ ಕೆಲಸವೇ ಪ್ರತಿಭಟಿಸುವುದು. ಇಂತಹ ಜನವಿರೋಧಿ ಸರಕಾರವನ್ನು ಹಿಂದೆಂದೂ ನೋಡಿರಲಿಲ್ಲ ಎಂದರು.
ಎಲ್ಲ ದರಗಳನ್ನು ಹೆಚ್ಚಿಸಿ ಜನ ಬದುಕುವುದು ಕಷ್ಟ ಆಗಿದೆ. ಯಾವ ಪುರುಷಾರ್ಥಕ್ಕೆ ಹೀಗೆ ಮಾಡಿದ್ದೀರಿ. ಸಾರ್ವಜನಿಕರ ಮೇಲೆ ಬರೆ ಎಳೆದು ಆಟ ಆಡುತ್ತಿರುವ ಈ ಸರ್ಕಾರ ಹೆಚ್ಚು ದಿನ ಉಳಿಯಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
Also Read: ಮರದ ದಿಮ್ಮಿ ಕಳ್ಳತನ ಯತ್ನ | ಗಿಡ ನೆಟ್ಟು ಬೆಳೆಸುವ ಶಿಕ್ಷೆ ವಿಧಿಸಿದ ನ್ಯಾಯಾಲಯ
ಸಂಸದ ಗೋವಿಂದ ಕಾರಜೋಳ ಮಾತನಾಡಿ, ಈ ಸರ್ಕಾರ ಅಧಿಕಾರಕ್ಕೆ ಬಂದ ಎರಡು ವರ್ಷದ ಸಾಧನೆ ಬೆಲೆ ಏರಿಕೆ. ಗಾಳಿ ಬಿಟ್ಟು ಉಳಿದೆಲ್ಲಕ್ಕೂ ತೆರಿಗೆ ಹಾಕಿದ್ದಾರೆ. ಮುಂದಿನ ದಿನಗಳಲ್ಲಿ ನಾವು ಸೇವಿಸುವ ಗಾಳಿಗೂ ತೆರಿಗೆ ಹಾಕುತ್ತಾರೆ ಎಂದರು.
ಭ್ರಷ್ಟಾಚಾರ, ಅನೈತಿಕತೆಗೆ ಹೆಸರಾದ ಸರ್ಕಾರ. ಹಿರಿಯ ಸಚಿವ ಕೆಎನ್.ರಾಜಣ್ಣ ವಿಧಾನಸಭೆಯಲ್ಲಿ ನೋವು ತೋಡಿಕೊಂಡಿದ್ದಾರೆ. ಹನಿಟ್ರ್ಯಾಪ್, ಸಿಡಿ ಪ್ಯಾಕ್ಟರಿ ಇದೆ ಎಂದು ಹೇಳಿದ್ದಾರೆ. 12 ಜನ ಅಧಿಕಾರಿಗಳು, ಹತ್ತು ಗುತ್ತಿಗೆದಾರರು ಆತ್ಮಹತ್ತೆ ಮಾಡಿಕೊಂಡಿದ್ದಾರೆ. ದುರಾದೃಷ್ಟ ನಮ್ಮ ಕಾರ್ಯಕರ್ತರ ಕೂಡಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಕಾರಣರಾದ ಇಬ್ಬರು ಶಾಸಕರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ, ಮಾಜಿ ಶಾಸಕ ಎಸ್.ಕೆ.ಬಸವರಾಜನ್, ಮುಖಂಡರಾದ ಕೆ.ಟಿ.ಕುಮಾರಸ್ವಾಮಿ, ಡಾ.ಸಿದ್ಧಾರ್ಥ ಗುಂಡಾರ್ಪಿ, ಬಾಳೆಕಾಯಿ ರಾಮದಾಸ್, ಸಂಪತ್‌ಕುಮಾರ್, ಭಾರ್ಗವಿ ದ್ರಾವಿಡ್, ಪಾಲಯ್ಯ, ನಾಗರಾಜ್ ಬೇದ್ರೆ, ಜೈಪಾಲ್, ಸೂರನಹಳ್ಳಿ ಶ್ರೀನಿವಾಸ್, ಎಚ್.ಎನ್.ಲೋಕೇಶ್, ಮಲ್ಲಿಕಾರ್ಜುನ್, ಶ್ರೀರಾಮರೆಡ್ಡಿ, ಶ್ಯಾಮಲಾ ಶಿವಪ್ರಕಾಶ್, ಜಗದೀಶ್, ಪಂಪಾ, ಸುರೇಶ್ ಇತರರಿದ್ದರು.
ಸಿದ್ದರಾಮಯ್ಯ ತಮ್ಮ ಕುರ್ಚಿ ಉಳಿಸಿಕೊಳ್ಳಲು ಬಡವರನ್ನು ಬಲಿ ಕೊಡುತ್ತಿದ್ದಾರೆ.ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದು ಹೋಗಿದೆ. ಬೆಲೆ ಏರಿಕೆಯಿಂದ ಜನಜೀವನ ದುಸ್ಥರವಾಗಿದೆ. ಇದನ್ನು ಪ್ರಶ್ನಿಸಿದರೆ ಸದನದಲ್ಲಿ ಸ್ಪೀಕರ್ ಮೂಲಕ ಶಾಸಕರನ್ನು ಹೊರಗೆ ಹಾಕಿಸುತ್ತಿದ್ದಾರೆ. | ಕೆ.ಎಸ್.ನವೀನ್, ವಿಧಾನ ಪರಿಷತ್ ಸದಸ್ಯರು.