Connect with us

ಹೈವೆನಲ್ಲಿ ಕಾರು ಯು-ಟರ್ನ್| ಬೈಕಿಗೆ ಡಿಕ್ಕಿ ಚಾಲಕ ಮೃತ

FIR

ಕ್ರೈಂ ಸುದ್ದಿ

ಹೈವೆನಲ್ಲಿ ಕಾರು ಯು-ಟರ್ನ್| ಬೈಕಿಗೆ ಡಿಕ್ಕಿ ಚಾಲಕ ಮೃತ

ಚಿತ್ರದುರ್ಗ ನ್ಯೂಸ್.ಕಾಂ: ಬೈಕಿಗೆ ಕಾರು ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ಹಿರಿಯೂರು ತಾಲೂಕಿನ ಆನೆಸಿದ್ರಿ ಬಳಿ ನಡೆದಿದೆ.

ಯಾವುದೇ ಮುನ್ಸೂಚನೆ ನೀಡದೆ ಕಾರು ಯೂ-ಟರ್ನ್ ತೆಗೆದುಕೊಳ್ಳುವಾಗ ರಸ್ತೆಯಲ್ಲಿ ಬಂದ ಬೈಕಿಗೆ ಡಿಕ್ಕಿಯಾಗಿದ್ದು, ಬೈಕ್ ಸವಾರ ಮೃತಪಟ್ಟಿದ್ದಾರೆ.

ಚಳ್ಳಕೆರೆ ತಾಲ್ಲೂಕು ಹನುಮಂತನಹಳ್ಳಿ-ಗೊಲ್ಲರಹಟ್ಟಿ ಗ್ರಾಮದ 24 ವರ್ಷದ ಸುಧಾಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಬೈಕಿನ ಹಿಂಬದಿಯಲ್ಲಿದ್ದ ಮತ್ತೋರ್ವ ವ್ಯಕ್ತಿ ಕಲಬುರಗಿ ಜಿಲ್ಲೆ, ಚಿತ್ತಾಪುರ ತಾಲೂಕು ಬೆನ್ನೂರು ಗ್ರಾಮದ ಅಂಬರೀಶ್ ಗಾಯಗೊಂಡಿದ್ದಾರೆ.

ಇದನ್ನೂ ಓದಿ: ಬಂಗಾರದ ನಾಣ್ಯದ ಆಸೆ ತೋರಿಸಿ 8 ಲಕ್ಷ ದೋಚಿದ್ದ ಕಳ್ಳ ಅಂದರ್

ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಗೋವಿಂದರಾಜು ಎಂಬುವವರು ಹಿರಿಯೂರು ತಾಲ್ಲೂಕಿನ ಜವಗೊಂಡನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಶೆಟ್ಟಿ ಲಂಚ್ ಹೋಮ್ ಹೋಟೆಲ್ ಸಮೀಪದ ಆನೆಸಿದ್ರಿ ಸರ್ವಿಸ್ ರಸ್ತೆಯಿಂದ ತಮ್ಮ ಕಾರನ್ನು ಬೆಂಗಳೂರು ಕಡೆಗೆ ಹೋಗಲು ಯಾವುದೇ ಮುನ್ಸೂಚನೆ ನೀಡದೆ ಯೂ-ಟರ್ನ್ ತೆಗೆದುಕೊಂಡ ಪರಿಣಾಮ ಬೆಂಗಳೂರು ಕಡೆಯಿಂದ ಹಿರಿಯೂರಿಗೆ ಹೋಗಲು ಬರುತ್ತಿದ್ದ ಬೈಕಿಗೆ ಡಿಕ್ಕಿಯಾಗಿದೆ.

ಡಿಕ್ಕಿಯ ಪರಿಣಾಮ ಬೈಕ್ ಜಖಂ ಆಗಿದ್ದು, ಬೈಕ್ ಚಾಲಕ ಮೃತಪಟ್ಟು, ಹಿಂಬದಿ ಕುಳಿತಿದ್ದ ಸವಾರ ಗಾಯಗೊಂಡಿದ್ದಾರೆ.

ಈ ಬಗ್ಗೆ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Click to comment

Leave a Reply

Your email address will not be published. Required fields are marked *

More in ಕ್ರೈಂ ಸುದ್ದಿ

To Top
Exit mobile version