ಕ್ರೈಂ ಸುದ್ದಿ
ಪೊಲೀಸರು ಲಂಚಕ್ಕೆ ಪೀಡಿಸಿದ ಆರೋಪ | ತನಿಖೆಗೆ ಸೂಚಿಸಿದ ಎಸ್ಪಿ
ಚಿತ್ರದುರ್ಗ ನ್ಯೂಸ್.ಕಾಂ: ಪೊಲೀಸರು ಲಂಚಕ್ಕೆ ಪೀಡಿಸುತ್ತಿರುವುದು ಎಂದು ವೈರಲ್ ಆಗಿರುವ ವೀಡಿಯೋ ಕುರಿತು ತನಿಖೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ಸೂಚಿಸಿದ್ದಾರೆ.
ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಪಾರ್ಕಿಂಗ್ ಜಾಗದಲ್ಲಿ ಪೊಲೀಸ್ ಅಧಿಕಾರಿ ಹಾಗೂ ಯೊವಕನೋರ್ವನ ನಡುವೆ ಮಾತುಕತೆ, ಹಣ ಕೊಡುವುದು, ವಾಪಾಸು ಕೊಡುವುದು, ಜೇಬಿಗೆ ಕೈ ಹಾಕುವುದು, ಮತ್ತೋರ್ವ ಕಾನ್‍ಸ್ಟೇಬಲ್ ಹೊಡೆಯಲು ಕೈ ಎತ್ತುವ ದೃಶ್ಯಗಳಿರುವ ವೀಡಿಯೋ ವೈರಲ್ ಆಗಿದ್ದು, ಪೊಲೀಸರು ಲಂಚಕ್ಕೆ ಪೀಡಿಸುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು.
ಒಂದು ವಾರದ ಹಿಂದೆ ಈ ಘಟನೆ ನಡೆದಿದ್ದು, ಗ್ರಾಮಾಂತರ ಠಾಣೆ ಎಎಸ್‍ಐ ರೇವಣ್ಣ ವಿರುದ್ಧ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ: ಬಂಗಾರದ ನಾಣ್ಯದ ಕಥೆ 8 ಲಕ್ಷಕ್ಕೆ ನಾಮ
ಈ ಹಿನ್ನೆಲೆಯಲ್ಲಿ ಡಿವೈಎಸ್‍ಪಿ ಅನಿಲ್‍ಕುಮಾರ್ ಅವರಿಗೆ ಪ್ರಕರಣದ ತನಿಖೆ ನಡೆಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.
ಕರ್ನಾಟಕ ಪೊಲೀಸ್ ಕಾಯ್ದೆಯ ಕಲಂ 92ರ ಅಡಿಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ದಂಡ ವಸೂಲಿ ಮಾಡುತ್ತಿರುವುದನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಠಾಣಾಧಿಕಾರಿ ವಿವರಣೆ ನೀಡಿದ್ದಾರೆ. ಆದರೆ, ಪ್ರಕರಣದ ಸತ್ಯಾಸತ್ಯತೆ ಅರಿಯಲು ಡಿವೈಎಸ್ಪಿ ಅನೀಲ್‍ಕುಮಾರ್ ತನಿಖೆ ನಡೆಸಲು ತಿಳಿಸಿದ್ದು, ಆರೋಪ ಸಾಬೀತಾದರೆ ಶಿಸ್ತುಕ್ರಮ ಜರುಗಿಸುವ ಬಗ್ಗೆ ಎಸ್ಪಿ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದ್ದಾರೆ.