ಹೊಳಲ್ಕೆರೆ
ಬೆಸ್ಕಾಂ ನಿರ್ಲಕ್ಷ | ಸಾರ್ವಜನಿಕರಿಗೆ ಜೀವ ಭಯ
CHITRADURGA NEWS | 13 MAY 2024
ಹೊಳಲ್ಕೆರೆ: ಬಾಗಿರುವ ವಿದ್ಯುತ್ ಕಂಬಗಳು ಆಗಲೋ ಈಗಲೋ ಬೀಳುವಂತೆ ರಸ್ತೆ ಬದಿಯಲ್ಲಿ ನಿಂತಿರುವ ಜೋಡು ಕಂಬಗಳು, ನೆಲಕ್ಕೆ ಬೀಳುತ್ತವೆ ಅನ್ನುವಷ್ಟು ಕೆಳಗಡೆ ಜೋತಾಡುತ್ತಿರುವ ವಿದ್ಯುತ್ ತಂತಿ, ಅದರ ಕೆಳಗೆ ಜೀವ ಭಯದಿಂದ ಸಾರ್ವಜನಿಕರು ದಿನನಿತ್ಯ ಓಡಾಡುತ್ತಿರುವವರು ಹಾಗೂ ಕೃಷಿ ಚಟುವಟಿಯಲ್ಲಿ ನಿರಂತರವಾಗಿರುವವರು.
ಇದನ್ನೂ ಓದಿ: ಈ ವರ್ಷ ಯಾವ ಮಳೆ ಚೆನ್ನಾಗಿದೆ | ಯಾವ ಮಳೆ ಎಷ್ಟು ಸುರಿಯುತ್ತೆ | ಪಂಚಾಂಗದ ಪ್ರಕಾರ ಮಳೆ ಭವಿಷ್ಯ
ಹೊಳಲ್ಕೆರೆ ತಾಲೂಕಿನ ಮಾಳೇನಹಳ್ಳಿ ಹಾಗೂ ಗುಂಡೇರಿಗೆ ಹೋಗುವ ರಸ್ತೆ ಉದ್ದಕ್ಕೂ ಈ ದೃಶ್ಯಗಳು ಕಂಡುಬರುತ್ತವೆ.
ಈ ರಸ್ತೆ ಉದ್ದಕ್ಕೂ ಎರಡು ಬದಿಯಲ್ಲಿ ವಿದ್ಯುತ್ ತಂತಿಯನ್ನು ಹಾಕಲಾಗಿದೆ, ಈ ವಿದ್ಯುತ್ ತಂತಿಯನ್ನು ಒತ್ತು ನಿಂತಿರುವ ಕಂಬಗಳು ಆಗಲೋ ಈಗಲೋ ಎಂಬಂತೆ ಬೀಳಲು ಸಿದ್ಧವಾಗಿದೆ.
ಒಂದು ವೇಳೆ ಕಂಬಗಳು ಬಿದ್ದರೆ ಅದು ರಸ್ತೆಯ ಮೇಲೆ ಬೀಳುತ್ತವೆ, ಇಲ್ಲಿ ದಿನನಿತ್ಯ ಸಾರ್ವಜನಿಕರು ಓಡಾಡುತ್ತಿದ್ದು, ಕಂಬಗಳು ಎಲ್ಲಿ ಬೀಳುತ್ತವೆ ಎಂಬ ಭಯದಿಂದ ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುತ್ತಾರೆ.
ಇದನ್ನೂ ಓದಿ: ಪ್ರತಿಷ್ಠಿತ ಶಾಲೆಗೆ ಶಿಕ್ಷಕರು ಬೇಕಾಗಿದ್ದಾರೆ | ಅರ್ಜಿ ಸಲ್ಲಿಸಲು ಹಿಂದೆ ಕೊನೆಯ ದಿನ
ಈ ರಸ್ತೆಯಲ್ಲಿ ದಿನನಿತ್ಯ ಸಾವಿರಾರು ಜನರು ಬೆಳಿಗ್ಗೆ ಸಂಜೆ ಓಡಾಡುತ್ತಿದ್ದು, ರಸ್ತೆಯಲ್ಲಿ ಹೋಗಲು ಭಯಪಡುತ್ತಿದ್ದಾರೆ.
ಈ ಸಮಸ್ಯೆಯನ್ನು ಬಗೆಹರಿಸಲು ಬೆಸ್ಕಾಂ ಸಿಬ್ಬಂದಿಗಳು ಬಂದು ವೀಕ್ಷಿಸದೆ, ಬೇಜವಾಬ್ದಾರಿತನ ತೋರುತ್ತಿದ್ದಾರೆ ಎಂದು ಗ್ರಾಮದವರು ಆರೋಪಿಸುತ್ತಿದ್ದಾರೆ.
ಮುಂದೆ ಕಂಬ ಬಿದ್ದಾಗ ಬಂದು ಸಾಂತ್ವನ ಹೇಳಿ ಪರಿಹಾರ ಕೊಡುವ ಬದಲು ಮಳೆಗಾಲ ಆರಂಭವಾಗುತ್ತಿರುವ ಈಗಕೇ ಬಂದು ಕೆಇಬಿ ಅಧಿಕಾರಿಗಳು ಕಂಬ ನೆಟ್ಟಗೆ ಮಾಡಲಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.