ಮುಖ್ಯ ಸುದ್ದಿ
ಮುರುಘಾ ಮಠದಲ್ಲಿ ಬಸವತತ್ವ ಶರಣ ಕಾರ್ಯಗಾರ | ಬಸವ ಗುರುಕುಲದ ಮುಖ್ಯಸ್ಥರಾದ ಶಿವಾನಂದ ಗುರೂಜಿ ಭಾಗೀ
CHITRADURGA NEWS | 16 JUNE 2024
ಚಿತ್ರದುರ್ಗ: ನಗರದ ಮುರುಘರಾಜೇಂದ್ರ ಬೃಹನ್ಮಠದ ಅಲ್ಲಮಪ್ರಭು ಸಂಶೋಧನಾ ಕೇಂದ್ರದಲ್ಲಿ ಏರ್ಪಡಿಸಿದ್ದ ಎರಡು ದಿನಗಳ ಬಸವತತ್ವ ಶರಣ ಜಾಗೃತಿ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು.
ಇದನ್ನೂ ಓದಿ: ನನ್ನಿಂದ ಹೀಗೆ ಆಗೊಯ್ತಲ್ಲ…ಕಣ್ಣೀರಿಟ್ಟ ಅನು ಕುಮಾರ್ | ತಡರಾತ್ರಿ ಆರೋಪಿ ತಂದೆ ಅಂತ್ಯಕ್ರಿಯೆ
ಈ ಒಂದು ಕಾರ್ಯಗಾರಕ್ಕೆ ಕುಂಬಳಗೂರಿನ ಬಸವ ಗುರುಕುಲದ ಮುಖ್ಯಸ್ಥರಾದ ಶಿವಾನಂದ ಗುರೂಜಿ ಭಾಗವಹಿಸಿ ಮಾತನಾಡಿ, ಲಿಂಗಾಯಿತ ಧರ್ಮದಲ್ಲಿ ಇನ್ನೂ ತಾತ್ವಿಕ ಹೊಂದಾಣಿಕೆ ಇಲ್ಲ. ಪರಸ್ಪರರಲ್ಲಿ ಅರಿವಿನ ಕೊರತೆ ಇದೆ. ಇದಕ್ಕೆ ನಾವು ಮೊದಲು ಮದ್ದನ್ನು ಕಂಡುಹಿಡಿದು ಆ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಬೇಕಿದೆ ಎಂದರು.
ಬಸವ ಧರ್ಮದಲ್ಲಿ ಲಿಂಗಾಯತ ತತ್ವ ಇದೆ ಎನ್ನುವುದನ್ನು ಅರಿಯಬೇಕಿದೆ. ನಮ್ಮ ಆಚರಣೆಗಳು ಬಹುತೇಕ ಮೂಢನಂಬಿಕೆಗಳಿಂದ ಕೂಡಿದ್ದು, ನಾವು ಆಚರಿಸುವುದಲ್ಲದೆ ಬೇರೆಯವರನ್ನು ಅದೇ ದಾರಿಗೆ ಕೊಂಡೊಯ್ಯುವ ಮೂಲಕ ಅಂಧಸಂಪ್ರದಾಯಕ್ಕೆ ಶರಣಾಗಿರುವುದರಿಂದ ತತ್ವ ಪ್ರಚಾರಕ್ಕೆ ಅಡಚಣೆಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಇದನ್ನೂ ಓದಿ: ಬೆಳೆ ಕಟಾವು ನಿರ್ಲಕ್ಷ್ಯ ತೋರಿದರೆ ಕ್ರಮ | ಅಧಿಕಾರಿಗಳಿಗೆ ಎಡಿಸಿ ಬಿ.ಟಿ.ಕುಮಾರಸ್ವಾಮಿ ಎಚ್ಚರಿಕೆ
ಹನ್ನೆರಡನೇ ಶತಮಾನದ ಕ್ರಾಂತಿ ಅದು ಕೇವಲ ಧರ್ಮ ಜಾಗೃತಿಯಾಗಿರದೇ ಸಾಮಾಜಿಕವಾಗಿ ಸಮಾನತೆ ತರುವ ಪ್ರಜಾಪ್ರಭುತ್ವವಾದಿ ಜಾಗೃತಿ ಆಂದೋಲನವಾಗಿತ್ತು. ಬಸವಾದಿ ಶರಣರ ವಿಚಾರಧಾರೆಗಳು ಕೇವಲ ಭಾರತಕಷ್ಟೇ ಮೀಸಲಾಗದೆ ವಿಶ್ವಕ್ಕೆ ತಲುಪಲು ಆ ಮೂಲಕ ಅನುಷ್ಠಾನಕ್ಕೆ ಬರಲು ಸಾಧ್ಯವಾಯಿತು ಎಂದು ಮೈಸೂರಿನ ಭಾವೈಕ್ಯ ಕೇಂದ್ರದ ಹಾಗೂ ಮುರುಘರಾಜೇಂದ್ರ ಮಹಾಲಿಂಗೇಶ್ವರ ಮಠದ ಬಸವಲಿಂಗ ಮೂರ್ತಿ ಸ್ವಾಮೀಜಿ ಅವರು ಅಭಿಪ್ರಾಯಪಟ್ಟರು.
ಬಸವತತ್ವದಲ್ಲಿ ಮೇಲು-ಕೀಳಿಲ್ಲ, ಬಡವ-ಬಲ್ಲಿದ, ಲಿಂಗ ತಾರತಮ್ಯವಿರದ ಸಮ ಸಮಾಜದ ಸಾಮ್ರಾಜ್ಯ ಅದು. ಆ ಮೂಲಕ ಕಲ್ಯಾಣ ರಾಜ್ಯ ಕಟ್ಟಲು ಶಮಿಸಿದರು. ಶಿವಶರಣೆ ಹಡಪದ ಲಿಂಗಮ್ಮನವರು ತಮ್ಮ ವಚನದಲ್ಲಿ ಬಸವಣ್ಣನವರ ಕಲ್ಯಾಣ ರಾಜ್ಯದಲ್ಲಿ ನಾನು ಕನಿಷ್ಠದಲ್ಲಿ ಹುಟ್ಟಿ ಉತ್ತಮರ ಸಹವಾಸದಲ್ಲಿ ಬೆಳೆದು, ಅಂಥವರ ಮಾರ್ಗದರ್ಶನದಲ್ಲಿ ಸುಖೀ ಜೀವನ ಕಂಡುಕೊಂಡೆ ಎನ್ನುತ್ತಾರೆ. ಅಂತಹ ಸಮ ಸಮಾಜ ನಿರ್ಮಾಣದ ಕೆಲಸ ಮುರುಘಾಮಠದದಿಂದಲೂ ನಡೆದಿದೆ ಎಂದರು.
ಇದನ್ನೂ ಓದಿ: ರೇಣುಕಾಸ್ವಾಮಿ ಪ್ರಕರಣದಲ್ಲಿ ಯಾರನ್ನು ರಕ್ಷಿಸುವ ಮಾತಿಲ್ಲ | ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ
ಕಲಬುರ್ಗಿ ಭಾಗದ ಮರುಳಶಂಕರ ಗುರುಪೀಠದ ಸಿದ್ಧಬಸವ ಕಬೀರ ಶ್ರೀಗಳು ಮಾತನಾಡಿ, ಲಿಂಗಾಯತರಲ್ಲಿ ಸಹಕಾರ ಭಾವನೆ ಇದೆ. ಬಸವಣ್ಣನವರು ಹೇಳಿರುವ ಹಾಗೆ ಅಂತರಂಗ, ಬಹಿರಂಗ ಶುದ್ದಿಯ ಕೆಲಸ ಆಗಬೇಕಿದೆ. ಅದಕ್ಕಾಗಿ ನಾವು ತತ್ವ ಪ್ರಚಾರಕರು ಅತ್ತ ಗಮನಹರಿಸಬೇಕಾಗಿದೆ ಎಂದು ಹೇಳಿದರು.
ಜಗದ್ಗುರು ಶ್ರೀ ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ. ಮಾತನಾಡಿ, ನಾವು ಎಲ್ಲಿಯ ತನಕ ಅನುಭಾವಿಗಳಿಗೆ ಸಿಗಬೇಕಾದ ಗೌರವ ಮುನ್ನಣೆಗಳು ಸಿಗುವುದಿಲ್ಲವೋ, ಅಲ್ಲಿಯತನಕ ಧರ್ಮದ ಏಳಿಗೆ ಸಾಧ್ಯವಾಗುವುದಿಲ್ಲ. ಉದಾಹರಣೆಗೆ ಜೈನಧರ್ಮದ ಸ್ವಾಮಿಗಳ ನಡೆ-ನುಡಿ ಕಂಡ ಜನರು ಅವರ ಧರ್ಮಕ್ಕೆ ಮಾರುಹೋಗುತ್ತಾರೆ. ಅದರಂತೆ ಬಸವ ಧರ್ಮದಲ್ಲಿಯೂ ಕಾಯಕ, ದಾಸೋಹ, ಅಷ್ಟಾವರಣ, ಪಂಚಾಚಾರ ಅನುಸರಣೆ ಮಾಡುವಂತ ಅನುಭಾವಿಗಳಿಗೆ ಗೌರವ ನೀಡಿ ಅವರನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
ಇದನ್ನೂ ಓದಿ: ರೇಣುಕಾಸ್ವಾಮಿ ಕುಟುಂಬದ ಜತೆ ನಾವಿದ್ದೇವೆ | ಚಲನಚಿತ್ರ ವಾಣಿಜ್ಯ ಮಂಡಳಿ
ಚಿತ್ರದುರ್ಗದ ಮುರುಘಾಮಠದಲ್ಲಿ ಎಷ್ಟೋ ಅನುಭಾವಿಗಳು ಬಂದು ಇದ್ದದ್ದನ್ನು ನಾವು ನೀವು ಕಂಡಿದ್ದೆವೆ. ಹಾಗೆಯೇ ಗದಗ, ಇಳ್‌ಕಲ್ ಸೇರಿದಂತೆ ಬಸವತತ್ವ ಪ್ರಚಾರದಲ್ಲಿ ಮುಂಚೂಣಿಯಲ್ಲಿರುವ ಅನೇಕ ಮಠಗಳು ಬಸವತತ್ವ ಪ್ರಸಾರ ಕಾರ್ಯಕ್ಕೆ ನಿಂತಿವೆ ಎಂದು ನುಡಿದರು.
ಕಾರ್ಯಗಾರದಲ್ಲಿ ಬಸವತತ್ವ ಸಮಾವೇಶದ ಸಂಘಟಕರಾದ ತಿಪ್ಪೇರುದ್ರ ಸ್ವಾಮಿಗಳು, ಧಾರವಾಡ, ಹಿರೇಹೊನ್ನಿಹಳ್ಳಿ ಬಸವ ಮಂಟಪದ ಚನ್ನಬಸವ ಸ್ವಾಮಿಗಳು, ಚಿತ್ರದುರ್ಗ ಮುರುಘಾಮಠದ ಗುರುಕುಲದ ಉಪನ್ಯಾಸಕ ಕಡೂರಿನ ಜಿ.ವಿ. ಮಂಜುನಾಥ್ ಸೇರಿದಂತೆ ಅನೇಕ ಅನುಭಾವಿಗಳು, ಬಸವತತ್ವಾಭಿಮಾನಿಗಳು ಭಾಗವಹಿಸಿದ್ದರು.