ಮುಖ್ಯ ಸುದ್ದಿ
ಅಯೋಧ್ಯೆಯ ಮಂತ್ರಾಕ್ಷತೆ ದುರ್ಗದ ಮನೆ ಮನೆಗೆ | ಗಣ್ಯರ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ..
ಚಿತ್ರದುರ್ಗ ನ್ಯೂಸ್.ಕಾಂ: ಅಯೋಧ್ಯೆಯಲ್ಲಿ ಜನವರಿ 22 ರಂದು ಶ್ರೀ ಬಾಲ ರಾಮ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಶ್ರೀರಾಮ ಮಂದಿರ ಟ್ರಸ್ಟ್ ದೇಶಾದ್ಯಂತ ಪ್ರತಿ ಮನೆಗೂ ಪವಿತ್ರ ಮಂತ್ರಾಕ್ಷತೆ, ಶ್ರೀರಾಮ ಮಂದಿರದ ಭಾವಚಿತ್ರ ಹಾಗೂ ಕರಪತ್ರ ವಿತರಣೆ ಮಾಡುತ್ತಿದೆ.
ದೇಶದ ಪ್ರತಿ ಜಿಲ್ಲೆ, ಪ್ರತಿ ತಾಲೂಕಿನ ಗ್ರಾಮ ಗ್ರಾಮಗಳಲ್ಲೂ ಭರ್ಜರಿಯಾಗಿ ಮಂತ್ರಾಕ್ಷತೆ ವಿತರಣೆಗೆ ಚಾಲನೆ ದೊರೆತಿದೆ.
ಅಯೋಧ್ಯೆಯ ಮಂತ್ರಾಕ್ಷತೆ ದುರ್ಗದ ಮನೆ ಮನೆಗೆ
ಈಗಾಗಲೇ ಜಿಲ್ಲಾ ಕೇಂದ್ರದಿಂದ ತಾಲೂಕು ಕೇಂದ್ರಗಳಿಗೆ ಬಂದ ಮಂತ್ರಾಕ್ಷತೆಯನ್ನು ಅದ್ದೂರಿಯಾಗಿ ಸ್ವಾಗತಿಸಿ ಗ್ರಾಮದ ದೇವಸ್ಥಾನಗಳಲ್ಲಿ ಪೂಜೆ ಮಾಡಿಸಿ, ಜನವರಿ ಮೊದಲ ವಾರದಲ್ಲಿ ವಿತರಣೆಗೆ ಚಾಲನೆ ನೀಡಲಾಗಿದೆ.
ಇದನ್ನೂ ಓದಿ: ಅಯೋಧ್ಯೆಯಲ್ಲಿ ದುರ್ಗದ ಕೀರ್ತಿ
ಪ್ರತಿ ಮನೆಯಲ್ಲೂ ಮಂತ್ರಾಕ್ಷತೆಯನ್ನು ಪವಿತ್ರ ಭಾವನೆಯಿಂದ ಸ್ವೀಕರಿಸಿ ಪೂಜಿಸಿ ಸ್ವೀಕರಿಸುವ ದೃಶ್ಯಗಳು ವಿತರಣೆ ಮಾಡುತ್ತಿರುವ ಅಭಿಯಾನದಲ್ಲಿರುವ ಕಾರ್ಯಕರ್ತರಿಗೆ ಸಿಗುತ್ತಿವೆ.
ಅಯೋಧ್ಯೆಯ ಮಂತ್ರಾಕ್ಷತೆ ದುರ್ಗದ ಮನೆ ಮನೆಗೆ
ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಸುಮಾರು 5 ಸಾವಿರ ಕಾರ್ಯಕರ್ತರು ಕಳೆದೊಂದು ವಾರದಿಂದ ಮಂತ್ರಾಕ್ಷತೆ ವಿತರಣೆಯಲ್ಲಿ ನಿರತರಾಗಿದ್ದಾರೆ.
ಯಾವ ಗ್ರಾಮ, ಮನೆಯನ್ನೂ ಬಿಟ್ಟು ಹೋಗಬಾರದು ಎನ್ನುವ ಎಚ್ಚರಿಕೆಯೊಂದಿಗೆ ವಿತರಣೆ ನಡೆಯುತ್ತಿದೆ.
ಚಿತ್ರದುರ್ಗ ನಗರದಲ್ಲಿ ಕೂಡಾ ಸಂಘ ಪರಿವಾರದ ಮುಖಂಡರು ಮಂತ್ರಾಕ್ಷತೆ, ಅಯೋಧ್ಯೆಯ ಕರಪತ್ರ ಹಾಗೂ ಭಾವಚಿತ್ರಗಳನ್ನು ಗಣ್ಯರು, ಪ್ರಮುಖರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ.
ಅಯೋಧ್ಯೆಯ ಮಂತ್ರಾಕ್ಷತೆ ದುರ್ಗದ ಮನೆ ಮನೆಗೆ
ಚಿತ್ರದುರ್ಗ ನಗರದಲ್ಲಿ ಬಹುತೇಕರು ಮನೆಗೆ ಬರುವ ಮಂತ್ರಾಕ್ಷತೆಯನ್ನು ಆರತಿ ಬೆಳಗಿ ಸ್ವಾಗತಿಸಿ, ಮನೆಯ ದೇವರ ಮಂದಿರದ ಬಳಿ ಪೂಜೆ ಸಲ್ಲಿಸಿ ಪಡೆದುಕೊಳ್ಳುತ್ತಿದ್ದಾರೆ.
ಆರತಿ ಬೆಳಗುವಾಗ ಶ್ರೀರಾಮ ಅಥವಾ ದೇವರ ಕೀರ್ತನೆಗಳನ್ನು ಹಾಡುತ್ತಾ ಪಡೆಯುತ್ತಿರುವುದು ರಾಮ ಮಂದಿರಕ್ಕಾಗಿ ದೇಶ ಎಷ್ಟು ಹಂಬಲಿಸುತ್ತಿತ್ತು ಎನ್ನುವುದರ ಸೂಚಕವಾಗಿದೆ ಎಂದು ಕಾರ್ಯಕರ್ತರು ಅಭಿಪ್ರಾಯಪಟ್ಟಿದ್ದಾರೆ.
ಅಯೋಧ್ಯೆಯ ಮಂತ್ರಾಕ್ಷತೆ ದುರ್ಗದ ಮನೆ ಮನೆಗೆ
ಚಿತ್ರದುರ್ಗ ನಗರದಲ್ಲಿ ಬಿಜೆಪಿ ಯುವ ಮುಖಂಡರಾದ ಜಿ.ಎಸ್.ಅನಿತ್‍ಕುಮಾರ್, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಟಿ.ಬದರೀನಾಥ್ ನೇತೃತ್ವದಲ್ಲಿ ಡಾ.ಸಿದ್ಧಾರ್ಥ್, ಎಂ.ಸಿ.ರಘುಚಂದನ್ ಸೇರಿದಂತೆ ಅನೇಕರ ತಂಡ ಮಾಡಿಕೊಂಡು ಮಠ, ಮಂದಿರಗಳು, ಪ್ರಮುಖರ ಮನೆಗೆ ಮಂತ್ರಾಕ್ಷತೆ ವಿತರಣೆ ಮಾಡುತ್ತಿದ್ದಾರೆ.
ಇವರೊಟ್ಟಿಗೆ ಸಂಘ ಪರಿವಾರದ ಪ್ರಮುಖರಾದ ರಾಜಕುಮಾರ್, ವಿಎಚ್‍ಪಿ ಜಿಲ್ಲಾ ಕಾರ್ಯದರ್ಶಿ ರುದ್ರೇಶ್, ಕೇಶವ, ಬಜರಂಗದಳ ಪ್ರಾಂತ ಸಹ ಸಂಯೋಜಕ ಪ್ರಭಂಜನ್, ಬಿಜೆಪಿಯ ಮಲ್ಲಿಕಾರ್ಜುನ್, ಜ.ರಾ.ನಾಗೇಶ್, ಶ್ರೀನಾಥ್, ಶ್ರೇಣೀಕ್ ಜೈನ್, ನಯನ್, ಸೇರಿದಂತೆ ಹಲವು ಪ್ರಮುಖರು ಅಭಿಯಾನದಲ್ಲಿ ಜೋಡಿಸಿಕೊಂಡಿದ್ದಾರೆ.
ಅಯೋಧ್ಯೆಯ ಮಂತ್ರಾಕ್ಷತೆ ದುರ್ಗದ ಮನೆ ಮನೆಗೆ
ಚಿತ್ರದುರ್ಗ ನಗರದ ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ, ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ, ಶ್ರೀ ಇಮ್ಮಡಿ ಮೇದಾರ ಕೇತೇಶ್ವರ ಸ್ವಾಮೀಜಿ, ಕುಂಬಾರ ಗುರುಪೀಠದ ಶ್ರೀಗಳು, ಪತಂಜಲಿ ಆಸ್ಪತ್ರೆಯ ಡಾ.ಮುಕುಂದರಾವ್, ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ, ಮಾಜಿ ಶಾಸಕ ಎಸ್.ಕೆ.ಬಸವರಾಜನ್, ಆರ್ಯವೈಶ್ಯ ಸಮಾಜದ ಅಧ್ಯಕ್ಷ ಶ್ರೀನಿವಾಸ್ ಶೆಟ್ಟಿ, ಡಾ.ಜಗದೀಶ್, ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಸೇರಿದಂತೆ ಹಲವು ಗಣ್ಯರ ಮನೆಗಳಿಗೆ ಪವಿತ್ರ ಮಂತ್ರಾಕ್ಷತೆ ವಿತರಣೆ ಮಾಡಲಾಗಿದೆ.