ಕ್ರೈಂ ಸುದ್ದಿ
ಅಪಘಾತವೆಂದು ಆಸ್ಪತ್ರೆಗೆ ದಾಖಲಿಸಿದ್ದವನೇ ಅಂದರ್ | ತಿರುವು ಪಡೆದುಕೊಂಡ ಆಕ್ಸಿಡೆಂಟ್ ಕೇಸ್
CHITRADURGA NEWS | 8 APRIL 2025
ಚಿತ್ರದುರ್ಗ: ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪರಿಚಿತ ಶವವಾಗಿ ಪತ್ತೆಯಾಗಿದ್ದ ಮಹಿಳೆಯ ಪ್ರಕರಣ ತಿರುವು ಪಡೆದುಕೊಂಡಿದೆ. ಅಪಘಾತ ಎಂದು ಆಸ್ಪತ್ರೆಗೆ ದಾಖಲಿಸಿದವನೇ ಕೊಲೆಯ ಆಪಾದನೆಯಡಿ ಅಂದರ್ ಆಗಿದ್ದಾನೆ.
ಮಠದಕುರುಬರಹಟ್ಟಿಯ ನೇತ್ರಾವತಿ(27) ಏಪ್ರಿಲ್ 6 ರಂದು ಬಿದ್ದು ಹಾಯಗಳಾದ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು, ವೈದ್ಯರು ಪರೀಕ್ಷಿಸಿದಾಗ ಮೃತಪಟ್ಟಿದ್ದರು.
ಇದನ್ನೂ ಓದಿ: ಪರೀಕ್ಷೆಯಲ್ಲಿ ಫೇಲ್ | ವಿದ್ಯಾರ್ಥಿನಿ ಆತ್ಮಹತ್ಯೆ | ಮುಗಿಲು ಮುಟ್ಟಿದ ಹೆತ್ತವರ ಆಕ್ರಂಧನ
ಗೋನೂರು ಬಳಿಯ ಹೊಸ ಬೈಪಾಸ್ ರಸ್ತೆಯಲ್ಲಿ ಅಪಘಾತವಾಗಿ ಬಿದ್ದಿದ್ದರು ಎಂದು ಲೋಹಿತ್ ಎಂಬ ಯುವಕ ಜಿಲ್ಲಾ ಆಸ್ಪತ್ರೆಗೆ ಕರೆತಂದಿದ್ದ.
ಈ ಬಗ್ಗೆ ನೇತ್ರಾವತಿ ತಾಯಿ ತಿಪ್ಪಮ್ಮ ಲೋಹಿತ್ ಬಗ್ಗೆ ಅನುಮಾನ ವ್ಯಕ್ತಪಡಿಸಿ ದೂರು ದಾಖಲಿಸಿದ್ದರು.
ಇದನ್ನೂ ಓದಿ: 56 ಸಾವಿರ ದಾಟಿದ ಅಡಿಕೆ ರೇಟ್
ಈ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದಾಗ ಆಸ್ಪತ್ರೆಗೆ ಕರೆತಂದಿದ್ದ ಚಳ್ಳಕೆರೆ ತಾಲೂಕು ಓಬಯ್ಯನಹಟ್ಟಿ ಗ್ರಾಮದ ಲೋಹಿತ್ ಹಾಗೂ ನೇತ್ರಾವತಿ ಪರಸ್ಪರ ಪರಿಚಯವಿದ್ದು, ಆಗಾಗ ಫೋನಿನಲ್ಲಿ ಮಾತನಾಡುತ್ತಿದ್ದರು.
ಏ.6 ರಂದು ಚಿತ್ರದುರ್ಗದ ಬಾಪೂಜಿ ನಗರದಿಂದ ನೇತ್ರಾವತಿಯನ್ನು ಬೈಕಿನಲ್ಲಿ ಕೂರಿಸಿಕೊಂಡು ಎಲ್ಲಿಗೋ ಕರೆದುಕೊಂಡು ಹೋಗಿ ದುರುದ್ದೇಶದಿಂದ ಹೊಡೆದು ಕೊಲೆ ಮಾಡಿ ಸಾಕ್ಷ್ಯ ನಾಶ ಮಾಡಲು ಯತ್ನಿಸಿದ್ದಾನೆ ಎಂದು ದೂರು ದಾಖಲಾಗಿದೆ.
ಇದನ್ನೂ ಓದಿ: ದ್ವಿತೀಯ ಪಿಯುಸಿ ರಿಸಲ್ಟ್ | ಇವರೇ ನೋಡಿ ಜಿಲ್ಲೆಯ ಟಾಪರ್ಸ್ | ಜಿಲ್ಲೆಗೆ ಶೇ.59.87 ಫಲಿತಾಂಶ
ಏ.8 ರಂದು ನೀರ್ಥಡಿ ಬಳಿ ಲೋಹಿತ್‌ನನ್ನು ವಶಕ್ಕೆ ಪಡೆದುಕೊಂಡಿದ್ದು, ತನಿಖೆ ಮುಂದುವರೆದಿದೆ.
ಆರೋಪಿ ಲೋಹಿತ್ ಪತ್ತೆ ಮಾಡಿದ ಗ್ರಾಮಾಂತರ ಠಾಣೆ ಸಿಬ್ಬಂಧಿ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.