ಮುಖ್ಯ ಸುದ್ದಿ
ಜಿಲ್ಲಾ ಆಸ್ಪತ್ರೆ ಸಿ.ಟಿ.ಸ್ಕ್ಯಾನ್‌ಗೆ ಪರ್ಯಾಯ ವ್ಯವಸ್ಥೆ | ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ
CHITRADURGA NEWS | 29 MAY 2024
ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿರುವ ಸಿ.ಟಿ.ಸ್ಕ್ಯಾನ್ ಯಂತ್ರವು ಸಿಡಿಲು ಅವಘಡದಿಂದ ದುರಸ್ಥಿಯಲ್ಲಿದೆ.
ಆದ್ದರಿಂದ ರೋಗಿಗಳಿಗೆ ತೊಂದರೆಯಾಗದಂತೆ ತಾತ್ಕಾಲಿಕವಾಗಿ ನಗರದ ತುರುನೂರು ರಸ್ತೆಯ ಪೋರ್ಟ್ ಸಿಟಿ ಡಯೋಗ್ನಿಸ್ಟಿಕ್ ಸೆಂಟರ್, ಬೇಸ್‍ಮೆಂಟ್ ಆಫ್ ಸಿಎಂಎಚ್ ಅಸ್ಪತ್ರೆಯಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ.
ಕ್ಲಿಕ್ ಮಾಡಿ ಓದಿ: ಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಿ | ಜಿಪಂ ಸಿಇಒ ಎಸ್.ಜೆ.ಸೋಮಶೇಖರ್ ಸೂಚನೆ
ಈ ಖಾಸಗಿ ಸೆಂಟರ್‌ಗಳಲ್ಲಿ ಸರ್ಕಾರ ನಿಗಧಿಪಡಿಸಿದ ಶುಲ್ಕದಂತೆಯೇ ಸಿ.ಟಿ.ಸ್ಕ್ಯಾನ್ ಮಾಡಲಾಗುತ್ತದೆ. ಎಬಿ-ಎಆರ್‌ಕೆ ಅಡಿಯಲ್ಲಿ ನೋಂದಣಿಯಾದ ರೋಗಿಗಳಿಗೆ ಉಚಿತ ಸೌಲಭ್ಯ ನೀಡಲಾಗುತ್ತದೆ ಎಂದು ಜಿಲ್ಲಾ ಆಸ್ಪತ್ರೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ತಿಳಿಸಿದ್ದಾರೆ.