Connect with us

ಹತ್ತು ಲಕ್ಷ ದರೋಡೆ ಪ್ರಕರಣ | ಒಂದೇ ತಿಂಗಳಲ್ಲಿ ಆರೋಪಿ ಬಂಧನ | ಹೊಸದುರ್ಗ ಪೊಲೀಸರ ಕಾರ್ಯಾಚರಣೆ

ಹತ್ತು ಲಕ್ಷ ಕದ್ದು ಪರಾರಿಯಾಗಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕ್ರೈಂ ಸುದ್ದಿ

ಹತ್ತು ಲಕ್ಷ ದರೋಡೆ ಪ್ರಕರಣ | ಒಂದೇ ತಿಂಗಳಲ್ಲಿ ಆರೋಪಿ ಬಂಧನ | ಹೊಸದುರ್ಗ ಪೊಲೀಸರ ಕಾರ್ಯಾಚರಣೆ

ಚಿತ್ರದುರ್ಗ ನ್ಯೂಸ್.ಕಾಂ: ಹೊಸದುರ್ಗ ಪಟ್ಟಣದಲ್ಲಿ ಕಾರಿನ ಗಾಜು ಹೊಡೆದು ಹತ್ತು ಲಕ್ಷ ಕದ್ದು ಪರಾರಿಯಾಗಿದ್ದ ಇಬ್ಬರು ಆರೋಪಿಯನ್ನು ಪೊಲೀಸರು ಒಂದೇ ತಿಂಗಳಲ್ಲಿ ಬಂಧಿಸಿದ್ದಾರೆ.

ಹೊಸದುರ್ಗ ಪಟ್ಟಣದ ಹುಳಿಯಾರು ರಸ್ತೆಯಲ್ಲಿರುವ ಬ್ಯಾಂಕ್ ಬರೋಡಾ ಮುಂಭಾಗದಲ್ಲಿ 2023 ನವೆಂಬರ್ 22 ರಂದು ಸ್ವಿಫ್ಟ್ ಕಾರಿನ ಗ್ಲಾಸ್ ಹೊಡೆದು, ಬೈಕಿನಲ್ಲಿ ಬಂದಿದ್ದ ಇಬ್ಬರು ಕಳ್ಳರು ಹಣ ದೋಚಿದ್ದರು.

ಹೊಸದುರ್ಗ ತಾಲೂಕು ಲಕ್ಕಿಹಳ್ಳಿ ಗ್ರಾಮದ ಮುದ್ದಪ್ಪ ಎಂಬುವವರಿಗೆ ಸೇರಿದ ಹಣ ಕಳ್ಳತನವಾಗಿದ್ದು, ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ನಗದು ಮತ್ತು ಆರೋಪಿತರನ್ನು ಪತ್ತೆ ಮಾಡಲು ಹೊಸದುರ್ಗ ಪೊಲೀಸ್ ನಿರೀಕ್ಷಕರಾದ ಎನ್.ತಿಮ್ಮಣ್ಣ ಎನ್ ಹಾಗೂ ಸಿಬ್ಬಂದಿಯನ್ನು ಒಳಗೊಂಡ ತಂಡ ರಚನೆಯಾಗಿತ್ತು.

ತಾಂತ್ರಿಕ ಸಹಾಯದಿಂದ ಮೇಲ್ಕಂಡ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿ ಆಂಧ್ರಪ್ರದೇಶದ ನಲ್ಲೂರು ಜಿಲ್ಲೆ, ಕಾವಲಿ ತಾಲೂಕಿನ ತಿಪ್ಪ ಗ್ರಾಮದ ಮೀನು ವ್ಯಾಪಾರಿ 41 ವರ್ಷದ ಬಾನಾಲ ಇಚ್ಕೈಲ್ ಎಂಬಾತನನ್ನು ಬಂದಿಸಲಾಗಿದೆ.

ಇದನ್ನೂ ಓದಿ: ಕಾರಿನಲ್ಲಿದ್ದ ಹತ್ತು ಲಕ್ಷ ಕಳ್ಳತನ | ಕಾರಿನಿಂದ ಹಣ ಕದ್ದು ಬೈಕಿನಲ್ಲಿ ಪರಾರಿ

ಬಂಧಿತನಿಂದ ಪ್ರಕರಣಕ್ಕೆ ಸಂಬಂಧಪಟ್ಟಂತೆ 7.2 ಲಕ್ಷ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಪ್ರಕರಣದ ಆರೋಪಿಗಳು ಬ್ಯಾಂಕ್ ಹಾಗೂ ಹಣದ ವಹಿವಾಟು ನಡೆಯುವ ಸ್ಥಳಗಳಲ್ಲಿ ವಿಶೇಷವಾಗಿ ಬ್ಯಾಂಕ್‍ಗಳ ಬಳಿ ನಿಗಾ ವಹಿಸಿ 2 ಜನ ಬ್ಯಾಂಕಿನ ಒಳಗಡೆ ಹಾಗೂ 2 ಜನ ಮೋಟಾರ್ ಬೈಕಿನಲ್ಲಿ ಹೊರಗಡೆ ಇರುತ್ತಾರೆ.

ಬ್ಯಾಂಕಿನಿಂದ ಹೆಚ್ಚಿನ ಹಣ ತರುವ ವ್ಯಕ್ತಿಯನ್ನು ಹಿಂಬಾಲಿಸಿ ಆ ವ್ಯಕ್ತಿ ಸದರಿ ಹಣವನ್ನು ಕಾರಿನಲ್ಲಿ ಅಥವಾ ಬೈಕಿನಲ್ಲಿ ಇಟ್ಟಾಗ ಇವರೊಂದಿಗೆ ಬಂದ ಇನ್ನೊಬ್ಬ ವ್ಯಕ್ತಿ ಚಾಟರ್ ಬಿಲ್ ಅಥವಾ ರಬ್ಬರ್ ಬ್ಯಾಂಡ್ ಸಹಾಯದಿಂದ ಕಾರಿನ ಗ್ಲಾಸನ್ನು ಕಲ್ಲಿನಿಂದ ಹೊಡೆದು ಅಲ್ಲಿದ್ದ ಹಣವನ್ನು ಲಪಟಾಯಿಸುವುದು ವೃತ್ತಿಯಾಗಿರುತ್ತದೆ.

ಆರೋಪಿತರು ರೈಲ್ವೆ ಸ್ಟೇಷನ್ ಸುತ್ತ ಮುತ್ತ ತಮ್ಮ ಮನೆಗಳನ್ನು ಮಾಡಿಕೊಂಡು ಅಕ್ಕಪಕ್ಕದವರಿಗೆ ಸಂಶಯ ಬಾರದಂತೆ ತಾವು ರೈಲ್ವೆ ಕೆಲಸದವರು ಎಂಬಂತೆ ನಂಬಿಕೆ ಬರುವಂತೆ ಮಾಡುತ್ತಾರೆ.

ಸದರಿ ಪತ್ತೆ ಕಾರ್ಯ ಮಾಡಿದ ಹೊಸದುರ್ಗ ಪೊಲೀಸರ ತಂಡಕ್ಕೆ ಮಾನ್ಯ ಪೊಲೀಸ್ ಅಧೀಕ್ಷಕರು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.

ಸಾರ್ವಜನಿಕರಿಗೆ ಪೊಲೀಸ್ ಇಲಾಖೆ ಮನವಿ:

ಚಿತ್ರದುರ್ಗ ಜಿಲ್ಲಾ ಪೊಲೀಸ್ ವತಿಯಿಂದ ಸಾರ್ವಜನಿಕರಲ್ಲಿ ಮನವಿ ಮಾಡುವುದೇನೆಂದರೆ ತಾವು ಬ್ಯಾಂಕ್‍ಗಳಲ್ಲಿ ಹಣ ವಹಿವಾಟು ಮಾಡುವಾಗ ಹೆಚ್ಚು ಜಾಗರೂಕರಾಗಿರಬೇಕು ಮತ್ತು ಸುರಕ್ಷಿತರಾಗಿರಬೇಕು ಎಂದು ಮನವಿ ಮಾಡಿದ್ದಾರೆ.

Click to comment

Leave a Reply

Your email address will not be published. Required fields are marked *

More in ಕ್ರೈಂ ಸುದ್ದಿ

To Top
Exit mobile version