ಮುಖ್ಯ ಸುದ್ದಿ
ಐತಿಹಾಸಿಕ ನಗರ ಚಿತ್ರದುರ್ಗಕ್ಕೆ ಒಂದೇ ಸಿಟಿ ಬಸ್ | ಸಾರಿಗೆ ಸೌಲಭ್ಯಕ್ಕೆ ಡಾ.ಎಚ್.ಕೆ.ಎಸ್.ಸ್ವಾಮಿ ಮನವಿ
CHITRADURGA NEWS | 03 JUNE 2024
ಚಿತ್ರದುರ್ಗ: ಐತಿಹಾಸಿಕ ನಗರವೆಂದು ಹೆಸರುವಾಸಿಯಾಗಿರುವ ಚಿತ್ರದುರ್ಗ ನಗರದಲ್ಲಿ ಓಡಾಡಲು ಸಿಟಿ ಬಸ್ ಇಲ್ಲದೆ ವಿದ್ಯಾರ್ಥಿಗಳು, ಸಾರ್ವಜನಿಕರು ಪರದಾಡುವ ಪರಿಸ್ಥಿತಿ ಬಂದಿದೆ.
ಇದನ್ನೂ ಓದಿ: ಪರಿಸರ ದಿನಾಚರಣೆ ಸಾಂಕೇತಿಕವಾಗದಿರಲಿ | ಎಚ್.ಹನುಮಂತಪ್ಪ
ಹೌದು ನಗರದಲ್ಲಿ ಪ್ರತಿನಿತ್ಯ ಸಾವಿರಾರು ಜನರು ಸರ್ಕಾರಿ ಹಾಗೂ ಖಾಸಗಿ ಕಚೇರಿಗಳಿಗೆ, ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಹಾಗೂ ಜನರು ತಮ್ಮ ಕೆಲಸ ಕಾರ್ಯಗಳಿಗೆ ಓಡಾಡುತ್ತಾರೆ, ಆದರೆ ನಗರದಲ್ಲಿ ಸಿಟಿ ಬಸ್ ಇಲ್ಲದೆ ಪರದಾಡುವ ಪರಿಸ್ಥಿತಿ ಎದುರಾಗಿದೆ.
ಕೊರೋನಾ ಬರುವ ಮುಂಚೆ ನಗರದಲ್ಲಿ 15 ಸಿಟಿ ಬಸ್ ಗಳು ದಿನನಿತ್ಯ ಸಂಚರಿಸುತ್ತಿದ್ದವು, ಕೊರೋನಾ ಬಂದು ಹೋದ ಮೇಲೆ ಸಿಟಿ ಬಸ್ ಗಳ ಸಂಚಾರ ನಿಂತು ಹೋಗಿದೆ.
ಇದನ್ನೂ ಓದಿ: ವಯೋನಿವೃತ್ತಿ ಹೊಂದಿದ ಕೆ.ತಿಪ್ಪೇಸ್ವಾಮಿಯವರಿಗೆ ಬೀಳ್ಕೊಡುಗೆ
ಸಾರ್ವಜನಿಕರು ನಗರದಲ್ಲಿ ಸಿಟಿ ಬಸ್ ಬಿಡಲು ಪತ್ರಿಕೆಗಳಲ್ಲಿ, ಟಿವಿ ಮಾಧ್ಯಮಗಳಲ್ಲಿ ಇದರ ಬಗ್ಗೆ ವರದಿಯಾಗಿ, ಸಾರ್ವಜನಿಕರು ಕಚೇರಿಯಿಂದ ಕಚೇರಿಗೆ ಅಲೆದು, ಹತ್ತಾರು ಅರ್ಜಿಗಳನ್ನ ಸಲ್ಲಿಸಿ, ಕಳೆದ ವರ್ಷ ಒಂದೇ ಒಂದು ಸಿಟಿ ಬಸ್ಸನ್ನ ಪಡೆದುಕೊಂಡಿದ್ದರು.
ಸದ್ಯಕ್ಕೆ ಅ ಒಂದು ಸಿಟಿ ಬಸ್ ಬೆಳಿಗ್ಗೆ 10.30 ರಿಂದ ಮದ್ಯಾಹ್ನ 3 ಗಂಟೆಯ ವರೆಗೂ ಅಷ್ಟೇ ಸಂಚರಿಸಲಿದೆ.
ಒಂದೇ ಸಿಟಿ ಬಸ್ಸು ಇರುವುದರಿಂದ ದಿನನಿತ್ಯ ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ, ಕೆಲಸ ಕಾರ್ಯಗಳಿಗೆ ಹೋಗುವ ಸಾರ್ವಜನಿಕರಿಗೆ ಸರಿಯಾದ ಸಮಯಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ.
ಇದನ್ನೂ ಓದಿ: ಕೋಟೆನಾಡಿಗೆ ಕಾಲಿಟ್ಟ ಮುಂಗಾರು ಮಳೆ | ಕೃತಿಕೆಯ ನಂತರ ರೋಹಿಣಿಯ ಪ್ರೀತಿ | ಶನಿವಾರ ಎಲ್ಲೆಲ್ಲಿ ಎಷ್ಟು ಮಳೆ
ಸಂಚರಿಸುತ್ತಿದ್ದ ಒಂದು ಬಸ್ ಸಹ ಶಾಲಾ-ಕಾಲೇಜುಗಳಿಗೆ ರಜೆ ಇದೆ ಎಂದು ನೆಪವಡ್ಡಿ, ಕಳೆದ ಎರಡು ತಿಂಗಳು ರಸ್ತೆಯಿಂದ ಕಣ್ಮರೆಯಾಗಿತ್ತು. ಮತ್ತೆ ಎಲ್ಲಾ ಇಲಾಖೆಗಳಿಗೂ ಅರ್ಜಿ ಸಲ್ಲಿಸಿ ಅದೇ ಬಸ್ಸನ್ನು ಮತ್ತೆ ಬಿಡಿ ಎಂದು ಬೇಡಿಕೊಂಡಾಗ, ಆ ಬಸ್ಸಿನ ಸ್ಟೇರಿಂಗ್ ಕೆಟ್ಟಿದೆ, ಚಕ್ರ ತಿರುಗುವುದಿಲ್ಲ, ತಿರುವಿನಲ್ಲಿ ತೊಂದರೆಯಾಗುತ್ತಿದೆ ಎಂದು ಎರಡು ಮೂರು ತಿಂಗಳು ಸತಾಯಿಸಿ ರಿಪೇರಿ ಮಾಡಲು ಪ್ರಯತ್ನಿಸಿ ಸಾಧ್ಯವಾಗದಿದ್ದಾಗ ಇನ್ನೊಂದು ಹಸಿರು ಬಸ್ಸನ್ನ ಸಿಟಿ ಬಸ್ಸನ್ನಾಗಿ ಪರಿವರ್ತಿಸಿದ್ದಾರೆ.
ಒಂದು ಬಸ್ಸನ್ನ ನೆಚ್ಚಿಕೊಂಡು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ವೃದ್ಧರು, ದಿನಕೂಲಿ ಕಾರ್ಮಿಕರು, ಸ್ತ್ರೀಶಕ್ತಿ ಯೋಜನೆ ಅಡಿಯಲ್ಲಿ ಬರುವ ಮಹಿಳೆಯರು, ಓಡಾಡಿಕೊಂಡು, ಜೀವನ ನಿರ್ವಹಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಗರದ ತುಂಬೆಲ್ಲಾ ಹಸಿರು ಬಣ್ಣದ ಸಿಟಿ ಬಸ್ಸುಗಳು ಓಡಾಡುತ್ತಿರುವುದನ್ನು ನೋಡಿ, ಅಧಿಕಾರಿಗಳು ಚಿತ್ರದುರ್ಗದಲ್ಲಿ ಎಲ್ಲಾ ವ್ಯವಸ್ಥೆ ಸರಿ ಇದೆ ಎಂದು ತಪ್ಪು ನಂಬಿಕೆಯಿಂದ, ಜನರನ್ನ ಯ್ಯಾಮಾರಿಸಿ ಕಳುಹಿಸುತ್ತಿದ್ದಾರೆ. ಹಸಿರು ಬಣ್ಣ ಇರುವ ಎಲ್ಲಾ ಬಸ್ಸುಗಳು ಸಹ ಸಿಟಿ ಬಸ್ಸಗಳಲ್ಲ ಎಂಬುದು ಸತ್ಯ.
ಇದನ್ನೂ ಓದಿ: ಚಿತ್ರದುರ್ಗಕ್ಕೆ ಯೆಲ್ಲೊ ಅಲರ್ಟ್ | ಭಾರಿ ಮಳೆ ಸಾಧ್ಯತೆ
ಈ ಬಸ್ಸನ್ನೇ ನೆಚ್ಚಿಕೊಂಡು ಯಾರಾದರೂ ಶಾಲಾ-ಕಾಲೇಜುಗಳಿಗೆ ಹೋದರೆ, ಅವರು ಮತ್ತೆ ಬೇರೆ ವಾಹನ ಹಿಡಿದು ಮನೆಗೆ ವಾಪಸ್ ಬರಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕನಿಷ್ಠ ಪಕ್ಷ ನಗರ ಸಾರಿಗೆ ಎಂದರೆ 5 ರಿಂದ 6 ಆದರು ಸಿಟಿ ಬಸ್ಸುಗಳು ಅವಶ್ಯಕತೆ ಇದೆ.
ಒಂದು ಹೋದಾಗ ಇನ್ನೊಂದು ಹಿಂತಿರುಗಿ ಬರುವಂತಹ ಸಿಟಿ ಬಸ್ಸಿನ ವ್ಯವಸ್ಥೆ ಇದ್ದರೆ ಮಾತ್ರ, ಒಂದು ಬಸ್ ಕೈಕೆಟ್ಟರು ಸಹ ಇನ್ನೊಂದನ್ನು ನಂಬಿಕೊಂಡು ಜನ ಸಂಚಾರ ಮಾಡುತ್ತಾರೆ, ಹಾಗಾಗಿ ನಗರ ಸಾರಿಗೆ ಇಲಾಖೆ, ಜಿಲ್ಲಾಡಳಿತ ಇದರ ಬಗ್ಗೆ ಯೋಚಿಸಿ, ನಗರದ ನಾಗರಿಕರಿಗೆ ಕನಿಷ್ಠ ಪಕ್ಷ ಐದಾರು ಸಿಟಿ ಬಸ್ಸುಗಳನ್ನಾದರೂ ಬಿಡ್ಬೇಕು.
ಇದನ್ನೂ ಓದಿ: ವಿದ್ಯಾರ್ಥಿ ನಿಲಯಕ್ಕೆ ಅರ್ಜಿ ಆಹ್ವಾನ | ಉಚಿತ ವಸತಿ, ಊಟ
ನಗರದಲ್ಲಿ ಸಿಟಿ ಬಸ್ಸುಗಳು ಎಲ್ಲಿ ನಿಲ್ಲುತ್ತವೆ ಎಂಬುದೇ ಸಾರ್ವಜನಿಕರಿಗೆ ಅರ್ಥವಾಗದಂತಹ ವ್ಯವಸ್ಥೆ ಇದೆ, ಸಿಟಿ ಬಸ್ಸ್ ನಿಲ್ಲುವ ಜಾಗದಲ್ಲಿ ಒಂದು ಬೋರ್ಡ್ ಹಾಕಿಸಬೇಕು.
ಸಿಟಿ ಬಸ್ಸಿನ ಸಮಯ ಹೇಗಿರಬೇಕು ಅಂದರೆ ಬೆಳಗ್ಗೆ 8.00ಕ್ಕೆ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಅನುಕೂಲವಾಗಿರಬೇಕು ಸಂಜೆ 5.30 ರಿಂದ 6.30ಕ್ಕೆ ಬಿಟ್ಟಾಗ ವಾಪಸ್ ಕರೆ ತರುವಂಥ ವ್ಯವಸ್ಥೆಯಾಗಬೇಕು.
ಇದರ ಬಗ್ಗೆ ಅಧಿಕಾರಿಗಳು ಸಿಟಿ ಬಸ್ಸಿನಲ್ಲಿ ಒಮ್ಮೆ ಓಡಾಡಿ, ಅನುಭವ ತೆಗೆದುಕೊಂಡು, ಸಾರ್ವಜನಿಕರಿಗೆ ಮಾರ್ಗದರ್ಶನ ನೀಡಬೇಕೆಂದು ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು ಕರ್ನಾಟಕ ಸರ್ವೋದಯ ಮಂಡಳಿಯ ಜಿಲ್ಲಾಧ್ಯಕ್ಷ ಡಾ.ಎಚ್.ಕೆ.ಎಸ್.ಸ್ವಾಮಿ ಅವರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.