ಮುಖ್ಯ ಸುದ್ದಿ
ಸರಳ ಮದುವೆ ಆದರ್ಶದ ಮದುವೆ | ಡಾ.ಬಸವಕುಮಾರ ಸ್ವಾಮೀಜಿ


CHITRADURGA NEWS | 06 MAY 2025
ಚಿತ್ರದುರ್ಗ: ಸರಳ ಸಾಮೂಹಿಕ ವಿವಾಹವಾದರೆ ಅದು ಆದರ್ಶದ ಮದುವೆ ಅನಿಸಿಕೊಳ್ಳುತ್ತದೆ. ಇದನ್ನು ಪ್ರಪಂಚವೇ ಒಪ್ಪಿಕೊಳ್ಳುತ್ತದೆ ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ಹೇಳಿದರು.
Also Read: ಸಮಾಜದ ಹಿರಿಯರು, ಮುಖಂಡರು, ಭಕ್ತರಲ್ಲಿ ಶ್ರೀ ಶಾಂತವೀರ ಸ್ವಾಮೀಜಿ ಮನವಿ
ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿಂದು ನಡೆದ 35ನೇ ವರ್ಷದ 5ನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು,
ಶ್ರೀಮಂತರ ಮದುವೆಗಳಲ್ಲಿ ಪ್ರತಿಷ್ಠೆ ಎದ್ದುಕಾಣುತ್ತದೆ. ಇಂಥ ಕಾರ್ಯಕ್ರಮಗಳಲ್ಲಿ ಮದುವೆಗಳು ನಡೆದರೆ ಪೋಷಕರಿಗೆ ಸಾಲ ಮಾಡಲು ಅವಕಾಶವಿರುವುದಿಲ್ಲ. ಶ್ರೀಮಠವು ಯಾವುದೇ ಜಾತಿಗೆ ಸೀಮಿತವಾಗಿಲ್ಲ. ಶಾಂತವೀರ ಶ್ರೀಗಳ ಗದ್ದುಗೆ ಇರುವ ಜಾಗದಲ್ಲಿ ನೀವೆಲ್ಲ ವಿವಾಹವಾಗುತ್ತಿದ್ದೀರಿ. ಗುರುಗಳ ಆಶೀರ್ವಾದ ವಧು-ವರರ ಮೇಲೆ ಸದಾ ಇರುತ್ತದೆ ಎಂದರು.
ದಾವಣಗೆರೆ ವಿರಕ್ತಮಠದ ಡಾ.ಬಸವಪ್ರಭು ಸ್ವಾಮಿಗಳು ಮಾತನಾಡಿ, ಜೀವನ ಎಂದರೆ ಒಬ್ಬರಿಗೊಬ್ಬರು ಕುಸ್ತಿ ಹಿಡಿಯುವುದಲ್ಲ. ಗಂಡ ಹೆಂಡತಿ ವಿದ್ಯಾವಂತರಿರುತ್ತಾರೆ. ಪ್ರತಿಷ್ಠೆ ಅಹಂಕಾರದಿ0ದ ಎಷ್ಟೋ ಸಂಸಾರ ಮುರಿದುಬೀಳುವ ಘಟನೆಗಳು ಕಣ್ಣೆದೆರುಗಿವೆ.
ಸತಿ-ಪತಿ-ಕುಟುಂಬದ ಸದಸ್ಯರ ನಡುವೆ ಪ್ರೀತಿ ಇರಬೇಕು, ಇಲ್ಲವಾದರೆ ಮನಸ್ತಾಪಗಳಿಂದ ವಿಚ್ಛೇದನಕ್ಕೆ ದಾರಿಯಾಗುತ್ತದೆ. ಅನೇಕ ವಿದ್ಯಾವಂತರ ಜೀವನ ಅಧೋಗತಿಗೆ ಹೋಗುತ್ತಿದೆ. ಇಬ್ಬರ ಮಧ್ಯೆ ಅನುಮಾನ ಅಪನಂಬಿಕೆ ಮೂಡಬಾರದು. ಅವಕ್ಕೆ ಔಷಧಿ ಇಲ್ಲ. ಹಾಗಾಗಿ ಸಂಸಾರ ಸುಸೂತ್ರವಾಗಿ ನಡೆಯಬೇಕಾದರೆ ಅಂಥವುಗಳಿಗೆ ಅವಕಾಶ ಮಾಡಿಕೊಡಬಾರದು.
Also Read: ಜಿಲ್ಲೆಯಲ್ಲಿರುವ ಪಾಕ್ ಪ್ರಜೆಗಳನ್ನು ಹೊರಗೆ ಹಾಕಿ | ಬಿಜೆಪಿಯಿಂದ ಎಡಿಸಿಗೆ ಮನವಿ
ನಿಪ್ಪಾಣಿಯ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಮಾತನಾಡಿದರು. ಈ ವೇಳೆ 19 ಜೋಡಿಗಳ ವಿವಾಹ ನೆರವೇರಿಸಲಾಯಿತು.
ಜಮುರಾ ಕಲಾವಿದರಾದ ಉಮೇಶ್ ಪತ್ತಾರ್ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಚಿನ್ಮಯಾನಂದ ಸ್ವಾಗತಿಸಿದರು. ಟಿ.ಪಿ. ಜ್ಞಾನಮೂರ್ತಿ ನಿರೂಪಿಸಿದರು.
