Connect with us

    Nation; ಕೆಟ್ಟ ಗುಣ ಬಿಟ್ಟು ಉತ್ತಮ ರಾಷ್ಟ್ರ ನಿರ್ಮಾಣ ಮಾಡಬೇಕು | ಶ್ರೀ ಶಿವಲಿಂಗಾನಂದ ಸ್ವಾಮೀಜಿ 

    ಶ್ರೀ ಕಬೀರಾನಂದ ಆಶ್ರಮದಲ್ಲಿ ವಿಶ್ವ ಹಿಂದು ಪರಿಷದ್ ಸ್ಥಾಪನ ದಿನ, “ಷಷ್ಠಿಪೂರ್ತಿ ಸಮಾರೋಪ ಸಂಭ್ರಮದ ಧಾರ್ಮಿಕ ಸಭಾ ಹಾಗೂ ಶ್ರೀ ಕೃಷ್ಣನ ವೇಶಭೂಷಣ ಕಾರ್ಯಕ್ರಮ

    ಮುಖ್ಯ ಸುದ್ದಿ

    Nation; ಕೆಟ್ಟ ಗುಣ ಬಿಟ್ಟು ಉತ್ತಮ ರಾಷ್ಟ್ರ ನಿರ್ಮಾಣ ಮಾಡಬೇಕು | ಶ್ರೀ ಶಿವಲಿಂಗಾನಂದ ಸ್ವಾಮೀಜಿ 

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 02 SEPTEMBER 2024

    ಚಿತ್ರದುರ್ಗ: ನಮ್ಮಲ್ಲಿ ಕೆಟ್ಟ ಗುಣಗಳನ್ನು ದೂರ ಮಾಡುವುದರ ಮೂಲಕ ಉತ್ತಮವಾದ ರಾಷ್ಟ್ರ(nation)ವನ್ನಾಗಿ ಮಾಡಬೇಕಿದೆ ಎಂದು ಶ್ರೀ ಕಬೀರಾನಂದ ಆಶ್ರಮದ ಶ್ರೀ ಶಿವಲಿಂಗಾನಂದ ಮಹಾಸ್ವಾಮಿಗಳು ತಿಳಿಸಿದರು.

    ಕ್ಲಿಕ್ ಮಾಡಿ ಓದಿ: Minister Lakshmi Hebbalkar; ಜಿ.ಪಂ.ತಾ.ಪಂ ಚುನಾವಣೆಗೆ ಸಿದ್ದರಾಗಿ | ಕೈ ಕಾರ್ಯಕರ್ತರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕರೆ 

    ನಗರದ ಶ್ರೀ ಸದ್ಗುರು ಕಬೀರಾನಂದಾಶ್ರಮದ ಆವರಣದಲ್ಲಿ ವಿಶ್ವ ಹಿಂದು ಪರಿಷದ್ ಸ್ಥಾಪನ ದಿನ, “ಷಷ್ಠಿಪೂರ್ತಿ ಸಮಾರೋಪ ಸಂಭ್ರಮದ ಧಾರ್ಮಿಕ ಸಭಾ ಹಾಗೂ ಶ್ರೀ ಕೃಷ್ಣನ ವೇಶಭೂಷಣ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು,

    ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಸಂಸ್ಕಾರ ಹೆಚ್ಚಾಗಿದೆ ಇದರಿಂದ ಇಲ್ಲಿ ಇನ್ನು ಸಂಬಂಧಗಳು ಉಳಿದಿವೆ. ಮನೆಯಲ್ಲಿ ಪೊಷಕರಿಗೆ, ಶಾಲೆಯಲ್ಲಿ ಗುರುಗಳಿಗೆ ವಿಧೇಯರಾಗಿ ನಡೆಯಬೇಕಿದೆ. ನಮ್ಮ ಭಾರತ ದೇಶ ಶಾಂತಿಯುತವಾದ ದೇಶವಾಗಿದೆ ಇಲ್ಲಿ ಹಿಂಸೆಗೆ ಜಾಗ ಇಲ್ಲದೆ ಅಹಿಂಸೆಯಿಂದ ಎಲ್ಲವನ್ನು ಪಡೆಯಬಹುದಾಗಿದೆ. ವಿಶ್ವ ಹಿಂದೂ ಪರಿಷದ್ ದೇಶದಲ್ಲಿ ಹಿಂದುತನವನ್ನು ಕಾಪಾಡುವ ಕಾರ್ಯವನ್ನು ಮಾಡುತ್ತಿದೆ. ಇದಕ್ಕೆ ಎಲ್ಲರು ಕೈ ಜೋಡಿಸಬೇಕಿದೆ ಎಂದು ತಿಳಿಸಿದರು.

    ಕರ್ನಾಟಕ ದಕ್ಷಿಣ ಬಜರಂಗದಳ ಪ್ರಾಂತ ಸಂಯೋಜಕ ಪ್ರಭಂಜನ್ ಮಾತನಾಡಿ, ದೇಶದ ಬಗ್ಗೆ ಕಾಳಜಿ ವಹಿಸುತ್ತಾರೆ ಕೃಷ್ಣನ ವೇಷವನ್ನು ಹಾಕಿಸಿರುವ ತಾಯಂದಿರುಗಳು ಕೃಷ್ಣನ ಬಗ್ಗೆ ತಮ್ಮ ಮಕ್ಕಳಿಗೆ ತಿಳಿಸುವ ಕೆಲಸವನ್ನು ಮಾಡಿ, ಧರ್ಮವನ್ನು ನಾವುಗಳು ರಕ್ಷಣೆ ಮಾಡಿದರೆ ಅದು ನಮ್ಮನ್ನು ರಕ್ಷಣೆ ಮಾಡುತ್ತದೆ ಎಂದು ತಿಳಿಸಿದರು.

    ಟಾರ್ಗೆಟ್ ಯುವ ವೇದಿಕೆಯ ಅಧ್ಯಕ್ಷ ಸಿದ್ದರಾಜ್ ಜೋಗಿ ಮಾತನಾಡಿ, ದ್ವಾಪರಯುಗದಲ್ಲಿ ಶ್ರೀಕೃಷ್ಣ ತಿಳಿಸಿದ ತತ್ವಗಳು ಸಂದೇಶಗಳು ನಮ್ಮ ಬದುಕಿಗೆ ಮಾರ್ಗದರ್ಶನವಾಗಬೇಕಿದೆ. ದೇಶ ಮತ್ತು ಸಮಾಜದ ಸೇವೆಯಲ್ಲಿ ನೆಮ್ಮದಿಯನ್ನು ಕಾಣಬಹುದಾಗಿದೆ. ಪೋಷಕರು ತಮ್ಮ ಮಕ್ಕಳಿಗೆ ಆಂಕಗಳಿಸುವ ಯಂತ್ರಗಳನ್ನಾಗಿ ಮಾಡದೇ ಅವರಲ್ಲಿ ಸಂಸ್ಕಾರವನ್ನು ತುಂಬುವ ಕಾರ್ಯವನ್ನು ಮಾಡಬೇಕಿದೆ ಎಂದರು.

    ಕ್ಲಿಕ್ ಮಾಡಿ ಓದಿ: Th. Ra. Subbaraya; ತರಾಸು ರಂಗಮಂದಿರ ನವೀಕರಣಕ್ಕೆ 80 ಲಕ್ಷ ಅನುದಾನ | ಸಚಿವ ಡಿ.ಸುಧಾಕರ್

    ಕಾಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಶಾರದ ಬ್ರಾಸ್ ಬ್ಯಾಂಡ್‌ನ ಹಿರಿಯ ಸಂಗೀತ ಕಲಾವಿದರಾದ ಎಸ್.ವಿ. ಗುರುಮೂರ್ತಿ ವಹಿಸಿದ್ದರು.

    ಈ ವೇಳೆ ಯೋಗ ಆಚಾರ್ಯರು ಮತ್ತು ಚಿತ್ರದುರ್ಗ ಜಿಲ್ಲಾ ಯೋಗಾಸನ ಕ್ರೀಡಾ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷರಾದ ಎಲ್.ಎಸ್. ಚಿನ್ಮಯಾನಂದ. ವಿಗ್ರಹ ಶಿಲ್ಪಿಗಳಾದ ಕೀರ್ತಿ ನಂಜುಂಡಸ್ವಾಮಿ, ವಿಶ್ವ ಹಿಂದು ಪರಿಷದ್‌ನ ಚಿತ್ರದುರ್ಗ ನಗರ ಅಧ್ಯಕ್ಷರಾದ ಈ. ಅಶೋಕ್ ಕುಮಾರ್. ಭಾಗವಹಿಸಿದ್ದರು.

    ಇದೇ ಸಂದರ್ಭದಲ್ಲಿ ಮಕ್ಕಳು ಕೃಷ್ಣ ಮತ್ತು ರಾಧೆಯ ವೇಷಭೂಷಣವನ್ನು ಧರಿಸಿದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top