CHITRADURGA NEWS | 28 OCTOBER 2026
ಚಿತ್ರದುರ್ಗ: ಅಪಹರಿಸಿ ಕೊಲೆ ಮಾಡಿ ಸಾಕ್ಷ್ಯ ನಾಶಪಡಿಸಲು ಹೂತು ಹಾಕಿದ್ದ ಮೂವರಿಗೆ ಚಿತ್ರದುರ್ಗದ ಹೆಚ್ಚುವರಿ ಜಿಲ್ಲಾ ಮತ್ತು ಸಿವಿಲ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 2.40 ಲಕ್ಷ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.
ಹಳೆಯ ದ್ವೇಷದ ಕಾರಣಕ್ಕೆ ನಗರದ ಗುರು ಅಲಿಯಾಸ್ ಗುರುಕಿರಣ್ ಎಂಬುವವರನ್ನು ಅಪಹರಿಸಿ ಕೊಲೆ ಮಾಡಿ ಹೂತು ಹಾಕಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯ ತೀರ್ಪು ನೀಡಿದೆ.
ಇದನ್ನೂ ಓದಿ:ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆ | ಕೆ.ಎಂ.ಸುರೇಶ್ ಭರ್ಜರಿ ಗೆಲುವು
ನಗರದ ಭೋವಿ ಕಾಲೋನಿಯ ಚೆನ್ನಕ್ಕಿಹೊಂಡದ ನಿವಾಸಿಗಳಾದ ರಮೇಶ್, ಸೋಮಶೇಖರ್ ಹಾಗೂ ವಿರೂಪಾಕ್ಷ ಶಿಕ್ಷೆಗೆ ಒಳಗಾದವರು.
2023 ಮಾರ್ಚ್ 1 ರಂದು ಸಂಜೆ 7 ಗಂಟೆ ವೇಳೆಗೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಸಮೀಪದ ಚೆನ್ನಕ್ಕಿ ಹೊಂಡದ ರಸ್ತೆಯಲ್ಲಿ ರಮೇಶ ಅವರ ಮಗ ಗೋಪಿ ಮತ್ತು ಗುರು ನಡುವೆ ಜಗಳ ನಡೆದಿತ್ತು. ಈ ವೇಳೆ ಗುರು ಗೋಪಿಯ ಕಣ್ಣಿಗೆ ಹೊಡೆದು ಗಾಯಗೊಳಿಸಿದ್ದ. ಇದರಿಂದ ರಮೇಶ ಗುರುಕಿರಣ್ನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ.
ಇದನ್ನೂ ಓದಿ:ಮಾರುಕಟ್ಟೆ ಧಾರಣೆ | ಅಕ್ಟೋಬರ್ 28 | ರಾಗಿ, ಸೂರ್ಯಕಾಂತಿ ರೇಟ್ ಎಷ್ಟಿದೆ?
ಅದರಂತೆ 2023 ಏಪ್ರಿಲ್ 26 ರಂದು ರಾತ್ರಿ 9 ಗಂಟೆ ಸುಮಾರಿಗೆ ರಮೇಶ್ ತನ್ನ ಸಂಬಂಧಿಕರಾದ ವಿರೂಪಾಕ್ಷ ಹಾಗೂ ಸೋಮಶೇಖರ್ ಜೊತೆ ಆಟೋದಲ್ಲಿ ಮುರುಘರಾಜೇಂದ್ರ ಆಯಿಲ್ಮಿಲ್ ಸಮೀಪದ ಅಗಸನಹಳ್ಳಿ ಕ್ರಾಸ್ ಬಳಿಯಿದ್ದ ಗುರುಕಿರಣ್ ಸಂಪರ್ಕಿಸಿದ್ದು, ಈ ವೇಳೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಗಾಜಿನ ಬಾಟಲಿಯಿಂದ ಗುರು ತಲೆಗೆ ಹಲ್ಲೆ ಮಾಡಿದ್ದು, ಕೈಕಾಲು ಕಟ್ಟಿ ಆಟೋ ಮೂಲಕ ಕೆನ್ನೆಡಲು ಯರೇಹಳ್ಳಿ ನಡುವಿನ ಜೋಗಿಮಟ್ಟಿ ಮೀಸಲು ಅರಣ್ಯ ಪ್ರದೇಶದ ಮುಕ್ಕುರ್ತಿ ಹಳ್ಳದ ಬಳಿ ಗುರುಕಿರಣ್ ಮೇಲೆ ಮತ್ತೆ ಹಲ್ಲೆ ನಡೆಸಿ, ಬಲವಾಗಿ ಹೊಡೆದು ಕೊಲೆ ಮಾಡಿ, ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಮೃತದೇಹವನ್ನು ನೆಲದಲ್ಲಿ ಹೂಳಲಾಗಿತ್ತು ಎಂಬ ಅಂಶ ತನಿಖೆಯಿಂದ ಬಯಲಿಗೆ ಬಂದಿತ್ತು.
ಕೋಟೆ ಪೊಲೋಸ್ ಠಾಣೆ ಇನ್ಸ್ಪೆಕ್ಟರ್ ದೊಡ್ಡಣ್ಣ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದರು.
ಇದನ್ನೂ ಓದಿ:ಕಣಜ ಕಡಿತಕ್ಕೆ ಈ ಮನೆಮದ್ದುಗಳನ್ನು ಹಚ್ಚಿದರೆ ನೋವು ಕಡಿಮೆಯಾಗುತ್ತದೆಯಂತೆ
ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ವೀರಣ್ಣ ಸೋಮಶೇಖರ್ ಅವರು, ಬಿಎನ್ಎಸ್ 301, 364, 201 ಹಾಗೂ 34ರ ಅಡಿಯಲ್ಲಿ ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ಒಟ್ಟು 2.40 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕ ಶಂಶಿರ್ ಅಲಿಖಾನ್ ವಾದ ಮಂಡಿಸಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

