CHITRADURGA NEWS | 10 JUNE 2026
ಚಿತ್ರದುರ್ಗ: ಚಳ್ಳಕೆರೆ ಶಾಸಕ, ನಿಷ್ಠಾವಂತ ಕಾಂಗ್ರೆಸ್ಸಿಗ, ಸತತ ಮೂರು ಸಲ ಗೆದ್ದಿರುವ ಹ್ಯಾಟ್ರಿಕ್ ಸರದಾರ ಹಾಗೂ ಅಭಿವೃದ್ಧಿಯ ಹರಿಕಾರ ಎಂದೇ ಹೆಸರಾಗಿರುವ ಟಿ.ರಘುಮೂರ್ತಿ ಅವರಿಗೆ ಇಂದು 63ನೇ ವರ್ಷದ ಜನ್ಮ ದಿನಾಚರಣೆ.
ಇದೇ ವೇಳೆ ರಾಜ್ಯ ರಾಜಕೀಯದಲ್ಲಿ ಹಲವು ಬೆಳವಣಿಗೆಗಳು ನಡೆದಿದ್ದು, ಮುಖ್ಯಮಂತ್ರಿ ಗಾದಿಯಿಂದ ಸಿದ್ದರಾಮಯ್ಯ ನಿರ್ಗಮಿಸಿ, ಡಿ.ಕೆ.ಶಿವಕುಮಾರ್ ಪಟ್ಟದಲ್ಲಿದ್ದಾರೆ.
ಇದನ್ನೂ ಓದಿ:ಆದರ್ಶ ವಿದ್ಯಾಲಯ ಪ್ರವೇಶ ಪರೀಕ್ಷೆ | ಅರ್ಜಿ ಆಹ್ವಾನ
ಚಿತ್ರದುರ್ಗ ಜಿಲ್ಲೆಯಲ್ಲೂ ಉಸ್ತುವಾರಿ ಸಚಿವರಾಗಿದ್ದ ಡಿ.ಸುಧಾಕರ್ ಅಗಲಿದ್ದಾರೆ. ಸಚಿವ ಸಂಪುಟಕ್ಕೆ ಹಲವು ಹೊಸಬರು ಸೇರ್ಪಡೆ ಆಗುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಪಟ್ಟಿ ಹಿಡಿದು ದೆಹಲಿಗೆ ತೆರಳುತ್ತಿದ್ದಾರೆ.
ಈ ಹೊತ್ತಿನಲ್ಲಿ ಜನ್ಮ ದಿನಾಚರಣೆ ಆಚರಿಸಿಕೊಳ್ಳುತ್ತಿರುವ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಹಾಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬರ್ತ್ ಡೇ ಗಿಫ್ಟ್ ಕೊಡುತ್ತಾರಾ ಎನ್ನುವ ನಿರೀಕ್ಷೆ ಹೆಚ್ಚಾಗಿದೆ.
ಇದನ್ನೂ ಓದಿ:ಜೂನ್ ತಿಂಗಳ ಪಡಿತರ ಅಕ್ಕಿ ಬಿಡುಗಡೆ
ಟಿ.ರಘುಮೂರ್ತಿ ಅವರ ಬೆಂಬಲಿಗರು, ಅಭಿಮಾನಿಗಳಲ್ಲಿ ನಮ್ಮ ಸಾಹೇಬರಿಗೆ ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ ಎಂಬ ದೃಢ ವಿಶ್ವಾಸ ಬಂದಂತಿದೆ. ಈ ಕಾರಣಕ್ಕೆ ಚಿತ್ರದುರ್ಗ, ಚಳ್ಳಕೆರೆಯಲ್ಲಿ ಭರ್ಜರಿ ಸಂಭ್ರಮ ಮನೆ ಮಾಡಿದೆ. ಶಾಸಕರಿಗೆ ಅದ್ದೂರಿ ಜನ್ಮ ದಿನಾಚರಣೆ ಆಚರಿಸಲು ಫ್ಲೆಕ್ಸ್, ಜಾಹೀರಾತುಗಳ ಭರಾಟೆ ಜೋರಾಗಿದೆ.
ಈಗಷ್ಟೇ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಟಿ.ರಘುಮೂರ್ತಿ ಅವರು ಕೂಡಾ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ. ಪಕ್ಷದ ನಿಷ್ಟಾವಂತ, ಹ್ಯಾಟ್ರಿಕ್ ಶಾಸಕ, ಅಭಿವೃದ್ಧಿಯ ಹರಿಕಾರ, ವಿದ್ಯಾವಂತ ಎಂಬ ಟ್ಯಾಗ್ಗಳು ಅವರ ಬೆನ್ನಿಗಿವೆ.
ಇದನ್ನೂ ಓದಿ:ಅಡಿಕೆ ಧಾರಣೆ | 8 ಜೂನ್ | ಇಂದಿನ ಅಡಿಕೆ ರೇಟ್
ಇದರೊಟ್ಟಿಗೆ ಕಾಂಗ್ರೆಸ್ ಪಕ್ಷ ಕೊಟ್ಟಿರುವ ಟಾಸ್ಕ್ಗಳನ್ನು ಸಮರ್ಥವಾಗಿ ನಿಭಾಯಿಸಿ ಮೆಚ್ಚುಗೆ ಗಳಿಸಿಕೊಂಡಿದ್ದಾರೆ. ಭಾರತ್ ಜೋಡೋ ಯಾತ್ರೆ, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪಾದಯಾತ್ರೆ, 78 ಸಾವಿರ ಡಿಜಿಟಲ್ ಸದಸ್ಯತ್ವ ನೊಂದಣಿ ಸೇರಿದಂತೆ ಪಕ್ಷದ ಬಲವರ್ಧನೆಗೆ ಶ್ರಮ ಹಾಕಿದ್ದಾರೆ ಎನ್ನುವ ಶಕ್ತಿಯೂ ಅವರ ಜೊತೆಗಿದೆ.
ಯಾರು ಹಿತವರು ಈ ನಾಲ್ವರೊಳಗೆ:
ಜಿಲ್ಲೆಯಲ್ಲಿ ಐವರು ಕಾಂಗ್ರೆಸ್ ಶಾಸಕರು ಗೆದ್ದಿದ್ದು, ಈಗ ಡಿ.ಸುಧಾಕರ್ ಅಗಲಿಕೆಯಿಂದ ಈ ಸಂಖ್ಯೆ 4ಕ್ಕೆ ಇಳಿದಿದೆ. ಹಿರಿಯೂರಿಗೆ ಉಪಚುನಾವನೆ ನಡೆಯಬೇಕಿದೆ.
ಸದ್ಯ ಜಿಲ್ಲೆಯಲ್ಲಿರುವ ನಾಲ್ವರು ಕಾಂಗ್ರೆಸ್ ಶಾಸಕರ ಪೈಕಿ ಸಚಿವ ಸ್ಥಾನಕ್ಕೆ ಎಲ್ಲರೂ ಪ್ರಯತ್ನ ನಡೆಸಿದ್ದಾರೆ.
ಹೊಸದುರ್ಗ ಹಾಗೂ ಮೊಳಕಾಲ್ಮೂರು ಶಾಸಕರಾದ ಬಿ.ಜಿ.ಗೋವಿಂದಪ್ಪ, ಎನ್.ವೈ.ಗೋಪಾಲಕೃಷ್ಣ ಅವರು ಹಿರಿತನ ಹಾಗೂ ಹಲವು ಬಾರಿ ಗೆದ್ದಿರುವ ಮಾನದಂಡಗಳ ಅಡಿಯಲ್ಲಿ ಸಚಿವ ಸ್ಥಾನಕ್ಕೆ ಪ್ರಯತ್ನಿಸುತ್ತಿದ್ದಾರೆ.
ಇದನ್ನೂ ಓದಿ:ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ರೇಟ್..
ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ(ಪಪ್ಪಿ) ಹೊಸಬರಾಗಿದ್ದರೂ, ಯುವ ಕೋಟಾದಡಿ ಸಚಿವ ಸ್ಥಾನಕ್ಕೆ ಪ್ರಯತ್ನ ನಡೆಸಿರುವ ಚರ್ಚೆಗಳಿವೆ.
ಇನ್ನೂ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಸತತ ಗೆಲುವು., ಜಿಲ್ಲೆಯಲ್ಲಿ ಕಾಂಗ್ರೆಸ್ ನೆಲಕಚ್ಚಿದ್ದಾಗಲೂ ಒಬ್ಬರೇ ಗೆದ್ದು, ಪಕ್ಷದ ಹಿತ ಕಾಯುವಲ್ಲಿ ನೀಡಿರುವ ಕೊಡುಗೆ ಆಧಾರದಲ್ಲಿ ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ.
ಯಾವ ಪಟ್ಟಿಯಲ್ಲಿ ಯಾರು ಆಯ್ಕೆ ಆಗುತ್ತಾರೆ:
ಸಚಿವ ಸ್ಥಾನದ ಪಟ್ಟಿಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಹೈಕಮಾಂಡ್ ಹಾಗೂ ರಾಜ್ಯದ ನಾಯಕರೇ ಆಗಿರುವ ಮಲ್ಲಿಕಾರ್ಜುನ ಖರ್ಗೆ ಹೀಗೆ ಹಲವರ ಕೋಟಾ, ಪಟ್ಟಿಗಳು ಸಚಿವಾಕಾಂಕ್ಷಿಗಳನ್ನು ವಿಂಗಡಿಸಲಾಗಿದೆ.
ಇಷ್ಟು ನಾಯಕರಲ್ಲಿ ಯಾರು ಯಾರ ಪಟ್ಟಿಯಲ್ಲಿದ್ದಾರೆ ಎನ್ನುವ ನಿಗೂಢ ಅಂಶವೂ ಸೇರಿದೆ.ಕಾಂಗ್ರೆಸ್ ಹೈಕಮಾಂಡ್ ಕೋಟಾ, ಡಿಕೆಶಿ ಕೋಟಾ, ಸಿದ್ದರಾಮಯ್ಯ ಕೋಟಾ ಹಾಗೂ ಮಲ್ಲಿಕಾರ್ಜುನ ಖರ್ಗೆ ಕೋಟಾ ಹೀಗೆ ಯಾವ ಕೋಟಾದಲ್ಲಿ ಯಾರು ಸಚಿವರಾಗುತ್ತಾರೆ ಎನ್ನುವ ಕುತೂಹಲವೂ ಹೆಚ್ಚಾಗಿದೆ.
ಇದನ್ನೂ ಓದಿ:ಚಿತ್ರದುರ್ಗ ಜಿಲ್ಲೆಯನ್ನು ತಂಬಾಕು ಮುಕ್ತವಾಗಿಸಲು ಕೈಜೋಡಿಸಿ | ADC ಬಿ.ಟಿ.ಕುಮಾರಸ್ವಾಮಿ
ಒಟ್ಟಾರೆ ಜಿಲ್ಲೆಯ ಅಭಿವೃದ್ಧಿ ಹಿತದೃಷ್ಟಿ, ಭದ್ರಾ ಮೇಲ್ದಂಡೆ ಸಾಕಾರಾಗೊಳ್ಳುವ ಉದ್ದೇಶದಿಂದ ಜಿಲ್ಲೆಗೆ ಒಂದು ಸಚಿವ ಸ್ಥಾನ ಬೇಕೇ ಬೇಕು. ಅದೂ ಕೂಡಾ ಪಟ್ಟು ಹಿಡಿದು ಕೆಲಸ ಮಾಡುವಂಥವರೇ ಆದರೆ ಜಿಲ್ಲೆಯ ಜನರಿಗೆ ಅನುಕೂಲವಾಗಲಿದೆ ಎನ್ನುವುದು ಸಾರ್ವಜನಿಕ ವಲಯದ ಮಾತು..
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

