
CHITRAUDRGA NEWS | 17 APRIL 2026
ಚಿತ್ರದುರ್ಗ: ನಗರ ದೇವತೆ ಶ್ರೀ ರಾಜ ಉತ್ಸವಾಂಬ ಉಚ್ಚಂಗಿಯಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವ ಏ.21 ರಿಂದ ಮೇ 5 ರವರೆಗೆ ನಡೆಯಲಿದೆ.
ಇದನ್ನೂ ಓದಿ: ರೈತರ ಕೃಷಿ ಪಂಪ್‍ಸೆಟ್‍ಗೆ ಸೋಲಾರ್ ಅಳವಡಿಕೆ | ಕಂಪನಿಯಿಂದ ಸಿವಿಲ್ ಕಾಮಗಾರಿ ಪೂರ್ಣಗೊಳಿಸಿ | ರೈತರ ಮನವಿ

ಏ.21ರ ಮಂಗಳವಾರ ಬೆಳಗ್ಗೆ 8ಕ್ಕೆ ದೇವಿಗೆ ಅಭಿಷೇಕ ಮಹಾ ಮಂಗಳಾರತಿ ಹಾಗೂ ರಾತ್ರಿ 11.30ಕ್ಕೆ ಜಾತ್ರೆಗೆ ಸಾರು ಹಾಕಲಾಗುವುದು. ಏ.25ರ ಶನಿವಾರ ಬೆಳಗ್ಗೆ 11.ಕ್ಕೆ ಅಮ್ಮನವರಿಗೆ ಕಂಕಣಧಾರಣೆ, ಮದಲಿಂಗಿತ್ತಿಯ ಪೂಜೆ ಹಾಗೂ ಮಹಾಮಂಗಳಾರತಿ ನಂತರ ಅನ್ನಸಂತರ್ಪಣೆ. ರಾತ್ರಿ 8.30ಕ್ಕೆ “ಸಿಂಹ ಉತ್ಸವ”.
ಏ. 26ರ ಭಾನುವಾರ ಬೆಳಗ್ಗೆ 8.ಕ್ಕೆ ದೇವಿಗೆ ಅಭಿಷೇಕ ಮಹಾಮಂಗಳಾರತಿ ರಾತ್ರಿ 8.30ಕ್ಕೆ “ಸರ್ಪೋತ್ಸವ”. ಏ. 27ರ ಸೋಮವಾರ ಬೆಳಗ್ಗೆ 8.ಕ್ಕೆ ದೇವಿಗೆ ಅಭಿಷೇಕ ಮಹಾಮಂಗಳಾರತಿ ರಾತ್ರಿ 8.30ಕ್ಕೆ “ನವಿಲು ಉತ್ಸವ”. ಏ. 29ನೇ ಬುಧವಾರ ಬೆಳಗ್ಗೆ 8.ಕ್ಕೆ ದೇವಿಗೆ ಅಭಿಷೇಕ ಮಹಾಮಂಗಳಾರತಿ ಹಾಗೂ ಬೆಳಗ್ಗೆ 9.00 ಗಂಟೆಗೆ ದೇವಿಯು ಕೆಳಗಿಳಿದು ರಾಜಬೀದಿಯಲ್ಲಿ “ಕುದುರೆ ಉತ್ಸವ” ಮತ್ತು “ಅನ್ನಸಂತರ್ಪಣೆ”.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಏಪ್ರಿಲ್ 17 | ಮೆಕ್ಕೆಜೋಳ, ರಾಗಿ ರೇಟ್…
ಮೇ. 01ರ ಶುಕ್ರವಾರ ಬೆಳಗ್ಗೆ 8.ಕ್ಕೆ ದೇವಿಗೆ ಅಭಿಷೇಕ ಮಹಾಮಂಗಳಾರತಿ ಹೂವಿನ ಉಚ್ಚಾಯ “ರಥೋತ್ಸವ” ನಗರದ ರಾಜಬೀದಿಗಳಲ್ಲಿ ಭಕ್ತಾಧಿಗಳಿಂದ ಮೆರವಣಿಗೆ. ಮೇ. 02ನೇ ಶನಿವಾರ ಮಧ್ಯಾಹ್ನ 12.ಕ್ಕೆ ದೇವಿಗೆ ವಿಶೇಷ ಭಂಡಾರದ ಪೂಜೆ ನಂತರ ಪ್ರಸಾದ ವಿನಿಯೋಗ, ಸಂಜೆ 6. ಗಂಟೆಗೆ “ಸಿಡಿ ಉತ್ಸವ”. ಮೇ.03ರ ಭಾನುವಾರ ಬೆಳಗ್ಗೆ 8.ಕ್ಕೆ ದೇವಿಗೆ ಅಭಿಷೇಕ ಮಹಾಮಂಗ ಳಾರತಿ ರಾತ್ರಿ 9.ಕ್ಕೆ ದೇವಿಯ ಮಹಾ ಭಕ್ತರಾದ ಜೋಗಪ್ಪ ಮತ್ತು ಜೋಗಮ್ಮನವರಿಂದ “ಓಕುಳಿ”.
ಮೇ.05ರ ಮಂಗಳವಾರ ಬೆಳಗ್ಗೆ 8.ಕ್ಕೆ ದೇವಿಗೆ ಅಭಿಷೇಕ ಮಹಾಮಂಗಳಾರತಿ ಜಾತ್ರಾ ಮುಕ್ತಾಯವಾಗಲಿದೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
