ಸಂಡೆ ಸ್ಪಷಲ್
Kannada Novel: 21. ದುಷ್ಟನಿಂದ ದೂರ ಹೋದವರು

CHITRADURGA NEWS | 23 FEBRUARY 2025
ನಂದನ, ವಿಜಯ ಮತ್ತು ಜಯ ಸಂವತ್ಸರಗಳು ಜನ, ಜಾನುವಾರುಗಳಿಗೆ ಸಾಕಷ್ಟು ಪರಿತಾಪವನ್ನೇ ಕೊಟ್ಟಿದ್ದವು ಎಂಥಾ ಕ್ಲಿಷ್ಟ ಪರಿಸ್ಥಿತಿಯಲ್ಲೂ ಜನ ಬದುಕುತ್ತಾರೆ ಮತ್ತು ತಮ್ಮ ಜಾನುವಾರುಗಳನ್ನು ಬದುಕಿಸಿಕೊಳ್ಳುತ್ತಾರೆ.
ಹಿಂದಿನ ಸಂಚಿಕೆ: 1. ಹೂತಿಟ್ಟ ಚಿನ್ನಕ್ಕಾಗಿ ಹುಡುಕಾಟ

ವಿಜಯ ಸಂವತ್ಸರದ ಕೊನೆ ಭಾಗದಲ್ಲಿ ಮಳಿಯಪ್ಪಯ್ಯ ಪಂಚಾಂಗ ನೋಡಿ ಹೇಳಿದಂತೆ ಉತ್ತರೆ ಮಳೆ ಬಿದ್ದು ಹುಲ್ಲು ಬೀಜಗಳು ಮೊಳಕೆಯೊಡೆಯುವಂತೆ ಮಾಡಿತ್ತು. ರೈತರು ಹಿಂಗಾರಿ ಬೆಳೆಗಳ ಬೀಜಗಳನ್ನು ಬಿತ್ತಿದ್ದರು. ಬಿಳಿ ಜೋಳ ಕುಸುಮೆ ಬೀಜಗಳನ್ನು ಬಿತ್ತಿ ಬೆಳೆ ಬೆಳೆದುಕೊಂಡಿದ್ದರು. ಜಯ ಸಂವತ್ಸರದಲ್ಲೂ ಅತಂತ್ರದ ಮಳೆಗಾಲವೇ ಆಗಿ ಹೋಗಿತ್ತು.
“ಧನ್ಮದ ಊರಿಗೆ ಮಳೆ ಬಿದ್ದರೆ ಕರದೂರಲ್ಲಿ ಹಳ್ಳ ಹರಿಯಿತು” ಎಂಬಂತೆ ಬಸವನಹಳ್ಳ ತುಂಬಿ ಹರಿದಿತ್ತು.
ಗೊಂಚಿಕಾರರ ಹೊಲಗಳಲ್ಲಿ ನೀರು ಹರಡಿ ಹರಿದಂತೆ ಕಾಮಜ್ಜ ಒಡ್ಡು ಕಟ್ಟಿಸಿದ್ದರಿಂದ ಗೌಡರ ದೊಡ್ಡಕಟ್ಟೆ, ತಗ್ಗು ಮುಂತಾದುವುಗಳಲ್ಲಿ ನೀರು ಹರಡಿ ಹರಿದು ಹೊಲಗಳೆಲ್ಲಾ ಸಂತೃಪ್ತಿಯಾಗಿ ನೆನೆದಿದ್ದವು. ಹೀಗಾಗಿ ಒಂದು ಫಸಲು ಬೆಳೆದುಕೊಳ್ಳುವುದು ಖಾತ್ರಿಯಾಗಿತ್ತು.
ಹಿಂದಿನ ಸಂಚಿಕೆ: 2. ಕರುವುಗಲ್ಲು ನೆಟ್ಟು ಊರು ಕಟ್ಟಿದರು.
ಗೌಡ ಚಿಕ್ಕಪ್ಪ ನುಗ್ಗೆ ಮರದ ಅಸಿಗೆ ಹೆಸರಿನ ಹೊಲದಲ್ಲಿ ಉಳುಮೆ ಮಾಡುತ್ತಿದ್ದ. ದೊಡ್ಡುಂಬೊತ್ತಿಗೆ ಪತ್ನಿ ಭೈರನ್ನು ಬುತ್ತಿ ಹೊತ್ತು ತಂದಿದ್ದಳು. ಬೇಸಾಯ ನಿಲ್ಲಿಸಿ ಕೈ ತೊಳೆದು ಬುತ್ತಿ ಉಣ್ಣಲು ಕುಳಿತರೆ ಯಾಕೋ ‘ತಡಿ’ ಎಂದ ಹಾಗಾಗಿತ್ತು.
ಪತ್ನಿಯೂ ಮನೆಯಲ್ಲಿ ಉಣ್ಣದೆ ನಾಕೈದು ಜನರಿಗಾಗುವಷ್ಟು ಬಿಸಿ ಬಿಸಿ ರಾಗಿಮುದ್ದೆ ಮೊಳಕೆ ಹುರುಳಿಕಾಳು ಅಮ್ರ, ನವಣೆ ಅಕ್ಕಿ ಅನ್ನ, ಮಜ್ಜಿಗೆ, ಮಗಿಯಲ್ಲಿ ಬೆಣ್ಣೆ ತೇಲುಬಿಟ್ಟುಕೊಂಡು ಬುತ್ತಿ ಹೆಡಿಗೆ ಹೊತ್ತು ತಂದಿದ್ದಳು.
ಹಿಂದಿನ ಸಂಚಿಕೆ: 3. ಎಲ್ಲರೂ ಲಿಂಗವಂತರಾದರು
ಊಟಕ್ಕೆ ಬಡಿಸಿದ್ದ ಭೈರಮ್ಮ ಸಮಿಪದ ಮಂಗರಾಯನ ಕೆರೆ ಏರಿಯ ಕಡೆ ನೋಡುತ್ತಿರುವುದನ್ನು ಗಮನಿಸಿ ಗೌಡನೂ ಅತ್ತ ದಿಟ್ಟಿ ಹರಿಸಿದರೆ ಒಬ್ಬ ಗಂಡಸು ಒಬ್ಬ ಹೆಂಗಸು ಕೆಲವು ಮಕ್ಕಳು ಏರಿ ಇಳಿದು ಕೆರೆ ಒಡಕಿನಲ್ಲಿ ಕಣ್ಮರೆಯಾಗಿದ್ದರು ಗಂಡ ಹೆಂಡತಿ ಇಬ್ಬರೂ ಅತ್ತಲೇ ನೋಡುತ್ತಿರುವಾಗ ಮುಂದೆ ಗಂಡಸು, ಹಿಂದೆ ಹೆಂಗಸು ಹಿಂದೆ ಮೂರು ಚಿಕ್ಕ ಮಕ್ಕಳು ಕೆರೆ ಒಡಕಿನಲ್ಲಿ ಮುಖ ತೊಳೆದು ಒರೆಸಿಕೊಳ್ಳುತ್ತಾ ಇತ್ತಲೇ ಬರುತ್ತಿರುವುದು ಕಾಣಿಸಿತು ಮತ್ತು ಸಮಾಪಕ್ಕೆ ಬಂದಂತೆ ಅವರ ನಡಿಗೆಯಿಂದ ಪರಿಚಿತರಂತೆ ಕಂಡು ಬಂದಿದ್ದರು.
ಕೂಡಲೇ ಅವರ ಗುರುತು ಹಿಡಿದ ಭೈರಮ್ಮ “ಕೋಡವ್ವಾ ಏನಾತೇ ಯಾಕಿಂಗೆ ಈಟೊತ್ತಿಗೆಲೆ ಬಂದ್ರೇ” ಎಂದು ಕೂಗಿಕೊಂಡಳು. “ಅಕ್ಕಾ” ಎಂದು ಈಕೆಯೂ ಕೂಗಿಕೊಂಡಳು. ಜತೆಯಲ್ಲಿದ್ದ ಮೂವರು ಚಿಕ್ಕ ಹುಡುಗಿಯರೂ “ಅಮ್ಮಾ” ಎಂದು ಒರಲಿದ್ದರು.
ಹಿಂದಿನ ಸಂಚಿಕೆ: 4. ಮೈಲಾರಲಿಂಗಸ್ವಾಮಿ ಗುಡಿ ನಿರ್ಮಾಣ
ಭೈರಮ್ಮ ಮತ್ತು ಕೋಡವ್ವ ಕರೆಚಿಕ್ಕಯ್ಯನರೊಪ್ಪದ ಕಲ್ಲಣ್ಣಗಳ ಗುಂಟಪ್ಪನ ಮಕ್ಕಳಾಗಿದ್ದರು. ಭೈರಮ್ಮಳನ್ನು ಗೌನಳ್ಳಿ ಗೌಡ್ರ ಚಿಕ್ಕಪ್ಪನಿಗೆ ಕೊಟ್ಟು ಲಗ್ನ ಮಾಡಿದ್ದರೆ ತಂಗಿ ಕೋಡವ್ವಳನ್ನು ಬೀರೇನಹಳ್ಳಿ ಹೊನ್ನಮ್ಮದೇವಿ ಪೂಜಾರರ ಎರಡನೇ ತಮ್ಮ ಯರಗುಂಟಪ್ಪನಿಗೆ ಕೊಟ್ಟು ವಿವಾಹವಾಗಿತ್ತು.
ಬೆಳ್ಳಂಬೆಳಿಗ್ಗೆ ಬೀರೇನಹಳ್ಳಿಯನ್ನು ಉಟ್ಟ ಬಟ್ಟೆಯಲ್ಲೇ ತೊರೆದು ಬಂದಿದ್ದ ಯರಗುಂಟಪ್ಪ ಪತ್ನಿ ಕೋಡವ್ವ ಅವರ ಹಿರಿಮಗಳು ಹನ್ನೆರಡು ವರ್ಷದ ಈರಮ್ಮ ಹತ್ತು ವರ್ಷದ ಹೊನ್ನಮ್ಮ ಮತ್ತು ಎಂಟು ವರ್ಷದ ಲಿಂಗಮ್ಮ ಐದಾರು ಮೈಲಿ ದೂರ ನಡೆದು ದಣಿದಿದ್ದರು.
ಹಿಂದಿನ ಸಂಚಿಕೆ: 5. ಕೆನ್ನಳ್ಳಿಯ ದುರಂತ
ಕೆರೆ ಒಡಕಿನಲ್ಲಿ ನೀರು ಕುಡಿದು ಸ್ವಲ್ಪ ಸುಧಾರಿಸಿಕೊಂಡಿದ್ದರು. ಬಂದವರನ್ನು “ಯಾಕೆ ಇಂಗೆ ಈಟತ್ತಿಗೆಲೆ ಬಂದ್ರಿ” ಎಂದು ವಿಚಾರಿಸದೆ “ಮೊದ್ಲು ಊಟ ಮಾಡ್ರಿ ಎಲ್ಲಾರಿಗೂ ಬುತ್ತಿ ಐತೆ” ಎಂದು ಭೈರಮ್ಮ ಮತ್ತು ಚಿಕ್ಕಪ್ಪಗೌಡ ಕಕ್ಕುಲಾತಿಯಿಂದ ಒತ್ತಾಯಿಸಿದರು.
ಚಿಕ್ಕ ಮಕ್ಕಳ ಮುಖಗಳು ಬಾಡಿದ್ದವು. ಅವರನ್ನು ನೋಡಿದ ಭೈರಮ್ಮಳ ಕರುಳು ಚುರುಕ್ಕೆಂದಿತ್ತು. ಎಲ್ಲರೂ ನಿಧಾನವಾಗಿ ಬುತ್ತಿ ಉಂಡರು. ಊಟ ಮಾಡಿದ ಬಳಿಕ ಅಕ್ಕಪಕ್ಕ ಕುಳಿತುಕೊಂಡ ಚಿಕ್ಕಪ್ಪಗೌಡ ಯರಗುಂಟಪ್ಪ, ಭೈರಮ್ಮ ಮತ್ತು ಕೋಡವ್ವ ಮಾತಾಡಿದರು. ಯರಗುಂಟಪ್ಪ “ದುಷ್ಟರನ್ನ ಕಂಡ್ರೆ ದೂರ ಇರು ಅಂತಾರಲ್ಲಪ್ಪ ಹಂಗೆ ನಮ್ಮ ಅಣ್ಣ-ತಮ್ಮಗಳ ಬದುಕು ಮೂರಾಬಟ್ಟೆ ಆಯ್ತು, ಭೂಮಿ ಮ್ಯಾಲೆ ಯಾರ ಬದುಕೂ ಹಿಂಗಾಗಿರಕಿಲ್ಲ”.
ಹಿಂದಿನ ಸಂಚಿಕೆ: 6. ಎಲ್ಲೆಲ್ಲಿಂದಲೋ ಬಂದರು
“ಮನೆಗೆ ಹಿರೇ ಮನುಷ್ಯ ಹೆಂಗಿದ್ದಾನೋ ಮನೆ ಹಂಗಿರುತ್ತೆ. ನಾವು ಆರುಜನ ಅಣ್ಣತಮ್ಮಗಳು. ಹಿರಿಯಣ್ಣ ರುದ್ರಪ್ಪಗೆ ಒಬ್ಬ ಮಗ, ಒಬ್ಬು ಮಗಳು. ನನಿಗೂ ತಮ್ಮ ಹೊನ್ನಪ್ಪಗೂ ಮೂರ್ ಮೂರ್ ಜನ ಹೆಣ್ ಮಕ್ಕು, ನಿಜ್ಜಪ್ಪ ಮತ್ತೆ ಈರಪ್ಪಗೆ ಒಂದೊಂದು ಹೆಣ್ಣು ಮಕ್ಕು. ಕೊನೇ ತಮ್ಮ ಲಿಂಗಪ್ಪಗೆ ಇನ್ನು ಒಂದು ಗಂಡು ಕೂಸಾಗೈತೆ. ಹೊನ್ನಮ್ಮನ ಪೂಜಾರಿಕೆ ನಮ್ಮೆ. ದೇವ ಹೊಲ ನಮ್ಮ ಹೊಲಗಳ ಮಾಡಿಕೆಂಡು ಸುಖವಾಗಿದ್ವಿ. ನಮ್ಮಣ್ಣಂದು ಬಾಳ
ನಮ್ಮಣ್ಣ ಕರಿಮುದ್ದನಟ್ಟಿ ನರಸಮ್ಮನ ಸವಾಸ ಮಾಡಿದ್ದ. ಈಯಮ್ಮನ ಸವಾಸದಾಗೆ ಬೀರೇನಳ್ಳಿ ಐಗಳಟ್ಟಿ ಈರಭದ್ರಯ್ಯನ್ನ ಎದುರಾಕ್ಕೊಂಡ. ನಮ್ಮಣ್ಣನ ಇದ್ದ ಒಬ್ಬ ಮಗ ಇದ್ದಕ್ಕಿದ್ದಂಗೆ ಸತ್ತೋದ. ಈರಭದ್ರಯ್ಯನೇ ಸಾಯಿಸಿದ್ದ ಅಂತ ಗುಲ್ಲೆದ್ದಿತ್ತು. ಇನ್ನ ಇಲ್ಲಿ ಇರಾಕಾಗಲ್ಲ ಅಯ್ತ ಇದ್ದೊಬ್ಬ ಮಗಳನ್ನ ಕರಕಂಡು ಹೊಸದುರ್ಗ ತಾಲೋಕು ಗುಡ್ಡದನೇರಲಕೆರೆ ಹತ್ರದ ತಾರಿಕೆರೆ ಲಕ್ಷ್ಮೀದೇವರಳ್ಳಿಗೋದ.
ಹಿಂದಿನ ಸಂಚಿಕೆ: 7. ಊರು ತೊರೆದು ಬಂದವರು
ನಮ್ಮಣ್ಣ ನಿಜ್ಜಪ್ಪ., ಈರಪ್ಪರ ಪೈಕಿ ಒಬ್ಬಾತ ರಾಮಜ್ಜನಳ್ಳಿ ಕಾವಲಿಗೆ, ಇನ್ನೊಬ್ಬಾತ ಕೆಂಕೆರೆಗೋದ. ಹೊನ್ನಪ್ಪ ಇದ್ದೊಬ್ಬ ಮಗಳ ಜತೆ ನೇರಲಕೆರೆಗೋದ. ಇದ್ದೊಬ್ಬ ತಂಗಿ ಚಿಕ್ಕವ್ವನ್ನ ಕರ್ಪೂರದಕಟ್ಟೆಗೆ ಕೊಟ್ಟಿದ್ದಿ”.
“ಇಲ್ಲೆಲ್ಲೂ ಹತ್ರ ಇರಬಾರು. ಇದ್ರೆ ಈ ದುಷ್ಟ ಗುಂಡ್ರಗೋವಿ ಅಯ್ಯಪ್ಪನ ಉಪದ್ರವ ತಡಕಳಕಾಗಲ್ಲ ಅಮ್ಮ ದೂರ ದೂರ ಹೋಗಿ ಬಿಟ್ಟು. ನನಿಗೂ ಮೂರು ಹೆಣ್ಮಕ್ಕಳಿದ್ದಾರೆ. ಹೊನ್ನಮ್ಮ ನಮ್ಮನ್ನ ಕಾಯ್ತಾಳೇ ಅಂಟ್ಕಂಡು ಇರೋ ಕಾಲ ಇದಲ್ಲ, ಅತ್ತ ಹೋದ ದುಡ್ಡಿಗೆ ಎರೆ ಹೊಲ ಮಾರಕಂಡು ಹೊಳ್ ಬಂದ್ವಿ, ಕೋಡವ್ವ ಅಕ್ಕಯ್ಯರೂರು ಗೌನಳ್ಳಿಗೇ ಹೋಗಾನಾಂದ್ಲು.
ಹಿಂದಿನ ಸಂಚಿಕೆ: 8. ಮೋಜಣಿಕೆ ಮಾಡಿದರು
ಆಯ್ತು ಎಲ್ಲಿಗೋದ್ರೂ ಯಾರಿಗೂ ಹೊರೆಯಾಗದಂಗೆ ಸ್ವತಂತ್ರ ಜೀವನ ಮಾಡಬೇಕು ಅಂದ್ಯಂಡು ಬೆಳಗೀಲೆ ಎದ್ದು ಹೊಲ್ಡ್ ಬಂದ್ವಿ” ಯರಗುಂಟಪ್ಪ ನಿಧಾನವಾಗಿ ತಿಳಿಸಿದ.
ಭೈರಮ್ಮ. ಕೋಡವ್ವ ಮತ್ತು ಹೆಣ್ಣು ಮಕ್ಕಳು ಮದ್ಯಾಹ್ನ ಮನೆಗೆ ಬಂದರೆ ಹೊತ್ತು ಮಾರುದ್ದ ಇರುವಾಗ ಚಿಕ್ಕಪ್ಪಗೌಡ, ಯರಗುಂಟಪ್ಪ ಗುಡಿಸಲು ನಿರಿಸಲು ಕೆಲವು ಗಳು ಗೂಟಗಳನ್ನು ಎತ್ತಿನ ಬಂಡಿಯಲ್ಲಿ ಹೇರಿಕೊಂಡು ಬಂದರು. ಹಿರಿಯ ಗೌಡರ ಸಂಗಡ ಗುಡಿಸಲು ನಿರಾಣ ಕುರಿತು ಚರ್ಚಿಸಿ ತಮ್ಮ ದನದ ಮನೆಯ ಇನ್ನೊಂದು ಮಗ್ಗುಲಿಗೆ ಊರ ಬಾವಿಗೆ ಸಮಿಪವಾಗಿ ಕರುವುಗಲ್ಲ ಎದುರಿಗೆ ಕಟ್ಟಲು ತೀರಾನಿಸಿದರು.
ಹಿಂದಿನ ಸಂಚಿಕೆ: 9. ಊರಿಗೊಬ್ಬ ಅಕ್ಕಸಾಲಿಯ ಆಗಮನ
ಮೊದಲನೇ ದಿನ ಚಿಕ್ಕಪ್ಪ, ಯರಗುಂಟಪ್ಪರ ಜತೆಗೆ ಯಜಮಾನಪ್ಪರ ಸಿಲ್ಲಿಂಗಪ್ಪನೂ ಸೇರಿ ಪದ್ದು ತೋಡಿ ಗಳಗಳನ್ನು ನಿಲ್ಲಿಸಿದರು. ಸಂಜೆ ಊರಜನ ನೀರಿಗೆ ಹೋಗುವವರು ಬರುವವರು ‘ಅಗಾ ಇಲ್ಯಾರೋ ಗುಡ್ಡಾಕ್ಕಾ ಐದಾರೆ’ ಅಂದುಕೊಂಡಿದ್ದರು. ಜಂಗಮಯ್ಯರು ಬಂದು ನೋಡಿ, ಯಾರು, ಏನು ಎತ್ತ ಎಂದು ವಿಚಾರಿಸಿಕೊಂಡಿದ್ದರು.
ಮೂರು ದಿನದಲ್ಲಿ ಗುಡಿಸಲು ನಿರಾಣವಾಗಿ ಅವರಲ್ಲಿ ಯರಗುಂಟಪ್ಪ, ಕೋಡವ್ವ, ತಮ್ಮ ಮೂರು ಹೆಣ್ಣು ಮಕ್ಕಳೊಂದಿಗೆ ವಾಸ ಮಾಡತೊಡಗಿದರು. ಕೆಲವೇ ದಿನಗಳಲ್ಲಿ ಯರಗುಂಟಪ್ಪ ಒಣಮೆಣಸಿನಕಾಯಿ, ಹುಣಸೆಹಣ್ಣು ವ್ಯಾಪಾರ ಮಾಡತೊಡಗಿದ. ಇದೇ ವ್ಯಾಪಾರ ಮಾಡುತ್ತಿದ್ದ ದಾಸಣ್ಣ ಯಾಕೋ ಗೌನಳ್ಳಿಗೆ ಬರುತ್ತಿರಲಿಲ್ಲ.
ಹಿಂದಿನ ಸಂಚಿಕೆ: 10. ಹೊಸ ಬಂಡಿಗಳ ಆಗಮನ
ಈ ಮಧ್ಯೆ ಯರಗುಂಟಪ್ಪರ ಹಿರಿಯಣ್ಣ ರುದ್ರಣ್ಣ ತನ್ನ ಏಕ ಮಾತ್ರ ಪುತ್ರಿ ಹೊನ್ನಮ್ಮಳನ್ನು ದೂರದ ಗುಡ್ಡದ ನೇರಲಕೆರೆ ಬಳಿಯ ಲಕ್ಷ್ಮೀದೇವರ ಹಳ್ಳಿಯ ಗೌಡ ಸಿದ್ದಪ್ಪನಿಗೆ ಕೊಟ್ಟು ಲಗ್ನ ಮಾಡಲು ನಿಶ್ಚಯಿಸಿರುವುದಾಗಿ ತಿಳಿಸಿ ಲಗ್ನಕ್ಕೆ ಆಗಮಿಸಿ ಆಶೀಯದಿಸಲು ತಮ್ಮಂದಿರಿಗೆಲ್ಲಾ ಹೇಳಿ ಕಳಿಸಿದ್ದ. ಅದರಂತೆ ಅಣ್ಣಂದಿರು ಹೊನ್ನಪ್ಪ, ನಿಜ್ಜಪ್ಪ, ಈರಪ್ಪ ಮತ್ತು ಯರಗುಂಟಪ್ಪ ತಮ್ಮ ಲಿಂಗಪ್ಪ ಅಕ್ಕ ಚಿಕ್ಕಮ್ಮ ಎಲ್ಲರೂ ಭಾಗವಹಿಸಿದ್ದರು.
ಹೊನ್ನಮ್ಮಳ ಲಗ್ನವಾಗಿ ಕೆಲವೇ ದಿನಗಳ ಬಳಿಕ ತನಗೆ ಸಹಾಯಕಳಾಗಿ ಯರಗುಂಟಪ್ಪರ ಕಿರಿಯ ಪುತ್ರಿ ಲಿಂಗಮ್ಮಳನ್ನು ಲಕ್ಷ್ಮೀದೇವರ ಹಳ್ಳಿಗೆ ಕರೆಸಿಕೊಂಡಿದ್ದಳು.
ಹಿಂದಿನ ಸಂಚಿಕೆ: 11. ಬಂಡಿ ತಂದ ಬದಲಾವಣೆ
ಈ ಪೋರಿ ತನಗೆ ಹನ್ನೆರಡು ವರ್ಷಗಳು ತುಂಬುವವರೆಗೂ ಲಕ್ಷ್ಮೀದೇವರಹಳ್ಳಿ ತಾರಿಕೆರೆ ಅತ್ತೆಮ್ಮ ಚಿಕ್ಕಮ್ಮಳ ಊರು ಕರ್ಪೂರದಕಟ್ಟೆ ಕೆಲವು ದಿನಗಳ ನಂತರ ಗೌಡಸಿದ್ದವರ ಗೃಹ ಜವಾಬ್ದಾರಿ ಹೊತ್ತಿದ್ದ ರುದ್ರಜ್ಞರ ತೀರಾನದಂತೆ ಗುಡ್ಡದ ನೇರಲಕೆರೆಯಲ್ಲಿ ಗೃಹ ನಿರಾಣ ಮಾಡಿ ಅಲ್ಲಿಗೆ ಅವರು ಸ್ಥಳಾಂತರಗೊಳ್ಳುವ ತನಕ ಅಲ್ಲಿದ್ದಳು.
ಸತ್ತವರ ಮಕ್ಕಳು ಇದ್ದವರ ಕೈಯೊಳಗೆ:
ಚಿಕ್ಕಪ್ಪ ಗೌಡ ಪ್ರತಿದಿನ ಬೆಳಿಗ್ಗೆ ದನದ ಮನೆಗೆ ಬಂದು ಆಕಳ ಹಾಲು ಕರೆದುಕೊಂಡಾದ ಬಳಿಕ ಜಂಗಮಯ್ಯರಿಗೆ ತಂಬಿಗೆ ತುಂಬಾ ನೊರೆಹಾಲು ಕೊಡುತ್ತಿದ್ದ ರೀತಿಯಲ್ಲಿಯೇ ಪತ್ನಿಯ ತಂಗಿ ಕೋಡವ್ವಳ ಮಕ್ಕಳಿಗೂ ಒಂದು ತಂಬಿಗೆ ನೊರೆಹಾಲು ನೀಡುತ್ತಿದ್ದರು.
ಹಿಂದಿನ ಸಂಚಿಕೆ: 12. ಜಂಗಮಯ್ಯರ ಆಗಮನ
ಕೋಡವ್ವನ ಮಕ್ಕಳು ಎಲ್ಲರೊಂದಿಗೆ ಸಲೀಸಾಗಿ ಬೆರೆತು ಬದುಕನ್ನು ಹಸನುಗೊಳಿಸಿಕೊಂಡಿದ್ದರು. ಪಕ್ಕದ ಜಂಗಮಯ್ಯರ ಮನೆಯ ಹೆಣ್ಣು ಮಕ್ಕಳೊಂದಿಗೆ ಮತ್ತು ಅವರ ಪುಟ್ಟ ಮಕ್ಕಳೊಂದಿಗೆ ಸರಸದಿಂದಿರುತ್ತಿದ್ದರು.
ಯರಗುಂಟಪ್ಪ ಕೆಲವೊಮ್ಮೆ ಕುಂಚಿಟಿಗರ ಜೋಗಪ್ಪನ ಸಂಗಡ ಸೀರಾ ಸಂತೆಗೂ ಹೋಗಿ ಹುಣಿಸೆ ಹಣ್ಣು ಒಣ ಮೆಣಸಿನಕಾಯಿ ವ್ಯಾಪಾರ ಮಾಡಿ ಬರುತ್ತಿದ್ದರು. ಒಮ್ಮೆ ಜೋಗಪ್ಪ ಗಾಡಿ ನಡೆಸುತ್ತಿದ್ದ. ಯರಗುಂಟಪ್ಪ ತುಂಬಿದ ಗಾಡಿಯ ಮೇಲೆ ಕುಳಿತು ಜೋಗಪ್ಪನ ಸಂಗಡ ಮಾತಾಡುತ್ತಾ ದಾರಿಯ ಬಗ್ಗೆ ಎಚ್ಚರಿಕೆ ಕೊಡುತ್ತಿದ್ದ.
ಹಿಂದಿನ ಸಂಚಿಕೆ: 13. ಮತ್ತೆರಡು ಬಂಡಿ ತಂದರು
ಹೀಗಿರುವಾಗ ತೂಕಡಿಸಿದ ಜೋಗಪ್ಪ ತುಂಬಿದ ಗಾಡಿಯನ್ನು ಹಾದಿ ಪಕ್ಕದ ಗುಂಡಿಗೆ ಕೆಡವಿದ್ದ. ಈ ಅಪಘಾತದಲ್ಲಿ ಯರಗುಂಟಪ್ಪನು ಗುಂಡಿಯಲ್ಲಿ ಬಿದ್ದು ತನ್ನ ಸೊಂಟದ ಮೂಳೆ ಮುರಿದು ಮೂರ್ಛ ಹೋಗಿದ್ದ. ಇಂಥವನನ್ನು ಗೌನಹಳ್ಳಿಗೆ ತರುವ ಬದಲು ಬೀರೇನಹಳ್ಳಿಗೆ ಒಯ್ದು ಹೊನ್ನಮ್ಮನ ಪೂಜಾರರ ಮನೆ ಬಾಗಿಲ ಕಟ್ಟೆಯ ಮೇಲೆ ಹೊತ್ತಾಕಿ ಜೋಗಪ್ಪ ಸೀರ್ಯ ಸಂತೆಗೋಗಿದ್ದುದಲ್ಲದೆ ಮಾಲು ಮಾರಿದ ರೊಕ್ಕವನ್ನೂ ಕೊಡದೆ ಲಪಟಾಯಿಸಿದ್ದ.
ಬಿದ್ದ ಎರಡೇ ದಿನದಲ್ಲಿ ಯರಗುಂಟಪ್ಪ ಮರಣಿಸಿದ್ದ. ಗೌನಳ್ಳಿಯಿಂದ ಓಡೋಡಿ ಬಂದ ಮಡದಿ, ಮಕ್ಕಳು ಚಿಕ್ಕೇಗೌಡರು ಪತ್ನಿ ಭೈರಮ್ಮ ಮತ್ತೆಲ್ಲರಿಗೆ ಹೃದಯಾಘಾತದಷ್ಟು ಆಘಾತವಾಗಿತ್ತು. ಯಾರನ್ನು ದೂರುವುದು. ಎಲ್ಲಾ ಅಪದ್ಧ ನುಡಿಯುವವರೆ. ಹೀಗೆ ಯರಗುಂಟಪ್ಪನ ಪತ್ನಿ ಮತ್ತು ಮಕ್ಕಳು ಅನಾಥರಾದರು. ಅವರನ್ನು ಕೈಲಿಡಿದು ಸಾಕಿದವರು ಗೌಡ್ರ ವಂಶಸ್ಥರು.
ಹಿಂದಿನ ಸಂಚಿಕೆ: 14. ಗೌನಳ್ಳಿ ಬದುಕಿನಲ್ಲಿ ಬಂಡಿಗಳ ಪಾತ್ರ
ಕೋಡವ್ವ ಮತ್ತು ಆಕೆಯ ಮಕ್ಕಳು, ದೊಡ್ಡಮ್ಮ ಭೈರಮ್ಮ ಆಕೆಯ ಯಜಮಾನು ಚಿಕ್ಕೇಗೌಡ್ರು ಅವರ ಮಕ್ಕಳು ಸಿದ್ದಯ್ಯ ಮತ್ತು ಹೆಂಜೇರಪ್ಪ ಅವರ ಆಸರೆಯಲ್ಲಿ ಸುಖವಾಗಿ ಬೆಳೆದುದಲ್ಲದೆ ಉತ್ತಮಸ್ತರಿಗೆ ಕೊಟ್ಟು ಲಗ್ನ ಮಾಡಿಸಿದರು. ಹಿರಿಮಗಳು ಈರಮ್ಮಳನ್ನು ಅವರ ನಿಕಟ ಬಂಧು ಕರೇಚಿಕ್ಕಯ್ಯನರೊಪ್ಪದ ಕಲ್ಲಣ್ಣಗಳ ಗುಂಟಪ್ಪರ ಜೇಷ್ಠ ಪತ್ರ ಸಿದ್ದಪ್ಪನಿಗೆ ಕೊಟ್ಟು ಲಗ್ನ ಮಾಡಿದರು. ಎರಡನೇ ಮಗಳು ಹೊನ್ನಮ್ಮಳನ್ನು ಗೌನಳ್ಳಿಯ ದೊಡ್ಡರಂಗಪ್ಪರ ಜೇಷ್ಠ ಪುತ್ರ ಹೊರಕೇರಪ್ಪನಿಗೆ ಕೊಟ್ಟು ವಿವಾಹ ಮಾಡಿದರು.
ಕಿರಿಯ ಪುತ್ರಿ ಲಿಂಗಮ್ಮಳನ್ನು ಗೌನಳ್ಳಿ ಗೊಂಚಿಕಾರ ಬಸಯ್ಯನ ಮಗ ಶಿದ್ದಯ್ಯನಿಗೆ ಕೊಟ್ಟು ವಿವಾಹ ಮಾಡಿದರು. ಮೂರು ಜನ ಅಕ್ಕ ತಂಗಿಯರು ಕಾಲಾನುಕ್ರಮದಲ್ಲಿ ಗೌನಹಳ್ಳಿಯಲ್ಲಿಯೇ ವಾಸಿಸಿದ್ದರು.
ಹಿಂದಿನ ಸಂಚಿಕೆ ಓದಿ: 15.ಹಿರೇ ಬಡಗಿ ಗೌನಹಳ್ಳಿಗೆ ಬಂದರು.
ಹಿಂದಿನ ಸಂಚಿಕೆ ಓದಿ: 16. ಬಡಗಿ ಕಂಡ ಗೌನಳ್ಳಿ
ಹಿಂದಿನ ಸಂಚಿಕೆ ಓದಿ: 17. ಕೊಳ್ಳಿ ಇಕ್ಕಿದರು
ಹಿಂದಿನ ಸಂಚಿಕೆ ಓದಿ: 18 ಕಾಮಜ್ಜ ಒಡ್ಡು ಕಟ್ಟಿದ
